ಬಿಗ್‌ಬಾಸ್‌ ಕನ್ನಡ 11ರ ಗ್ರ್ಯಾಂಡ್‌ ಫಿನಾಲೆ ಡೇಟ್‌, ಫೈನಲಿಸ್ಟ್‌ಗಳ ಹೆಸರು ಲೀಕ್‌!

First Published | Jan 1, 2025, 7:45 PM IST

ಬಿಗ್‌ಬಾಸ್ ಕನ್ನಡ 11ರ ಫೈನಲ್ ದಿನಾಂಕದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭವಾಗಿವೆ. ಈ ಸೀಸನ್‌ನಲ್ಲಿ ಯಾರು ಟಾಪ್ 5 ಸ್ಪರ್ಧಿಗಳಾಗಿ ಫೈನಲ್‌ಗೆ ಪ್ರವೇಶ ಪಡೆಯಲಿದ್ದಾರೆ ಎಂಬ ಕುತೂಹಲ ಮೂಡಿದೆ. ಹನುಮಂತ, ತ್ರಿವಿಕ್ರಮ್, ಉಗ್ರಂ ಮಂಜು, ರಜತ್ ಮತ್ತು ಭವ್ಯಾ ಗೌಡ ಅವರ ಹೆಸರುಗಳು ಫೈನಲ್‌ಗೆ ಪ್ರಬಲವಾಗಿವೆ.

ಬಿಗ್‌ಬಾಸ್‌ ಕನ್ನಡ 11ರ ಪಿನಾಲೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಸ್ಪರ್ಧಿಗಳು ಮನೆಯಲ್ಲಿ 94 ದಿನ ಕಳೆದಿದ್ದಾರೆ. ಈ ವಾರ ಮನೆಯಲ್ಲಿ ಫ್ಯಾಮಿಲಿ ರೌಂಡ್‌  ನಡೆಯುತ್ತಿದೆ. ಇದೆಲ್ಲದರ  ನಡುವೆ ಈಗ ಬಿಗ್‌ಬಾಸ್‌ ಫೈನಲ್‌ ಯಾವಾಗ ನಡೆಯುತ್ತದೆ ಎಂಬ ಕುತೂಹಲದ ಮಧ್ಯೆಯೇ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ಉಗ್ರಂ ಮಂಜು, ಚೈತ್ರಾ ಕುಂದಾಪುರ, ರಜತ್‌ ಕಿಶನ್, ತ್ರಿವಿಕ್ರಮ್‌, ಭವ್ಯಾ ಗೌಡ, ಮೋಕ್ಷಿತಾ ಪೈ, ಗೌತಮಿ ಜಾದವ್, ಧನರಾಜ್‌ ಆಚಾರ್‌ ಹಾಗೂ ಹನುಮಂತು ಒಟ್ಟು 9 ಮಂದಿ ಸ್ಪರ್ಧಿಗಳಿದ್ದಾರೆ. ಇಷ್ಟು ಮಾತ್ರವಲ್ಲ ಇದೆಲ್ಲದರ ನಡುವೆ ಬಿಗ್‌ಬಾಸ್‌ ಕನ್ನಡ 11ರ  ಗ್ರಾಂಡ್ ಫಿನಾಲೆಗೆ ಎಂಟ್ರಿ ಕೊಡುತ್ತಿರುವ ಸ್ಪರ್ಧಿಗಳ ಹೆಸರುಗಳು ವೈರಲ್ ಆಗುತ್ತಿವೆ. ಎಂದಿನಂತೆ ಈ ಬಾರಿ ಕೂಡ ಐದು ಮಂದಿಯನ್ನು ಫಿನಾಲೆಗೆ  ಕಳುಹಿಸಿಕೊಡಲಾಗುತ್ತಂತೆ.

Tap to resize

ವಿವಿಧ ಕಡೆಗಳಿಂದ  ಸಮೀಕ್ಷೆಯನ್ನು ನಡೆಸಿ ಬಿಗ್‌ ಬಾಸ್‌ ಮನೆಯಲ್ಲಿ ಯಾರು ಇರಬೇಕೆಂದು ತೀರ್ಮಾನಿಸಲಾಗುತ್ತಂತೆ. ಆ ಪ್ರಕಾರ ಉಗ್ರಂ ಮಂಜು, ಗೌತಮಿ ಅಥವಾ ಮೋಕ್ಷಿತಾ  ಇವರುಗಳು ಹೆಸರು ಟಾಪ್‌ ನಲ್ಲಿಲ್ಲ.  ಐವರಲ್ಲಿ ಗ್ರ್ಯಾಂಡ್‌ ಫಿನಾಲೆ ಲಿಸ್ಟ್‌ನಲ್ಲಿ  ಪಕ್ಕಾ ಯಾರು ಇರುತ್ತಾರೆ ಎಂದರೆ ಮೊದಲಿಗೆ ಬರುವ ಹೆಸರು ಸಿಂಗರ್ ಹನುಮಂತ ಲಮಾಣಿ. ಮಿಕ್ಕಂತೆ ತ್ರಿವಿಕ್ರಮ್‌  ಹೆಸರು ಎರಡನೇ ಸ್ಥಾನದಲ್ಲಿದೆಯಂತೆ, 3ನೇ ಹೆಸರು ಉಗ್ರ ಮಂಜು ಮತ್ತು 4ನೇ ಹೆಸರು ರಜತ್‌ ಐದನೇ ಹೆಸರು ಭವ್ಯಾ ಗೌಡ ಅವರದ್ದಿದೆ.

ಇನ್ನೊಂದು ಲಿಸ್ಟ್ ಪ್ರಕಾರ ಹನುಮಂತು, ತ್ರಿವಿಕ್ರಮ್‌, ಧನರಾಜ್‌, ಭವ್ಯಾ ಗೌಡ ಮತ್ತು ಉಗ್ರಂ ಮಂಜು ಅವರ ಹೆಸರಿದೆ. ಹನುಮಂತ ಬಿಗ್‌ಬಾಸ್ ಸ್ಪರ್ಧೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಾತ ಆತನೇ ವಿನ್ನರ್‌ ಆಗಬೇಕೆಂಬುದು ಹಲವರ ಅಭಿಪ್ರಾಯ. ಜನಸಾಮಾನ್ಯ ಕುರಿಗಾಹಿಯನ್ನು ಜನ ಗೆಲ್ಲಿಸಲಿ ಎಂಬುದು ಹಲವರ ಆಶಯವೂ ಆಗಿದೆ.ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಬಿಗ್‌ಬಾಸ್‌ ಕನ್ನಡ 11ರ ಫಿನಾಲೆ ಯಾವಾಗ ಎಂಬ ಚರ್ಚೆಯೂ ಆರಂಭವಾಗಿದೆ. ಮಾತ್ರವಲ್ಲ ವಾಹಿನಿಯು ಈಗಾಗಲೇ ಗ್ರ್ಯಾಂಡ್‌ ಫಿನಾಲೆಯ ದಿನಾಂಕವನ್ನು ಸೆಟ್‌ ಮಾಡಿದೆ ಎನ್ನಲಾಗುತ್ತಿದೆ.

ಕಳೆದ ಸೀಸನ್ 112 ದಿನಗಳ ಕಾಲ ಬಿಗ್‌ಬಾಸ್‌ ಶೋ ನಡೆದಿತ್ತು. ಅಕ್ಟೋಬರ್ 8ರಂದು ಶುರುವಾಗಿ ಜನವರಿ 28ವರೆಗೂ ಇತ್ತು. ಒಟ್ಟು 21 ಜನ ಸ್ಪರ್ಧಿಗಳು ಶೋ ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಕಾರ್ತಿಕ್ ವಿನ್ನರ್ ಆದರೆ ಡ್ರೋನ್ ಪ್ರತಾಪ್ ರನ್ನರ್ ಅಪ್ ಆದರು. ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದ ಸಂಗೀತಾ ಶೃಂಗೇರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಈ ಬಾತಿಯ ಬಿಗ್‌ಬಾಸ್‌ 11 ನೇ ಸೀಸನ್‌ ಆರಂಭವಾಗಿದ್ದು, ಸೆಪ್ಟೆಂಬರ್ 29ಕ್ಕೆ ಅಂದರೆ ಕಳೆದ ಸೀಸನ್‌ಗಿಂತ ಮೊದಲೇ ಆರಂಭವಾಗಿದೆ.

ಈ ಬಾರಿ ಆರಂಭದಿಂದಲೇ ಅತ್ಯಂತ ವಿವಾದದಲ್ಲಿ ಬಿಗ್‌ಬಾಸ್‌ ನಡೆಯಿತು. ಮಹಿಳಾ ಆಯೋಗವು ಎಂಟ್ರಿ ಕೊಟ್ಟಿತ್ತು. ಇದಾದ ನಂತರ ಲಾಯರ್ ಜಗದೀಶ್ ಮನೆಯಲ್ಲಿ ಹೊಡೆದಾಡಿಕೊಂಡು ಹೊರದಬ್ಬಲಾಗಿತ್ತು. ಇದೇ ಘಟನೆಯಲ್ಲಿ ರಂಜಿತ್ ಅವರನ್ನು ಕೂಡ ಕಳಿಸಲಾಗಿತ್ತು. ಇದಾದ ನಂತರ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಕೂಡ ಶೋ ನಿಂದ ಹೊರಬಂದಿದ್ದರು.

ಈ ಬಾರಿ ಬಿಗ್‌ಬಾಸ್‌ ಸೀಸನ್ 11 17 ವಾರಗಳ ಕಾಲ ನಡೆಸಬೇಕು ಎಂದು ಬಿಗ್‌ಬಾಸ್‌ ತಂಡ ಪ್ಲ್ಯಾನ್‌ ಮಾಡಿದೆ ಎನ್ನಲಾಗುತ್ತಿದೆ. ಶೋ ಟಿಆರ್‌ಪಿ ಕೂಡ ಟಾಪ್‌ನಲ್ಲಿದ್ದು,  ಜನವರಿ 26ನೇ ತಾರೀಕು ಫಿನಾಲೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ದಿನ ಭಾನುವಾರ ಗಣರಾಜ್ಯೋತ್ಸವ ಕೂಡ ಇದೆ. ಒಂದು ವೇಳೆ  112 ದಿನಕ್ಕೆ ಕೊನೆಗೊಂಡರೆ ಜನವರಿ 19ಕ್ಕೆ ಬಿಗ್‌ಬಾಸ್ ಫಿನಾಲೆ ನಡೆಯಲಿದೆ. ಒಟ್ಟಿನಲ್ಲಿ ಜನವರಿ ಮೂರನೇ ವಾರ ಅಥವಾ 4ನೇ ವಾರ ಬಿಗ್‌ಬಾಸ್‌ ಶೋ ಮುಗಿಯೋದಂತು ಪಕ್ಕಾ.

Latest Videos

click me!