ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಅನುಷಾ ರೈ; ಪಾರ್ಟಿ ಮಾಡಿಲ್ಲ ಅನ್ನೋದೇ ಖುಷಿ ಎಂದ ನೆಟ್ಟಿಗರು

Published : Jan 02, 2025, 05:15 PM ISTUpdated : Jan 02, 2025, 05:17 PM IST

ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಹೊಸ ವರ್ಷ ಆರಂಭಿಸಿದ ಅನುಷಾ ರೈ. ಸೀರೆ ಫೋಟೋಗಳು ಸಖತ್ ವೈರಲ್...... 

PREV
16
ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಅನುಷಾ ರೈ; ಪಾರ್ಟಿ ಮಾಡಿಲ್ಲ ಅನ್ನೋದೇ ಖುಷಿ ಎಂದ ನೆಟ್ಟಿಗರು

 ಕನ್ನಡ ಕಿರುತೆರೆಯ ನಟಿ, ಸ್ಯಾಂಡಲ್‌ವುಡ್‌ ಸುಂದರಿ ಹಾಗೂ ಬಿಗ್ ಬಾಸ್ ಸೀಸನ್‌ 11ರ ಸ್ಪರ್ಧಿ  ಅನುಷಾ ರೈ ಹೊಸ ವರ್ಷ 2025 ಸಿಂಪಲ್ ಆಗಿ ಬರ ಮಾಡಿಕೊಂಡಿದ್ದಾರೆ. 

26

ಈ ವರ್ಷ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದು ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ ನೀಲಿ ಬಣ್ಣದ ಸೀರೆಯಲ್ಲಿ ಅನುಷಾ ಮಿಂಚಿದ್ದಾರೆ. 

36

 'ಹೊಸ ವರ್ಷದ ಹೊಂಗಿರಣ ಬಿದ್ದಾಗಿದೆ, ದೇವಸ್ಥಾನವೆಂಬ ಪವಿತ್ರ ಜಾಗದಿಂದ ದಿನ ಆಂಭವಾಗಿದೆ. ದೇವರ ಆಶೀರ್ವಾದ ಪಡೆದಂತ ಅನುಭವ ಮನಸ್ಸಿನಲ್ಲಿ' ಎಂದು ಅನುಷಾ ರೈ ಬರೆದುಕೊಂಡಿದ್ದಾರೆ.

46

'ಹೊಸ ಆಸೆಯ ಚಿಗುರು ಕವಲೊಡೆದಿಇದೆ ಆಳ ಲತೆಯಲ್ಲಿ ಶುದ್ಧ ಮನಸ್ಸಿಂದ ಪ್ರಾರ್ಥಸುವೆ ಆ ದೇವರನ್ನು. ಸುಖ ನೆಮ್ಮದಿಯಿಂದ ಬಾಳಿಸು ನೀ ಎಲ್ಲರನ್ನು' ಎಂದಿದ್ದಾರೆ ಅನುಷಾ. 

56

ಬಿಗ್ ಬಾಸ್ ಸೀಸನ್ 11ರಲ್ಲಿ 50 ದಿನಗಳನ್ನು ಪೂರೈಸಿ ಹೊರ ಬರುತ್ತಿದ್ದಂತೆ ಫೋಟೋಶೂಟ್, ಓಪನಿಂಗ್ಸ್‌ ಹಾಗೂ ಪ್ರಮೋಷನ್‌ಗಳನ್ನು ಅನುಷಾ ರೈ ಸಖತ್ ಬ್ಯುಸಿಯಾಗಿಬಿಟ್ಟರು.

66

ಎಲ್ಲರೂ ಪಾರ್ಟಿ ಮಾಡಲು ಪಬ್ ಬಾರ್ ಮತ್ತು ರೆಸಾರ್ಟ್‌ ಅಂತ ಸುತ್ತಿದ್ದಾರೆ ಆದರೆ ನೀವು ಮಾತ್ರ ದೇವಸ್ಥಾನದಿಂದ ವರ್ಷ ಆರಂಭಿಸಿರುವು ನೋಡಿ ಖುಷಿ ಆಯ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

click me!

Recommended Stories