Nandagokula Serial Actress: ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ನಂದಗೋಕುಲ’ದಲ್ಲಿ ನಂದನ ಹಿರಿಯ ಮಗಳು ಧನ್ಯಾ ಪಾತ್ರದಲ್ಲಿ ನಟಿಸಿದ ನಟಿ ರಕ್ಷಿತಾ ರವೀಂದರ್ ಅವರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ನಂದನ ಸೊಸೆಯಂದಿರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
‘ನಂದಗೋಕುಲ’ ಧಾರಾವಾಹಿ ನಟಿ ರಕ್ಷಿತಾ ರವೀಂದರ್ ಅವರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ಇತ್ತೀಚೆಗೆ ನಡೆದಿದ್ದು, ಕಾರ್ಯಕ್ರಮದಲ್ಲಿ ನಂದಗೋಕುಲದ ನಟ-ನಟಿಯರು ಸಹ ಆಗಮಿಸಿ, ಹರಸಿದ್ದು, ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
26
ನಂದಗೋಕುಲ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನ ಮನ ಗೆದ್ದ ತುಂಬು ಕುಟುಂಬದ ಕಥೆಯ ಧಾರಾವಾಹಿ ಅಂದ್ರೆ ಅದು ‘ನಂದಗೋಕುಲ’. ಗಿರಿಜಾ ಮತ್ತು ನಂದ ದಂಪತಿಗಳಿಗೆ ಐವರು ಮಕ್ಕಳು. ಮಾಧವ, ಕೇಶವ ಮತ್ತು ವಲ್ಲಭ ಎನ್ನುವ ಮೂವರು ಗಂಡು ಮಕ್ಕಳು ಹಾಗೂ ಧನ್ಯಾ ಮತ್ತು ರಕ್ಷಾ ಎನ್ನುವ ಇಬ್ಬರು ಹೆಣ್ಣುಮಕ್ಕಳು. ಹಿರಿಯ ಮಗಳು ಧನ್ಯಾ ಪಾತ್ರದಲ್ಲಿ ನಟಿಸುತ್ತಿದ್ದವರು ನಟಿ ರಕ್ಷಿತಾ.
36
ತಾಯಿಯಾಗುತ್ತಿರುವ ಸಂಭ್ರಮದಲ್ಲಿ ರಕ್ಷಿತಾ
ಧಾರಾವಾಹಿಯಲ್ಲಿ ಕಡಿಮೆ ಕಾಣಿಸಿಕೊಂಡರು, ಕಾಣಿಸಿಕೊಂಡಾಗಲೆಲ್ಲಾ, ಸದ್ದು ಮಾಡುವ ಧನ್ಯಾ ಪಾತ್ರ ರಕ್ಷಿತಾ ಅವರದ್ದು. ಇದೀಗ ನಟಿ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ತಮ್ಮ ಸೀಮಂತ ಸಂಭ್ರಮದ ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಆಗಸ್ಟ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಕ್ಷಿತಾ
ಈವೆಂಟ್ ಆರ್ಗನೈಸರ್ ಆಗಿರುವ ನಟಿ ರಕ್ಷಿತಾ , ಕಳೆದ ಆಗಸ್ಟ್‌ನಲ್ಲಿ ಜೀವನ್ ಕಿಶೋರ್ ಎನ್ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಹಳ ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ ‘ನಂದಗೋಕುಲ’ ಧಾರಾವಾಹಿ ಕಲಾವಿದರು ಕೂಡ ಭಾಗಿಯಾಗಿದ್ದರು.
56
ಸೀಮಂತದಲ್ಲಿ ಸಂಭ್ರಮಿಸಿದ ನಂದನ ಸೊಸೆಯಂದಿರು
ರಕ್ಷಿತಾ ಸೀಮಂತ ಕಾರ್ಯಕ್ರಮದಲ್ಲಿ ನಂದಗೋಕುಲ ಧಾರಾವಾಹಿಯ ಮೂವರು ಸೊಸೆಯಂದಿರಾದ ಪ್ರಿಯಾ, ಮೀನಾ ಮತ್ತು ಅಮೂಲ್ಯ ಅಂದರೆ, ಅರ್ಪಿತಾ ಗೌಡ, ಮೇಘಾ ವಿ ಮತ್ತು ಊರ್ಜಿತಾ ವಲ್ತಾಜೆ ಆಗಮಿಸಿ ತುಂಬು ಗರ್ಭಿಣಿ ನಟಿಗೆ ಹರಸಿ ಹಾರೈಸಿದ್ದಾರೆ.
66
ನಾದಿನಿಯರಿಗೆ ಮುದ್ದಾದ ಮೆಜೇಸ್
ತಮ್ಮ ಸಹ ನಟಿಯರೊಂದಿಗಿನ ಫೋಟೊಗಳನ್ನು ಹಂಚಿಕೊಂಡಿರುವ ರಕ್ಷಿತಾ ರವೀಂದ್ರ, ನನ್ನ ನಾದಿನಿಯರೇ..... ಈ ಸುಂದರ ಹೊಸ ಅಧ್ಯಾಯಕ್ಕೆ ನಾವು ತಯಾರಿ ನಡೆಸುತ್ತಿರುವಾಗ ನಿಮ್ಮ ಉಪಸ್ಥಿತಿ ಮತ್ತು ನಿಮ್ಮ ಆತ್ಮೀಯ ಶುಭಾಶಯಗಳು ನಮಗೆ ತುಂಬಾನೆ ಖುಷಿ ಕೊಟ್ಟಿದೆ. ನಿಮ್ಮ ಸಮಯ, ಕಾಳಜಿ ಮತ್ತು ಪ್ರೀತಿಗೆ ತುಂಬಾ ಧನ್ಯವಾದಗಳು. ಲವ್ ಯೂ ಗಯ್ಸ್ ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.