ಇದ್ದಕ್ಕಿದ್ದಂತೆ 'ಶ್ರೀಗೌರಿ' ಸೀರಿಯಲ್ ಮುಕ್ತಾಯ; ಪಾರ್ಟಿ ಮಾಡುತ್ತಿರುವ ತಂಡದ ಫೋಟೋ ವೈರಲ್

First Published | Dec 28, 2024, 11:41 AM IST

ದಿಢೀರನ ಪ್ರಸಾರ ನಿಲ್ಲಿಸಿದ ಶ್ರೀಗೌರಿ ಸೀರಿಯಲ್. ರಾಜೇಶ್ ಧ್ರುವ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್..... 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀಗೌರಿ ಧಾರಾವಾಹಿ ದಿಢೀರನೆ ಮುಕ್ತಾಯ ಮಾಡಲು ಮುಂದಾಗಿದ್ದಾರೆ. ಈಗ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಸುಮಾರು 248 ಎಪಿಸೋಡ್‌ಗಳನ್ನು ಪ್ರಸಾರ ಮಾಡಿರುವ ಶ್ರೀಗೌರಿ ಧಾರಾವಾಗಿ ಯಾವ ಕಾರಣಕ್ಕೆ ಮುಕ್ತಾಯವಾಗುತ್ತಿದೆ ಅನ್ನೋ ಸ್ಪಷ್ಟನೆ ಇಲ್ಲ. ಆದರೆ ಕಲಾವಿದರು ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ದಾರೆ. 

Tap to resize

'ಶ್ರೀಗೌರಿ ಕುಟುಂಬ'ತಂಡದವರು ಒಟ್ಟಿಗೆ ಸೇರಿರುವ ಸಮಯದಲ್ಲಿ ನನಗೆ ತುಂಬಾ ಖುಷಿಯಾಗುತ್ತಿದೆ ಹಾಗೂ ಹೆಮ್ಮೆ ಇದೆ. ಈ ಅದ್ಭುತ ಜರ್ನಿಯಲ್ಲಿ ಪ್ರತಿಯೊಬ್ಬರು ವಿಶೇಷ ಸ್ಥಾನ ಪಡೆದಿರುತ್ತಾರೆ' ಎಂದು ರಾಜೇಶ್ ಬರೆದುಕೊಂಡಿದ್ದಾರೆ.

ಪ್ರತಿಯೊಬ್ಬರು ಕನಸನ್ನು ನನಸು ಮಾಡಿದ್ದು ಇದೇ ಧಾರಾವಾಹಿ. ಅದ್ಭುತ ಪ್ರತಿಭೆಗಳಿಗೆ ಅವಕಾಶ ನೀಡಿದೆ. ಈ ತಂಡ ಸುಮ್ಮನೆ ಕಲೆ ಅಲ್ಲ ವಿಶೇಷವಾದ ಸಂಬಂಧ ಹೊಂದಿದ್ದೀವಿ.

 'ಒಳ್ಳೆಯ ನೆನಪುಗಳನ್ನು ಕಟ್ಟಿಕೊಂಡಿದ್ದೀವಿ. ಒಬ್ಬರು ಮತ್ತೊಬ್ಬರಿಗೆ ಸ್ಪೂರ್ತಿಯಾಗಿದ್ದೀವಿ. ನಾವೆಲ್ಲರೂ ಚಾಲೆಂಜ್‌ಗಳನ್ನು ಎದುರಿಸಿದ್ದೀವಿ ಹಾಗೂ ಯಶಸ್ಸನ್ನು ಸಂಭ್ರಮಿಸಿದ್ದೀವಿ ಮತ್ತು ಒಟ್ಟಿಗೆ ಬೆಳೆದಿದ್ದೀವಿ'

'ಇಂದು ನಾವು ನಮ್ಮ ಕೆಲಸವನ್ನು ಮಾತ್ರ ಸಂಭ್ರಮಿಸುತ್ತಿಲ್ಲ ನನ್ನ ಸ್ನೇಹ ನಮ್ಮ ಎಮೋಷನ್‌ಗಳನ್ನು ಆಚರಿಸುತ್ತಿದ್ದೀವಿ. ನಾವೆಲ್ಲರೂ ಒಟ್ಟು ಸೇರಿದ್ದರೆ ಅದ್ಭುತ ಸಾಧನೆ ಮಾಡಬಹುದು' ಎಂದು ರಾಜೇಶ್ ಬರೆದುಕೊಂಡಿದ್ದಾರೆ. 

Latest Videos

click me!