ಹುಡುಗೀರ ಪ್ರೀತಿಯ ಪಾರಿವಾಳ ಹಾರಿ ಹೋಯ್ತು; ಬಿಗ್ ಬಾಸ್‌ ಕಿಶನ್ ಎಂಗೇಜ್‌?

Published : Feb 08, 2023, 05:04 PM IST

ಹುಡುಗಿ ಕೈ ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡ ಬಿಗ್ ಬಾಸ್ ಕಿಶನ್ ಬಿಳಗಲಿ. ಸ್ಪೆಷಲ್ ದಿನ ಹುಡುಗಿ ಮುಖ ರಿವೀಲ್?

PREV
19
ಹುಡುಗೀರ ಪ್ರೀತಿಯ ಪಾರಿವಾಳ ಹಾರಿ ಹೋಯ್ತು; ಬಿಗ್ ಬಾಸ್‌ ಕಿಶನ್ ಎಂಗೇಜ್‌?

 ಡ್ಯಾನ್ಸರ್ ಜಮ್ ಮಾಡೆಲ್ ಆಗಿರುವ ಕಿಶನ್ ಬಿಳಗಲಿ ಬಿಗ್ ಬಾಸ್ ಸೀಸನ್ 7 ಮತ್ತು ತಕದಿಮಿತ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಮೂಲಕ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡರು.

29

ಕನ್ನಡ ಮಾತ್ರವಲ್ಲದೆ ಹಿಂದಿ ರಿಯಾಲಿಟಿ ಶೋಗಳಲ್ಲಿ ಕಿಶನ್ ಬಿಳಗಲಿ ಸ್ಪರ್ಧಿಸಿದ್ದಾರೆ. ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡಿಸ್, ಭಾರತಿ ಸಿಂಗ್ ಸೇರಿದಂತೆ ಹಲವ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. 

39

ಲಾಕ್‌ಡೌನ್‌ ಸಮಯದಲ್ಲಿ ಕಿಶನ್ ಹುಟ್ಟೂರು ಚಿಕ್ಕಮಗಳೂರಿನಲ್ಲಿದ್ದರು. ಅಲ್ಲಿನ ಅದ್ಭುತ ಜಾಗಗಳನ್ನು ರೀಲ್ಸ್‌ ಮೂಲಕ ಜನರಿಗೆ ತೋರಿಸಿಕೊಟ್ಟಿದ್ದಾರೆ. 

49

ಕಿಶನ್‌ ಮೇಲೆ ಕ್ರಶ್ ಆಂಡ್ ಎನ್ನುತ್ತಿದ್ದ ಹುಡುಗಿಯರ ಹಾರ್ಟ್‌ ಬ್ರೇಕ್ ಮಾಡಿದ್ದಾರೆ. ಕಾರಿನಲ್ಲಿ ಹುಡುಗಿ ಕೈ ಹಿಡಿದುಕೊಂಡು ಗೇರ್ ಹಾಕುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. 2023 ಹೊಸ ವರ್ಷದಂದು ಗರ್ಲ್‌ಫ್ರೆಂಡ್ ಇರುವುದು ಖಚಿತ ಪಡಿಸಿದ್ದಾರೆ.

59

 ಹಲವು ಶುಭಾಶುಗಳನ್ನು ತಿಳಿಸಿದ್ದಾರೆ ಕೆಲವು ಹುಡುಗಿ ಯಾರೆಂದು ಪ್ರಶ್ನೆ ಮಾಡಿದ್ದಾರೆ. ಆದರೆ ಇನ್ನೂ ಕೆಲವರು ಹುಡುಗೀರ ಪ್ರೀತಿಯ ಪಾರಿವಾಳ ಹಾರಿ ಹೋಯ್ತು ಎಂದಿದ್ದಾರೆ. 

69

ಬಿಗ್ ಬಾಸ್‌ ಸೀಸನ್ 7ರಿಂದ ಹೊರ ಬರುತ್ತಿದ್ದಂತೆ ಹೋಟೆಲ್ ಆರಂಭಿಸಿದ್ದರು. ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಬಿರಿಯಾನಿ ಅಂಗಡಿ ಓಪನ್ ಮಾಡಿದ್ದಾರೆ. ಕಿರುತೆರೆ ಮತ್ತು ಬೆಳ್ಳಿ ತೆರೆ ಸೆಲೆಬ್ರಿಟಿಗಳು ಓಪನಿಂಗ್‌ ದಿನ ಆಗಮಿಸಿ ಶುಭ ಹಾರೈಸಿದ್ದರು. 

79

ಕಿಶನ್‌ ಈ ಹಿಂದೆ ಡಿಪ್ರೆಶನ್‌ಗೆ ಒಳಗಾಗಿದ್ದರಂತೆ. 'ನೀವು ನೋಡಿದ ಹಾಗೆ ಎಲ್ಲೆಡೆ ನಾನು ನಗುತ್ತಿರುವ ಫೋಟೋ ಹಾಗೂ ವಿಡಿಯೋಗಳಿವೆ. ಆದರೆ ನಾನು ಅನುಭವಿಸುತ್ತಿರುವ ವಿಚಾರದ ಬಗ್ಗೆ ಹಂಚಿಕೊಳ್ಳಲು ನನಗೆ ಧೈರ್ಯವಿರಲಿಲ್ಲ' ಎಂದು ಹೇಳುತ್ತಾ ಟೈಮ್ಸ್ ಆಫ್ ಇಂಡಿಯಾ ಜೊತೆ ನಮ್ಮ ಡಿಪ್ರೆಷನ್ ಜರ್ನಿ ಹಂಚಿಕೊಂಡಿದ್ದರು. 

89

ಕೆಲವು ತಿಂಗಳ ಹಿಂದೆ ಯಾರಾದರೂ ಬಂದು ಡಿಪ್ರೆಶನ್‌ ಬಗ್ಗೆ ಮಾತನಾಡಿದರೆ ನಾನು ನಕ್ಕು ಸುಮ್ಮನಾಗುತ್ತಿದ್ದೆ ಆದರೆ ನಿಜಕ್ಕೂ ಡಿಪ್ರೆಷನ್ ಆಂದ್ರೆ ಏನು? ಹೇಗಿರುತ್ತದೆ ಎಂದು ನನಗೆ ತಿಳಿದುಕೊಳ್ಳಲು ತುಂಬಾನೇ ಸಮಯ ಬೇಕಾಯ್ತು. ಕೆಲಸ ಇರದ ಸಮಯದಲ್ಲಿ ಅಥವಾ ಲಾಕ್‌ಡೌನ್‌ನಲ್ಲಿ ನನಗೆ ಡಿಪ್ರೆಷನ್ ಫೀಲ್ ಆಗಿಲ್ಲ ಆದರೆ ನನಗೊಂದು ಬೇಸರವಿತ್ತು'

99

'ಅದೇನೆಂದರೆ ನಮ್ಮ ಬಿಗ್ ಬಾಸ್ ಸೀಸನ್‌ನ ಮಂದಿ ಎಷ್ಟು ಲಕ್ಕಿ ಆದರೆ ನಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಆಗಲಿಲ್ಲ. ಈ ಸತ್ಯ ನನಗೆ ತುಂಬಾನೇ ನೋವು ಕೊಡುತ್ತದೆ. ಯಶಸ್ಸು ಸಿಕ್ಕ ನಂತರವೂ ನನ್ನ ಲೈಫ್ ತುಂಬಾನೇ ನಾರ್ಮಲ್ ಆಗಿತ್ತು' ಎಂದು ಕಿಶನ್ ಮಾತನಾಡಿದ್ದಾರೆ.  

Read more Photos on
click me!

Recommended Stories