ಬಿಬಿ ರೆಸಾರ್ಟ್‌ನಲ್ಲಿ ಚಿಲ್ಲರೆ ಬುದ್ಧಿ ತೋರಿಸಿದ ಚೈತ್ರಾ ಕುಂದಾಪುರ; ಫೋಟೋ ವೈರಲ್

First Published | Dec 27, 2024, 11:05 AM IST

ಮಾತಿನ ಮಲ್ಲಿ ಚೈತ್ರಾ ಕುಂದಾಪುರ ಜಗಳ ಮಾಡೋದು ಬಿಟ್ಟರೆ ಮತ್ತೊಬ್ಬರ ಜೊತೆ ಹೇಗಿರಬೇಕು ಎಂದು ಚೂರು ಗೊತ್ತಿಲ್ಲ ಅಂತಿದ್ದಾರೆ ವೀಕ್ಷಕರು.....
 

ಬಿಗ್ ಬಾಸ್ ಸೀಸನ್ 11 ಯಶಸ್ವಿಯಾಗಿ 13ನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ಎಲಿಮಿನೇಷನ್‌ ಇಲ್ಲದ ಕಾರಣ ಈ ವಾರ ಮಿಡ್ ವೀಕ್ ಅಥವಾ ಡವಲ್ ಎಲಿಮಿನೇಷನ್‌ ಇರಲಿದೆ ಎನ್ನಲಾಗುತ್ತಿದೆ.

ಹೀಗಾಗಿ ಸ್ಪರ್ಧಿಗಳು ಆದಷ್ಟು ಶ್ರಮ ಹಾಕಿ ತಮ್ಮ ಟಾಸ್ಕ್‌ಗಳನ್ನು ಮಾಡುತ್ತಿದ್ದಾರೆ. ಈ ವಾರದ ಟಾಸ್ಕ್‌ ಬಿಬಿ ರೆಸಾರ್ಟ್‌. ಎರಡು ತಂಡಗಳಿದ್ದು, ಒಂದಕ್ಕೆ ಕ್ಯಾಪ್ಟನ್ ಭವ್ಯಾ ಗೌಡ ಮತ್ತೊಂದು ತಂಡಕ್ಕೆ ಚೈತ್ರಾ ಕುಂದಾಪುರ ಲೀಡರ್.

Tap to resize

ಚೈತ್ರಾ ಕುಂದಾಪುರ ರವರ ತಂಡ ಅತಿಥಿಗಳಾಗಿ ಬಂದಾಗ ಭವ್ಯಾ ಗೌಡರವರ ತಂಡ ಸಿಬ್ಬಂದಿ ಆಗಿರುತ್ತಾರೆ. ಚೈತ್ರಾ ತಂಡದವರು ಕೇಳುವ ಪ್ರತಿಯೊಂದು ಸೌಕರ್ಯವನ್ನು ಡಿಮ್ಯಾಂಡ್ ಮಾಡಿ ಎದುರಾಳಿ ತಂಡದಿಂದ ಪಡೆಯಬಹುದು.

ಸಾಮಾನ್ಯವಾಗಿ ರೆಸಾರ್ಟ್‌ಗೆ ಯಾರೇ ಹೋದರೂ ಅಲ್ಲಿನ ಸಿಬ್ಬಂದಿ ಮೇಲೆ ಸುಖಸುಮ್ಮನೆ ದಬ್ಬಾಳಿಕೆ ಮಾಡುವುದಿಲ್ಲ. ಅಥವಾ ರೆಸಾರ್ಟ್‌ ನಮ್ಮ ಮನೆ ಅನ್ನೋ ರೀತಿಯಲ್ಲಿ ಬೇಕಾ ಬಿಟ್ಟಿ ಗಲೀಜು ಮಾಡುವುದಿಲ್ಲ ಆದರೆ ಇದನ್ನು ಚೈತ್ರಾ ಮಾಡಿದ್ದಾರೆ.

ರಜತ್‌ ಬಳಿ ಬ್ರೆಡ್‌ ಜ್ಯಮ್ ಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ. ಕಷ್ಟ ಪಟ್ಟು ಮಾಡಿಕೊಟ್ಟ ಮೇಲೆ ಅದೇ ಬ್ರೆಡ್‌ನ ಅವರ ಮೈ ಮೇಲೆ ಎಸೆಯುತ್ತಾರೆ. ಯಾರು ಸಿಬ್ಬಂದಿಗಳಿಗೆ ಈ ರೀತಿ ಅವಮಾನ ಮಾಡುತ್ತಾರೆ? ಅವರ ವಸ್ತ್ರಗಳನ್ನು ಹಾಳು ಮಾಡುತ್ತಾರೆ?

 ಮತ್ತೊಂದು ಸಲ ಸೋಡಾ ಪಾನಿಯ ಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ. ಮ್ಯಾನೇಜರ್‌ ಆಗಿದ್ದ ಮೋಕ್ಷಿತಾರನ್ನು ಕರೆದು ಬೇಕೆಂದು ಗ್ಲಾಸ್‌ನಿಂದ ಸೋಡಾನ ಟೆಬಲ್‌ ಮೇಲೆ ಹಾಕಿ  ಕ್ಲೀನ್ ಮಾಡಲು ಡಿಮ್ಯಾಂಡ್ ಮಾಡುತ್ತಾರೆ. 

ರೆಸಾರ್ಟ್‌ಗೆ ಬಂದಿರುವ ಮತ್ತೊಬ್ಬ ಗೆಸ್ಟ್‌ ಸಿಬ್ಬಂದಿಗಳ ಜೊತೆ ಜಗಳ ಮಾಡುತ್ತಿದ್ದರೂ ಚೈತ್ರಾ ಮೂಗು ತೂರಿಸಿಕೊಂಡು ಜಗಳ ಮಾಡಲು ಮುಂದಾಗುತ್ತಿದ್ದರು. ಹೀಗಾಗಿ ಚೈತ್ರಾ ಚಿಲ್ಲರೆ ಆಟ ಆಡ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Latest Videos

click me!