Vasnhika Special : ಕಿರುತೆರೆಯ ಪಟಾಕಿಪೋರಿ ವಂಶಿಕಾ ಅಂಜನಿ ಕಷ್ಯಪ್

First Published Feb 7, 2023, 5:37 PM IST

ಬಾಲ ನಟರಾಗಿದ್ದಾಗಿನಿಂದಲೂ ಮಾಸ್ಟರ್ ಆನಂದ್ ಬಹಳ ಫೇಮಸ್. ಬಾಲ್ಯದಲ್ಲಿನ ಅವರ ಚಿತ್ರಗಳನ್ನು ನೋಡಿದ್ರೆ ಎಂಥಾ ನಟನೆ ಮಾಡ್ತಾರಪ್ಪಾ… ಇಷ್ಟು ಸಣ್ಣ ವಯಸ್ಸಲ್ಲಿ ಇಷ್ಟೊಂದು ಡೈಲಾಗ್ ಹೇಳ್ತಾ, ನಟನೆ ಮಾಡೋದಾದ್ರೂ ಹೇಗೆ ಅಂತ ಅನಿಸಿದ್ದಂತೂ ನಿಜಾ. ಈಗ ಅದೇ ಗುಣ ಮಗಳು ವಂಶಿಕಾಗೂ ಬಂದಿದೆ. ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಈ ಪುಟಾಣಿ ಬಾಲೆಯ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ತಿಳಿಯೋಣ. 

ಗೌರಿ ಗಣೇಶ, ಕಿಂದರಿ ಜೋಗಿ ಚಿತ್ರದ ಮಾಸ್ಟರ್ ಆನಂದ್(Master Anand) ಅವರನ್ನು ಮರೆಯಲು ಸಾಧ್ಯವೇ? ನೋ ವೇ… ಯಾಕಂದ್ರೆ ಅವರ ಆಕ್ಟಿಂಗ್ ಹಾಗಿತ್ತು. ಗೌರಿ ಗಣೇಶದಲ್ಲಿನ ಅವರ ಅದ್ಭುತ ಅಭಿನಯದಿಂದಾಗಿಯೇ ಇಂದಿಗೂ ಆನಂದ್ ‘ಮಾಸ್ಟರ್ ಆನಂದ್’ ಆಗಿಯೇ ಉಳಿದಿದ್ದಾರೆ. ಸದ್ಯ ಕನ್ನಡ ಕಿರುತೆರೆಯಲ್ಲಿ ನಿರೂಪಣೆ ಮಾಡ್ತಾ ಇರೋ ಆನಂದ್ ಪುತ್ರಿ ಕೂಡ ಈಗ ಕನ್ನಡಿಗರ ಅಚ್ಚುಮೆಚ್ಚಿನ ಮನೆ ಮಗಳಾಗಿದ್ದಾಳೆ. 

ಹೌದು, ನಾವು ಹೇಳ್ತಾ ಇರೋದು ವಂಶಿಕಾ ಅಂಜನಿ ಕಷ್ಯಪ್ (Vanshika Anjani Kashya) ಬಗ್ಗೆ. ಇವತ್ತಷ್ಟೇ ಐದು ವರ್ಷಕ್ಕೆ ಕಾಲಿಡ್ತಾ ಇರೋ ಈ ಪುಟಾಣಿ, ಈ ಸಣ್ಣ ವಯಸ್ಸಲ್ಲಿ ಸಾಧಿಸಿದು ಬಹಳಷ್ಟು. ಕೇವಲ ಎರಡು ವರ್ಷಗಳಲ್ಲಿ ಈ ಮಗು ಬಹು ಮುಖ ಪ್ರತಿಭೆ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. 

ಲಿಟಲ್ ಸ್ಟಾರ್ ವನ್ಶಿಕಾ ಅಂಜನಿ ಕಶ್ಯಪಾ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ (Nammamma Super Star season 1) ಒಂದರಲ್ಲಿ ತಾಯಿ ಯಶಸ್ವಿನಿ ಜೊತೆ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡರು. ಪ್ರೋಮೋ ವಿಡಿಯೋದಿಂದಲೇ (promo video) ತನ್ನ ಮಾತಿಗೆ ಮೋಡಿಗೆ ಸಾವಿರಾರು ಅಭಿಮಾನಿಗಳನ್ನು ಪಡೆದುಕೊಂಡ ವಂಶಿಕಾ. ಕೊನೆಗೆ ನಮ್ಮಮ್ಮ ಸೂರ್ ಸ್ಟಾರ್ ವಿನ್ನರ್ ಕೂಡ ಆದರು. 

ಬಳಿಕ ಗಿಚ್ಚಿ ಗಿಲಿ ಗಿಲಿ ಕಾಮಿಡಿ ಶೋದಲ್ಲೂ (Gicchi Gili Gili)ನಟಿಸಿ, ಅಲ್ಲೂ ಸಹ ತನ್ನ ಅಮೋಘ, ನಟನೆ, ಡೈಲಾಗ್ ಡೆಲಿವರಿ, ಕಾಮಿಡಿ ಟೈಮಿಂಗ್ ಮೂಲಕ ವೀಕ್ಷಕರಿಗೆ ಅಚ್ಚರಿ ಮೂಡಿಸಿದ ಈ ಬಾಲೆ ಆ ಶೋನಲ್ಲೂ ವಿನ್ನರ್ ಆಗಿ ಹೊರಹೊಮ್ಮಿದರು. ಆ ಮೂಲಕ ಕರ್ನಾಟಕದ, ಕನ್ನಡಿಗರ ಮನ, ಮನೆ ಗೆಲ್ಲುವಲ್ಲಿ ಯಶಸ್ವಿಯಾದರು.
 

ನಮ್ಮಮ್ಮ ಸೂಪರ್ ಸ್ಟಾರ್, ಗಿಚ್ಚಿ ಗಿಲಿ ಗಿಲಿ  ಕಾರ್ಯಕ್ರಮದ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ದ ವಂಶಿಕಾ ಬಳಿಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದಾರೆ. ಸ್ಟಾರ್ ನಟ ವಸಿಷ್ಠ ಸಿಂಹ ಅಭಿನಯದ ಲವ್ ಲೀ ಸಿನಿಮಾ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. 

ಇನ್ನು ನಿರೂಪಕಿ ಆಗಿಯೂ ವಂಶಿಕಾ ಸೈ ಎನಿಸಿಕೊಂಡಿದ್ದಾಳೆ. ನಿರಂಜನ್​ ಜೊತೆ ಸೇರಿ ‘ನನ್ನಮ್ಮ ಸೂಪರ್​ ಸ್ಟಾರ್​ ಸೀಸನ್​ 2’ ನಿರೂಪಣೆಯನ್ನು ವಂಶಿಕಾ ನಿರೂಪಣೆ (Host) ಮಾಡುವ ಮೂಲಕ, ನಾನು ಎಲ್ಲಾದಕ್ಕೂ ಸೈ ಎಂದಿದ್ದಾರೆ. ಸಿನಿಮಾಗಳಿಂದಲೂ ಆಕೆಗೆ ಅವಕಾಶಗಳು ಹರಿದುಬರುತ್ತಿವೆ.

ಯಾವುದೇ ಡೈಲಾಗ್, ಎಷ್ಟುದ್ದ ಡೈಲಾಗ್ ಕೊಟ್ಟರೂ, ಡ್ಯಾನ್ಸ್ ಹೇಳಿಕೊಟ್ಟರೂ ಅದನ್ನು ಬೇಗನೆ ಗ್ರಹಿಸಿಕೊಳ್ಳುವ ವಂಶಿಕಾ ಬಾಯಲ್ಲಿ, ದೇವರ ನಾಮಗಳು, ಸ್ತ್ರೋತ್ರಗಳು ಸರಾಗವಾಗಿ ಬರುತ್ತೆ. ಇತ್ತೀಚೆಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರೆ ಹೆಗಡೆಯವರ ಮುಂದೆಯೂ ದೇವರ ಸ್ತುತಿ ಹೇಳಿ ಮೆಚ್ಚುಗೆ ಪಡೆದಿದ್ದರು. 

ನಂಗೆ ಮಾಸ್ಟರ್ ಆನಂದ್ ಮಗಳು ಅಂತಾ ಕರೆಸಿಕೊಳ್ಳೋದು ಇಷ್ಟ ಇಲ್ಲ, ನನ್ನ ಹೆಸರು ವಂಶಿಕಾ ಅಂಜನಿ ಕಷ್ಯಪ್, ಆ ಹೆಸರಿಂದಾನೆ ಎಲ್ಲಾರೂ ನನ್ನನ್ನು ಗುರುತಿಸಬೇಕು ಎಂದು ಆರಂಭದಲ್ಲಿ ಹೇಳಿದ್ದ ವಂಶಿ… ಇದೀಗ ಅದೇ ಮಾತನ್ನು ನಿಜವಾಗಿಸಿದ್ದಾರೆ. ಈ ಮುದ್ದು ಕಂದನಿಗೆ ಹುಟ್ಟು ಹಬ್ಬದ ಶುಭಾಶಯಗಳು…(Happy Birthday) ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸೋಣ. 
 

click me!