ಸ್ಯಾಂಡಲ್’ವುಡ್ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್ (Music director Gurukiran)ಕುರಿತು ಪರಿಚಯ ಬೇಕಿಲ್ಲ. ಅವರ ಪತ್ನಿ ಪಲ್ಲವಿ ಶೆಟ್ಟಿ ಕೂಡ, ಗಂಡನ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ಇವರ ಮಕ್ಕಳ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ ಅನ್ಸತ್ತೆ.
ಗುರುಕಿರಣ್ ಮತ್ತು ಪಲ್ಲವಿ (Pallavi Shetty) ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಹುಡುಗ ಮತ್ತೊಬ್ಬಳು ಹೆಣ್ಣು ಮಗಳು. ಮಗ ಹೆಚ್ಚಾಗಿ ಮೀಡಿಯಾದಿಂದ ದೂರವೇ ಉಳಿದಿದ್ದಾರೆ. ಆದರೆ ಮಗಳು ಹಲವಾರು ಸಿನಿಮಾ ಕಾರ್ಯಕ್ರಮಗಳಲ್ಲಿ, ಸೆಲೆಬ್ರಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಯುಐ ಸಿನಿಮಾದ ಪ್ರೀಮಿಯರ್ ಶೋ ವೇಳೆ ಉಪೇಂದ್ರ ಮಗಳ ಜೊತೆ ಗುರುಕಿರಣ್ ಪುತ್ರಿ ಕಾಣಿಸಿಕೊಂಡಿದ್ದರು. ಗುರುಕಿರಣ್ ಮಗಳ ಲುಕ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಯಾವ ಹೀರೋಯಿನ್ ಗೂ ಕಡಿಮೆ ಇಲ್ಲ ಎಂದಿದ್ದರು.
ಗುರುಕಿರಣ್ ಪುತ್ರಿ ಹೆಸರು ಶ್ರಾವ್ಯ ಶೆಟ್ಟಿ (Shravya Shetty). ಇವರು ಕೂಡ ಅಮ್ಮನಂತೆ ತುಂಬಾನೆ ಮುದ್ದಾಗಿದ್ದು, ಹೆಚ್ಚಾಗಿ ಅಮ್ಮನ ಜೊತೆ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಶ್ರಾವ್ಯ ಏನ್ ಮಾಡ್ತಿದ್ದಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲ, ಆದರೆ ಈಕೆಗೆ ಈಗಾಗಲೇ ಅಭಿಮಾನಿಗಳು ಹುಟ್ಟಿಕೊಂಡಿದ್ದು ಸುಳ್ಳಲ್ಲ.
ಇತ್ತೀಚೆಗೆ ಶ್ರಾವ್ಯ ಶೆಟ್ಟಿ ಫೋಟೊಗಳು ಸಹ ವೈರಲ್ ಆಗಿದ್ದವು. ಡಿಸೈನರ್ ಹೌಸ್ ಒಂದಕ್ಕೆ ಮಾಡೆಲ್ ಆಗಿ ಶ್ರಾವ್ಯ ಶೆಟ್ಟಿ ಪೋಸ್ ನೀಡಿದ್ದರು. ಕೆಂಪು ಬಣ್ಣದ ಲೆಹೆಂಗಾ ಧರಿಸಿ, ಡೈಮಂಡ್ ನೆಕ್ಲೆಸ್ ಧರಿಸಿ ಹೀರೋಯಿನ್ ನಂತೆ ಕಾಣಿಸುತ್ತಿದ್ದರು.
ಶ್ರಾವ್ಯ ಶೆಟ್ಟಿ ಬೋಲ್ಡ್ ಲುಕ್, ಚೆಂದವನ್ನು ನೋಡಿದ್ರೆ, ಸದ್ಯದಲ್ಲೇ ಹೀರೋಯಿನ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಆದರೆ ಇವರು ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುತ್ತಾರೋ, ಇಲ್ಲವೋ ಅನ್ನೋದು ಮಾತ್ರ ಗೊತ್ತಿಲ್ಲ.
ಹಲವಾರು ಯೂಟ್ಯೂಬ್ ಚಾನೆಲ್ ಗಳು ಶ್ರಾವ್ಯ ಶೆಟ್ಟಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಫೋಟೊ, ವಿಡೀಯೋಗಳನ್ನು ಅಪ್ ಲೋಡ್ ಕೂಡ ಮಾಡಿವೆ. ಆದರೆ ಶ್ರಾವ್ಯ ಸೋಶಿಯಲ್ ಮೀಡಿಯಾದಿಂದ ದೂರವೇ ಉಳಿದುಕೊಂಡಿದ್ದಾರೆ.