Published : Sep 30, 2026, 07:48 PM ISTUpdated : Sep 30, 2026, 07:53 PM IST
Kavitha gowda bigg boss season 6 trauma: ಕವಿತಾ ಗೌಡ ಬರೋಬ್ಬರಿ 9 ವರ್ಷಗಳ ನಂತರ 'ಜಗದ್ಧಾತ್ರಿ' ಧಾರಾವಾಹಿ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಈ ವೇಳೆ ತೂಕ ಇಳಿಸಿದ ರಹಸ್ಯ, ಪತಿ ಚಂದನ್ ಸಾಥ್ ಹಾಗೂ ಬಿಗ್ ಬಾಸ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಬಿಗ್ ಬಾಸ್ ಸೀಸನ್ 6 ಹೇಗಿತ್ತು? ಕನ್ನಡ ಕಿರುತೆರೆ ಇತಿಹಾಸದಲ್ಲೇ ಚಿನ್ನು ಎಂಬ ಪಾತ್ರದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ನಟಿ ಕವಿತಾ ಗೌಡ, ಬರೋಬ್ಬರಿ 9 ವರ್ಷಗಳ ಸುದೀರ್ಘ ಗ್ಯಾಪ್‌ನ ನಂತರ ಮತ್ತೆ ಧಾರಾವಾಹಿ ಲೋಕಕ್ಕೆ ಮರಳಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಹುನಿರೀಕ್ಷಿತ ‘ಜಗದ್ಧಾತ್ರಿ’ ಧಾರಾವಾಹಿಯ ಮೂಲಕ ಅವರು ಪ್ರಮುಖ ‘ಕೌಶಿಕಿ’ ಪಾತ್ರದಲ್ಲಿ ಕಂಬ್ಯಾಕ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ 18 ಕೆಜಿ ತೂಕ ಇಳಿಸಿಕೊಂಡ ಕಠಿಣ ಜರ್ನಿ, ಬಿಗ್ ಬಾಸ್ ಸೀಸನ್ 6 ರ ಕರಾಳ ಟ್ರಾಮಾ ಹಾಗೂ ಮಿಸ್ ಆದ ಬಿಗ್ ಬಜೆಟ್ ಸಿನಿಮಾಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
25
ಬಿಗ್ ಬಾಸ್ ಮನೆಯಲ್ಲಿ ರಾಕ್ಷಸರಂತಾಗಿದ್ದರು!
ಬಿಗ್ ಬಾಸ್ ಮನೆಯಲ್ಲಿ ರಾಕ್ಷಸರಂತಾಗಿದ್ದರು! ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರು ಪ್ರೆಸ್‌ಮೀಟ್‌ನಲ್ಲಿ "ನನಗೆ ಅತೀ ಹೆಚ್ಚು ಕಷ್ಟ ಕೊಟ್ಟ ಸೀಸನ್ ಅಂದರೆ ಅದು ಸೀಸನ್ 6" ಎಂದಿದ್ದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಕವಿತಾ ಗೌಡ ಆ ದಿನಗಳ ಭಯಾನಕ ನೆನಪುಗಳನ್ನು ಬಿಚ್ಚಿಟ್ಟರು..
"ಸುದೀಪ್ ಸರ್ ವಾರಾಂತ್ಯದಲ್ಲಿ ನೋಡಿಯೇ ಅಷ್ಟು ನೋವು ಅನುಭವಿಸಿದ್ದಾರೆ ಎಂದರೆ, ಇನ್ನು 100 ದಿನ ಒಳಗಿದ್ದ ನನಗೆ ಎಷ್ಟು ಕಷ್ಟವಾಗಿರಬೇಡ? ನಮ್ಮ ಸೀಸನ್‌ನಲ್ಲಿ ಕೆಲವರು ರಾಕ್ಷಸರ ತರಹ ಆಗ್ಬಿಟ್ಟಿದ್ದರು. ಆ ನಾಲ್ಕು ಗೋಡೆಗಳ ಮಧ್ಯೆ ಯಾರು ಸತ್ಯ ಹೇಳ್ತಿದ್ದಾರೆ, ಯಾರು ಸುಳ್ಳು ಹೇಳ್ತಿದ್ದಾರೆ ಅಂತಲೇ ತಿಳಿಯುತ್ತಿರಲಿಲ್ಲ. ಆ ಶೋ ನನಗೆ ತೀವ್ರ ಮಾನಸಿಕ ಆಘಾತ (Trauma) ತಂದಿಟ್ಟಿದೆ. ಅಲ್ಲಿಂದ ಹೊರಬಂದ ಮೇಲೆ ಕೇವಲ 3-4 ಜನರನ್ನು ಬಿಟ್ಟು ನಾನು ಯಾರ ಜೊತೆಗೂ ಮಾತನಾಡಿಲ್ಲ. ಇವತ್ತಿಗೂ ನಾನು ಬಿಗ್ ಬಾಸ್ ಶೋ ನೋಡಲ್ಲ, ಯಾಕೆಂದರೆ ಆ ಸೀಸನ್‌ನ ಕಹಿ ನೆನಪುಗಳು ನನ್ನನ್ನು ಕಾಡುತ್ತವೆ" ಎಂದು ಬೇಸರ ಹೊರಹಾಕಿದರು.
35
79 ಕೆಜಿಯಿಂದ 62 ಕೆಜಿಗೆ ಇಳಿದ ಅದ್ಭುತ ಫಿಟ್‌ನೆಸ್ ಜರ್ನಿ
79 ಕೆಜಿಯಿಂದ 62 ಕೆಜಿಗೆ ಇಳಿದ ಅದ್ಭುತ ಫಿಟ್‌ನೆಸ್ ಜರ್ನಿ ತಮ್ಮ ಮಗುವಿನ ಜನನದ ನಂತರದ ದೈಹಿಕ ಬದಲಾವಣೆ ಮತ್ತು ವೇಟ್‌ಲಾಸ್ ಬಗ್ಗೆ ಮಾತನಾಡಿದ ಅವರು, ಬಾಣಂತನದ ನಂತರ ಅವರ ತೂಕ ಬರೋಬ್ಬರಿ 79 ಕೆಜಿ ತಲುಪಿತ್ತು. ಕಠಿಣ ಪರಿಶ್ರಮ, ವೈದ್ಯರ ಸಲಹೆ ಹಾಗೂ ಅಥ್ಲೀಟ್ ಸ್ನೇಹಿತೆಯ ಮಾರ್ಗದರ್ಶನದಿಂದ ಪ್ರಸ್ತುತ 61-62 ಕೆಜಿಗೆ (ಸುಮಾರು 17-18 ಕೆಜಿ ಇಳಿಕೆ) ತೂಕ ಇಳಿಸಿಕೊಂಡಿದ್ದಾರೆ.
ಈ ಹಂತದಲ್ಲಿ ಪತಿ, ನಟ ಚಂದನ್ ಕುಮಾರ್ ಅವರ ಬೆಂಬಲವನ್ನು ಸ್ಮರಿಸಿದ ಕವಿತಾ, "ನಾನು ಜಿಮ್, ಫಿಟ್‌ನೆಸ್ ಅಂತ ಹೋದಾಗ ಚಂದನ್ ಮಗನನ್ನು ಮನೆಯಲ್ಲೇ ಪ್ರೀತಿಯಿಂದ ನೋಡಿಕೊಂಡರು. ಅವರು ಕೊಟ್ಟ ಧೈರ್ಯದಿಂದಲೇ ನಾನು ಇಂದು ಮತ್ತೆ ತೆರೆಗೆ ಮರಳಲು ಸಾಧ್ಯವಾಯಿತು" ಎಂದು ಹೆಮ್ಮೆಯಿಂದ ಹೇಳಿದರು.
9 ವರ್ಷಗಳ ನಂತರ 'ಕೌಶಿಕಿ'ಯಾಗಿ ಕಂಬ್ಯಾಕ್ 'ಲಕ್ಷ್ಮಿ ಬಾರಮ್ಮ'ದಲ್ಲಿ ಮುಗ್ಧ ಹುಡುಗಿಯಾಗಿ ಕಂಡಿದ್ದ ಕವಿತಾ, 'ಜಗದ್ಧಾತ್ರಿ'ಯಲ್ಲಿ ಸಚಿವರು, ಪೊಲೀಸರೇ ಸೆಲ್ಯೂಟ್ ಹೊಡೆಯುವಂತಹ ಅತ್ಯಂತ ಬಲಿಷ್ಠ, ದಿಟ್ಟ ಮಹಿಳೆ ‘ಕೌಶಿಕಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನೆಮಾ ರೇಂಜ್‌ನಲ್ಲಿ ಈ ಧಾರಾವಾಹಿ ಮೂಡಿಬರುತ್ತಿದ್ದು, ತಮ್ಮ ಪಾತ್ರ ಪ್ರತಿಯೊಬ್ಬ ಹೆಣ್ಣಿಗೂ ಸ್ಫೂರ್ತಿ ನೀಡುತ್ತದೆ ಎಂದರು.
55
ಮಿಸ್ ಆದ ಹಿಟ್ ಸಿನಿಮಾಗಳ ಬಗ್ಗೆ ಬೇಸರ
ಮಿಸ್ ಆದ ಹಿಟ್ ಸಿನಿಮಾಗಳ ಬಗ್ಗೆ ಬೇಸರ ಆರಂಭದ ದಿನಗಳಲ್ಲಿ ಸಿನಿಮಾರಂಗದ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡುವವರು ಇಲ್ಲದ ಕಾರಣ, ತಮ್ಮ ಕೈಗೆ ಬಂದ ಹಲವು ದೊಡ್ಡ ಹಿಟ್ ಸಿನಿಮಾಗಳನ್ನು ಕೈಚೆಲ್ಲಿದ್ದಾಗಿ ಕವಿತಾ ಒಪ್ಪಿಕೊಂಡರು. "ಇವತ್ತು ಆ ಸಿನಿಮಾಗಳ ನಿರ್ದೇಶಕರು ಸಿಕ್ಕಾಗ, 'ಆ ಕಥೆ ನಿನಗೋಸ್ಕರವೇ ಬರೆದಿದ್ದು, ನೀನು ಮಿಸ್ ಮಾಡಿಕೊಂಡೆ' ಎನ್ನುವಾಗ ತುಂಬಾ ಬೇಜಾರಾಗುತ್ತದೆ. ಆ ಚಿತ್ರಗಳಲ್ಲಿ ನಟಿಸಿದವರು ಇಂದು ದೊಡ್ಡ ಹೀರೋಯಿನ್ ಆಗಿದ್ದಾರೆ. ಆದರೆ ರಾಜ್ ಬಿ. ಶೆಟ್ಟಿ, ದಿಗಂತ್ ಅವರೊಂದಿಗೆ ನಟಿಸಿದ ಹೆಮ್ಮೆ ನನಗಿದೆ" ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.