ಅಮೃತಧಾರೆಯಲ್ಲಿ ಸಿಸ್ಟರ್…ಎನ್ನುತ್ತಾ ಶಕುಂತಲಾ ಕಿವಿ ಚುಚ್ಚೋ ಅಣ್ಣ ಲಕ್ಷ್ಮೀಕಾಂತ್… ನಿಜ ಜೀವನದಲ್ಲಿ ಮಹಾನ್ ಸಾಧಕ !

Published : Nov 02, 2024, 04:42 PM ISTUpdated : Nov 04, 2024, 06:15 AM IST

ಅಮೃತಧಾರೆ ಧಾರಾವಾಹಿ ನೋಡೋರಿಗೆ ಲಕ್ಕಿ ಲಕ್ಷ್ಮೀ ಕಾಂತ್ ಖಂಡಿತಾ ಗೊತ್ತಿರುತ್ತೆ ಅಲ್ವಾ? ಶಕುನಿಯಂತ ಅದ್ಭುತ ಪಾತ್ರ ಮಾಡೋ ಈ ನಟನ ರಿಯಲ್ ಲೈಫ್ ಬಗ್ಗೆ ನೀವೂ ತಿಳ್ಕೊಳಿ.   

PREV
17
ಅಮೃತಧಾರೆಯಲ್ಲಿ ಸಿಸ್ಟರ್…ಎನ್ನುತ್ತಾ ಶಕುಂತಲಾ ಕಿವಿ ಚುಚ್ಚೋ ಅಣ್ಣ ಲಕ್ಷ್ಮೀಕಾಂತ್… ನಿಜ ಜೀವನದಲ್ಲಿ ಮಹಾನ್ ಸಾಧಕ !

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಈ ಸೀರಿಯಲ್ ನಲ್ಲಿ ನಾಯಕ- ನಾಯಕಿ ಮಾತ್ರವಲ್ಲದೇ ಪ್ರತಿಯೊಂದು ಪಾತ್ರಕ್ಕೂ ನಟರು ನ್ಯಾಯ ಒದಗಿಸುತ್ತಿದ್ದಾರೆ. ಅದರಲ್ಲೂ ಲಕ್ಕಿ ಲಕ್ಷ್ಮೀಕಾಂತ್ ಪಾತ್ರ ಸದ್ಯ ಮನ ಸೆಳೆಯುತ್ತಿದೆ. 
 

27

ಲಕ್ಕಿ ಲಕ್ಷ್ಮೀಕಾಂತ್ ಅಂದ್ರೆ ಯಾರು ಗೊತ್ತಾಯ್ತಲ್ವ? ಗೌತಮ್ ದಿವಾನ್ ಮಲತಾಯಿ ಶಕುಂತಲಾ ಜೊತೆಗೆ ಯಾವಾಗ್ಲೂ ಇರುವ, ಆಕೆಯ ಕಿವಿಚುಚ್ಚುವಂತಹ ಕೆಲಸ ಮಾಡುವ, ಶಕುನಿಯಂತ ಪಾತ್ರ ಮಾಡುವ ಅಣ್ಣ ಲಕ್ಕಿ ಲಕ್ಷ್ಮೀಕಾಂತ್ (Lucky Lakshmikanth). ಕಥೆ ಮುಂದುವರೆಯೋದಕ್ಕೆ ಒಂದು ಕಾರಣ ಲಕ್ಷ್ಮೀಕಾಂತ್ ಅಂತಾನೇ ಹೇಳಬಹುದು. 
 

37

ಯಾವಾಗ್ಲೂ ಅಕ್ಕನ ಜೊತೆಯಲ್ಲಿದ್ದು, ತನ್ನ ಕುತಂತ್ರಗಳಿಂದಲೇ ಒಂದಲ್ಲ ಒಂದು ಪ್ಲ್ಯಾನ್ ಮಾಡಿ ಅಕ್ಕನನ್ನು ಗೌತಮ್ ವಿರುದ್ಧವಾಗಿ ಕೆಲಸ ಮಾಡಲು ಪ್ರೇರೇಪಿಸುವ ಈ ಅದ್ಭುತ ಕಲಾವಿದನ ನಿಜವಾದ ಹೆಸರು ಕೃಷ್ಣಮೂರ್ತಿ ಕವತ್ತಾರ್ (Krishnamurthy Kavatar). ತಮ್ಮ ಅತ್ಯದ್ಭುತ ಎನಿಸುವಂತಹ ನಟನೆಯಿಂದ ಜನಮನ ಗೆಲ್ಲುತ್ತಿರುವ ಈ ಕೃಷ್ಣಮೂರ್ತಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. 
 

47

ಕೃಷ್ಣಮೂರ್ತಿ ಕವತ್ತಾರ್, ದೊಡ್ಡ ರಂಗಭೂಮಿ ಕಲಾವಿದರು.(theater artist) ಬಹಳ ವರ್ಷಗಳಿಂದ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಹಾನ್ ನಟ ಇವರು.  ಕನ್ನಡ ಸಿನಿಮಾದ ಅನೇಕ ನಟರು ಇವರ ಆ್ಯಕ್ಟಿಂಗ್ ಗರಡಿಯಲ್ಲಿ ಪಳಗಿದವರಿದ್ದಾರೆ. ನಟ ಪ್ರಮೋದ್ ಶೆಟ್ಟಿ ಕೂಡ ಇವರ ಶಿಷ್ಯ ಆಗಿದ್ದಾರೆ. 
 

57

ಬರೋಬ್ಬರಿ ಮೂವತ್ತು ವರ್ಷಗಳಿಂದ ರಂಗಭೂಮಿಯಲ್ಲಿ ದುಡಿಯುತ್ತಿರುವ ಇವರು 250 ಕ್ಕೂ ಅಧಿಕ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ. ಇವರು ಬರೆದಂತಹ ರಂಗಗೀತೆಗಳು ಬಹಳಷ್ಟು ಜನಪ್ರಿಯತೆ ಪಡೆದಿವೆ. 
 

67

ರಂಗಭೂಮಿ ಜೊತೆಗೆ ಧಾರಾವಾಹಿ, ಸಿನಿಮಾಗಳಲ್ಲಿಯೂ ನಟಿಸಿರುವ ಕವತ್ತಾರು `ಗೌಡ್ರ ಸೈಕಲ್' ಚಿತ್ರದಲ್ಲಿ ಗೌಡನ ಪಾತ್ರವನ್ನೇ ನಿಭಾಯಿಸಿದ್ದರು. ` ಎಡಿಯೂರು ಸಿದ್ದಲಿಂಗೇಶ್ವರ ಮಹಾತ್ಮೆ' ಧಾರಾವಾಹಿಯಲ್ಲಿ ನಟಿಸಿ ಜನಮನ ಗೆದ್ದಿದ್ದರು. `ಸಾಯುವವನೇ ಚಿರಂಜೀವಿ' ಎನ್ನುವ ಏಕವ್ಯಕ್ತಿ ಪ್ರದರ್ಶನ ದೇಶಾದ್ಯಂತ ಭಾರಿ ಜನಮನ್ನಣೆ ಗಳಿಸಿತ್ತು. 
 

77

ಅಷ್ಟೆ ಅಲ್ಲ ಈ ಮಹಾನ್ ಸಾಧಕರಿಗೆ ಶಿವರಾಮ ಕಾರಂತರೊಡನೆ ಕೂಡ ಒಡನಾಟ ಇತ್ತು, ಜೊತೆಗೆ ತೇಜಸ್ವಿ ಜೊತೆಗೂ ಕೂಡ ಕೆಲಸ ಮಾಡಿದ್ದವರು ಇವರು. ಡಾಲಿ ಧನಂಜಯ್ ಗೂ ಇವರು ನಾಟಕ ಹೇಳಿಕೊಟ್ಟಿದ್ದರು, ರವಿಚಂದ್ರನ್ ಪುತ್ರ, ಪ್ರಮೋದ್ ಶೆಟ್ಟಿ ಸೇರಿ ಹಲವಾರು ಮಹಾನ್ ನಟ ಕೂಡ ಇವರ ಗರಡಿಯಲ್ಲಿ ಪಳಗಿದವರೇ ಆಗಿದ್ದಾರೆ. 
 

Read more Photos on
click me!

Recommended Stories