ಜಾಹ್ನವಿ -ಜಯಂತ್ ಮದುವೆ ಸಂಭ್ರಮ : ನಿಜ ಜೀವನದಲ್ಲೂ ಜೋಡಿಯಾಗಿ ಅಂತಿದ್ದಾರೆ ಫ್ಯಾನ್ಸ್!

First Published | Mar 20, 2024, 5:02 PM IST

ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಜಾಹ್ನವಿ ಮತ್ತು ಜಯಂತ್ ಮದುವೆ ಸಂಭ್ರಮ ಕಳೆ ಕಟ್ಟಿದೆ. ಒಂದೊಂದು ಶಾಸ್ತ್ರಗಳು ಸಂಪ್ರದಾಯಬದ್ಧವಾಗಿ ನಡೆಯುತ್ತಿದೆ. ಜಯಂತ್ ಮತ್ತು ಜಾಹ್ನವಿ ರಿಯಲ್ ಆಗಿಯೂ ಜೋಡಿ ಆಗ್ಲಿ ಅಂತಿದ್ದಾರೆ ಫ್ಯಾನ್ಸ್. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa)ಸೀರಿಯಲ್ ಸದ್ಯ ಜನಮನ ಗೆದ್ದಿರುವ ಸೀರಿಯಲ್ ಆಗಿದೆ. ವಿಭಿನ್ನ ಕಥೆ ಮತ್ತು ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುತ್ತಾ ಬಂದಿರುವ ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಇದೀಗ ಮದುವೆ ಸಂಭ್ರಮ. 
 

ಲಕ್ಷ್ಮೀ ನಿವಾಸ ಎಂಬ ತುಂಬು ಕುಟುಂಬದಲ್ಲಿ ಬೆಳೆದ ಮುದ್ದು ಮುದ್ದಾದ, ಮಾತಿನ ಮಲ್ಲಿ ಜಾಹ್ನವಿ ಮದುವೆ ಊರಿನ ದೊಡ್ಡ ಬ್ಯುಸಿನೆಸ್ ಮೆನ್ ಹಾಗೂ ಅನಾಥನಾಗಿರುವ ಜಯಂತ್ ಜೊತೆ ನಡೆಯುತ್ತಿದೆ. 
 

Tap to resize

ಜಾಹ್ನವಿ ಕಾಲೇಜಿನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದು, ಅಲ್ಲಿ ವಿಚಿತ್ರ ಪರಿಸ್ಥಿತಿಯಲ್ಲಿ ಇಬ್ಬರ ಭೇಟಿಯಾಗಿ, ಜಾಹ್ನವಿಯನ್ನು ಇಷ್ಟಪಟ್ಟ ಜಯಂತ್, ಅದೇ ದಿನ ಅವರ ಮನೆಗೆ ಹೋಗಿ ಹೆಣ್ಣು ಕೇಳುವ ಶಾಸ್ತ್ರವನ್ನು ಮಾಡಿದ್ದ. ಆ ಮೂಲಕ ವಿಶ್ವನ ಪ್ರೀತಿಗೆ ಫುಲ್ ಸ್ಟಾಪ್ ಇಟ್ಟಾಗಿತ್ತು. 
 

ಜಯಂತ್ ನ ಪ್ರಬುದ್ಧ ನಟನೆ ಮತ್ತು ಜಾಹ್ನವಿಯ ಮುದ್ದು ಮಾತು ಎರಡೂ ಜನರಿಗೆ ತುಂಬಾನೆ ಇಷ್ಟವಾಗಿತ್ತು. ಮೊದಲು ಮೊದಲು ಜಾಹ್ನವಿ ಮತ್ತು ವಿಶ್ವ ಜೋಡಿಯಾಗಬೇಕು ಎಂದು ಹೇಳ್ತಿದ್ದೋರೆಲ್ಲ, ಈಗ ಜಾನು ಮತ್ತು ಜಯಂತ್ ಫ್ಯಾನ್ ಆಗಿಬಿಟ್ಟಿದ್ದಾರೆ. ಅಷ್ಟೊಂದು ಮುದ್ದಾಗಿದೆ ಈ ಜೋಡಿ. 
 

ಸದ್ಯ ಸೀರಿಯಲ್ ನಲ್ಲಿ (serial) ಅರಿಶಿನ ಶಾಸ್ತ್ರದ ಸಂಭ್ರಮ ನಡೆಯುತ್ತಿದ್ದು, ಎರಡು ದಿನಗಳಿಂದ ಅದೇ ಸಂಭ್ರಮಾಚರಣೆಯ ಸೀನ್ ಗಳನ್ನು, ಜಾನು ಜಯಂತ್, ಕಣ್ಣಿನ ಸಂಭಾಷಣೆ, ಇಬ್ಬರು ಜೊತೆಯಾಗಿ ಫೋಟೋ ತೆಗೆಸಿಕೊಳ್ಳುವ ಕ್ಯೂಟ್ ಆಗಿರೋ ಸೀನ್ ಗಳನ್ನು ನೋಡಿರೋ ಜನರು ಇವರಿಬ್ಬರು ರಿಯಲ್ ಆಗಿ ಜೋಡಿಯಾದ್ರೆ ಎಷ್ಟು ಚೆನ್ನಾಗಿರುತ್ತೆ ಅಂತಿದ್ದಾರೆ. 
 

ಇಷ್ಟೆಲ್ಲಾ ಸಂಭ್ರಮಾಚರಣೆ ನಡುವೆ ವೀಕ್ಷಕರಿಗೆ ಮಾತ್ರ ನಡುಕ ಹುಟ್ಟುತಿದೆ, ಯಾಕಂದ್ರೆ ಟ್ವಿಸ್ಟ್ ಇರದ ಸೀರಿಯಲ್ ಇಲ್ವೇ ಇಲ್ಲ, ಹಾಗಿದ್ರೆ ಇಲ್ಲಿವರೆಗೆ ಆನಂದದಿಂದ ತೇಲುತ್ತಿದ್ದ, ಮದುವೆ ಸಂಭ್ರಮದಲ್ಲಿ ಮುಳುಗಿದ್ದ ಮನೆಯಲ್ಲಿ ಏನೋ ಬಿರುಗಾಳಿ ಏಳುವ ಮುನ್ಸೂಚನೆ ಇದೆ ಎಂದು ಹೇಳ್ತಿದ್ದಾರೆ ವೀಕ್ಷಕರು. 
 

ಜಾನು ಮತ್ತು ಜಯಂತ್ ದು ಮುದ್ದಾದ ಜೋಡಿ, ಇವರಿಬ್ಬರ ಮದ್ವೆ ನಿಲ್ಸಿದ್ರೆ ನಾವಂತೂ ಇನ್ನು ಮುಂದೆ ಸೀರಿಯಲ್ ನೋಡೋದೆ ಇಲ್ಲ ಅಂತಿದ್ದಾರೆ ಜನ. ಅಷ್ಟೇ ಅಲ್ಲ ಮದ್ವೆ ನಿಲ್ಸಿದ್ರೆ ಡೈರೆಕ್ಟರ್ ಗೆ ಹುಡುಕೊಂಡು ಹೋಗಿ ಹೊಡಿತೀನಿ ಅಂತಾನೂ ಧಮ್ಕಿ ಹಾಕ್ತಿದ್ದಾರೆ. 
 

ಇನ್ನು ಕೆಲವು ಜನರು ವಿಶ್ವನೇ ಮದ್ವೆ ಮನೆಗೆ ಬಂದು, ಜಾಹ್ನವಿಗೆ ತಾಳಿ ಕಟ್ತಾನೆ ಏನೋ, ಇದು ಸೇವಂತಿ ಸೇವಂತಿ ಸಿನಿಮಾ ತರ ಆಗುತ್ತೇನೋ, ಅಂತಾನೂ ಸಂಶಯ ವ್ಯಕ್ತಪಡಿಸ್ತಿದ್ದಾರೆ. ಏನಾಗುತ್ತೆ ಅನ್ನೋದನ್ನು ಮುಂದುವರಿದ ಸಂಚಿಕೆಯಲ್ಲಿ ಕಾದು ನೋಡಬೇಕು ಅಷ್ಟೇ. 
 

Latest Videos

click me!