ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಬದುಕಿದ್ದರೂ ಆಕೆಗೆ ಹೊಸ ಕಂಟಕ ಎದುರಾಗಿದೆ. ಆಸ್ಪತ್ರೆಯಲ್ಲಿ ಭೂಮಿಕಾಳನ್ನು ನೋಡಿದ ದೀಪಿಕಾ, ಶಕುಂತಲಾಗೆ ವಿಷಯ ತಿಳಿಸಿದ್ದಾಳೆ. ಇದರಿಂದ ಜೈದೇವ್ ಮತ್ತು ಶಕುಂತಲಾರಿಂದ ಭೂಮಿಕಾ ಜೀವಕ್ಕೆ ಅಪಾಯವಿದೆಯಾ ಎಂಬ ಆತಂಕ ಶುರುವಾಗಿದೆ.
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಯಾರೂ ಊಹಿಸದ ಟ್ವಿಸ್ಟ್ ಸಿಕ್ಕಿದೆ. ಭೂಮಿಕಾ ಬದುಕೇ ಇಲ್ಲ ಎಂದುಕೊಳ್ಳಲಾಗಿತ್ತು. ಆದರೆ ಭೂಮಿಕಾ ಬದುಕಿದ್ದಾಳೆ. ಬದುಕಿದ್ದರೂ ಆಕೆಗೆ ನೆನಪಿನ ಶಕ್ತಿ ಹೋಗಿರಬಹುದು ಎಂದಿದ್ದರೆ, ಆಕೆಗೆ ಅದೂ ನೆನಪಿದೆ.
26
ಆಗಬಾರದ್ದು ಆಯಿತು
ಹಾಗಿದ್ದರೆ, ಭೂಮಿಕಾ ಬಂದರೆ ಅಲ್ಲಿಗೆ ಎಲ್ಲಾ ಸಮಸ್ಯೆ ಮುಗಿಯತ್ತೆ ಎಂದುಕೊಂಡರೆ ಇಲ್ಲಿಆಗಿದ್ದೇ ಬೇರೆ. ದೀಪಿಕಾಳನ್ನು ಕರೆದುಕೊಂಡು ಮಲ್ಲಿ ಆಸ್ಪತ್ರೆಯ ರೋಗಿಗಳಿಗೆ ಸಿಹಿ ಹಂಚಲು ಹೋದಾಗ ಅಲ್ಲಿ ಆಗಬಾರದ್ದು ಆಗಿ ಹೋಗಿದೆ.
36
ಭೂಮಿಕಾ-ದೀಪಿಕಾ ಎದುರು ಬದುರು
ಅದೇ ಆಸ್ಪತ್ರೆಯ ಬೆಡ್ ಮೇಲೆ ಭೂಮಿಕಾ ಮಲಗಿದ್ದನ್ನು ದೀಪಿಕಾ ನೋಡಿದ್ದಾಳೆ. ಭೂಮಿಕಾ ಎಚ್ಚರವಿಲ್ಲದೇ ಮಲಗಿದ್ದಾಳೆ. ಅದನ್ನು ಕಂಡು ದೀಪಿಕಾಗೆ ಶಾಕ್ ಆಗಿದೆ.
ಕೂಡಲೇ ಆಕೆ ಶಕುಂತಲಾಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಇಷ್ಟಾದರೆ ಇನ್ನು ಭೂಮಿಕಾ ಕಥೆ ಮುಗಿದಂತೆ. ಜೈದೇವ ಮತ್ತು ಶಕುಂತಲಾ ಸೇರಿ ಭೂಮಿಕಾಗೆ ಏನೋ ಒಂದು ಅನಾಹುತ ಮಾಡುವುದಂತೂ ಗ್ಯಾರೆಂಟಿ.
56
ಭೂಮಿಕಾ ಅಪಾಯದಲ್ಲಿ!
ಭೂಮಿಕಾ ಹುಷಾರಾಗ್ತಿರೋದನ್ನು ನೋಡಿದ್ದ ವೀಕ್ಷಕರಿಗೆ ಇದೀಗ ಭಾರಿ ಆಘಾತ ತಂದಿದೆ. ಭೂಮಿಕಾಳನ್ನು ಆಸ್ಪತ್ರೆಯಲ್ಲಿಯೇ ಏನಾದರೂ ದೀಪಿಕಾ ಮಾಡಬಹುದು. ಇಲ್ಲವೇ ಅಲ್ಲಿಗೆ ಬರುವ ಜೈದೇವ ಮತ್ತು ಶಕುಂತಲಾ ಏನಾದರೂ ಅನಾಹುತ ಮಾಡುವುದಂತೂ ಗ್ಯಾರೆಂಟಿ.
66
ಮುಂದೇನಾಗುತ್ತೋ ನೋಡಬೇಕಿದೆ
ಹಾಗಿದ್ದರೆ ಭೂಮಿಕಾ ಗತಿಯೇನು ಎನ್ನುವ ಆತಂಕದಲ್ಲಿದ್ದಾರೆ ಸೀರಿಯಲ್ ಪ್ರಿಯರು. ದೀಪಿಕಾಗೆ ಭೂಮಿಕಾನೇ ತನ್ನ ಅಕ್ಕ ಎಂದು ತಿಳಿದು ಆಕೆ ಒಳ್ಳೆಯವಳಾದರೆ ಪರವಾಗಿಲ್ಲ. ಅಕ್ಕ-ತಂಗಿ ಸೇರಿ ಎಲ್ಲರನ್ನೂ ಆಟವಾಡಿಸಬಹುದು. ಆದರೆ ಮುಂದೇನಾಗುತ್ತೋ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.