Published : Jun 15, 2025, 05:04 PM ISTUpdated : Jun 15, 2025, 05:50 PM IST
ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ʼಬಿಗ್ ಬಾಸ್ ಕನ್ನಡ ಸೀಸನ್ 12ʼ ಶೋ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ವೀಕ್ಷಕರ ಪ್ರಕಾರ ಯಾರು? ಯಾರು ಸ್ಪರ್ಧಿಗಳು ಇರಬೇಕಂತೆ.
ಮುಂದಿನ ಸೀಸನ್‌ಗಳನ್ನು ನಾನು ನಿರೂಪಣೆ ಮಾಡೋದಿಲ್ಲ ಎಂದು ಕಿಚ್ಚ ಸುದೀಪ್ ಅವರು ಈ ಹಿಂದೆ ಟ್ವೀಟ್ ಮಾಡಿ ಅಧಿಕೃತ ಮಾಹಿತಿ ನೀಡಿದ್ದರು. ಅಂದಹಾಗೆ ಈ ಬಾರಿ ಸೀಸನ್ ಯಾರು ನಿರೂಪಣೆ ಮಾಡಲಿದ್ದಾರೆ ಎಂಬ ಕುತೂಹಲ ಜಾಸ್ತಿ ಆಗಿದೆ. ನಟ ಕಿಚ್ಚ ಸುದೀಪ್ ಬದಲು ಇನ್ಯಾರು ನಿರೂಪಣೆ ಮಾಡಬಹುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಅಂದಹಾಗೆ ಆಯೋಜಕರು ಕೂಡ ಕಿಚ್ಚ ಸುದೀಪ್ ಅವರ ಮನವೊಲಿಸುವುದಾಗಿ ಹೇಳಿದ್ದರು. ಈ ಮಧ್ಯೆ ಯಾರು ಯಾರು ಬಿಗ್ ಬಾಸ್ ಶೋನಲ್ಲಿ ಇರಬೇಕು ಎಂದು ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
28
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್
ವರ್ಷಾ ಕಾವೇರಿ, ಸಮೀರ್, ಭೂಮಿಕಾ ಬಸವರಾಜ್ ಕೂಡ ಬಿಗ್ ಬಾಸ್ ಶೋಗೆ ಬಂದರೆ ಚೆನ್ನ ಎಂಬ ಅಭಿಪ್ರಾಯ ಇದೆ.
38
ವರುಣ್ ಆರಾಧ್ಯ
ಬೃಂದಾವನ ಧಾರಾವಾಹಿಯಲ್ಲಿ ನಟಿಸಿರುವ ವರುಣ್ ಆರಾಧ್ಯ ಅವರು ಬಿಗ್ ಬಾಸ್ ಶೋಗೆ ಬರಲಿ ಎಂದು ವೀಕ್ಷಕರು ಬಯಸುತ್ತಿದ್ದಾರೆ.
ಟಿವಿ ಕಾರ್ಯಕ್ರಮ ನೀಡುವ ಆನಂದ್ ಗುರೂಜಿ ಅವರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದರೆ ಹೇಗಿರಬಹುದು ಎಂಬ ಕುತೂಹಲ ಇದೆ.
58
ರೇಷ್ಮಾ
ಗಿಚ್ಚಿ ಗಿಲಿಗಿಲಿ ಖ್ಯಾತಿಯ ರೇಷ್ಮಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ.
68
ಮಿಂಚು
ಕನ್ನಡದ ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರೋ ಮಿಂಚು ಈ ಬಾರಿಯ ಬಿಗ್ ಬಾಸ್ ಪ್ರವೇಶ ಮಾಡ್ತಾರಾ ಎಂದು ಕಾದು ನೋಡಬೇಕಿದೆ.
78
ದಿವ್ಯಾ ಗೌಡ
ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಈ ಬಾರಿ ಬಿಗ್ ಬಾಸ್ ಶೋನಲ್ಲಿ ಇರಬೇಕು ಎಂದು ವೀಕ್ಷಕರು ಬಯಸುತ್ತಿದ್ದಾರೆ.
88
ಮಡೆನೂರು ಮನು
ಈಗಾಗಲೇ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದು, ʼಕುಲದಲ್ಲಿ ಕೀಳ್ಯಾವುದೋʼ ಸಿನಿಮಾದಲ್ಲಿ ಅಭಿನಯಿಸಿರುವ ಮನು ವಿರುದ್ಧ ಅ*ತ್ಯಾಚಾರ ಆರೋಪ ಬಂದಿತ್ತು. ಅಷ್ಟೇ ಅಲ್ಲದೆ ಕನ್ನಡದ ನಟರ ವಿರುದ್ಧ ಮಾತನಾಡಿರುವ ಆಡಿಯೋ ಕೂಡ ವೈರಲ್ ಆಗಿತ್ತು. ಅಂದಹಾಗೆ ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ ಎನ್ನಲಾಗಿದೆ. ಹೀಗಾಗಿ ಇವರಿಗೆ ಬಿಗ್ ಬಾಸ್ ಅವಕಾಶ ಸಿಗತ್ತೋ ಇಲ್ಲವೋ ಎಂದು ಕಾದು ನೋಡಬೇಕಿದೆ.