Punyavathi : ಪದ್ಮಿನಿಯನ್ನು ಆಟವಾಡಿಸಲು ನಂದನ್ ಪ್ಲಾನ್, ಪೂರ್ವಿ ಸಾಥ್

First Published | May 31, 2023, 10:03 AM IST

ಪುಣ್ಯವತಿ ಸೀರಿಯಲ್ ನಲ್ಲಿ ಕೊನೆಗೂ ಪ್ರೇಕ್ಷಕರ ಇಷ್ಟದಂತೆ ಮತ್ತೆ ಪದ್ಮಿನಿ - ನಂದನ್ ಒಂದಾಗ್ತಾ ಇದ್ದಾರೆ. ಪದ್ಮಿನಿ ಏನೂ ತಪ್ಪು ಮಾಡಿಲ್ಲ ಎಂದು ತಿಳಿದುಕೊಂಡಿರುವ ನಂದನ್, ಇದೀಗ ಪದ್ಮಿನಿಯನ್ನು ಆಟವಾಡಿಸಲು ಪ್ಲ್ಯಾನ್ ಮಾಡಿದ್ದು, ಅದಕ್ಕೆ ಪೂರ್ವಿ ಸಾಥ್ ನೀಡಿದ್ದಾಳೆ.

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಪುಣ್ಯವತಿ (Punyavathi) ಸೀರಿಯಲ್ ನಲ್ಲಿ ಇಷ್ಟು ದಿನ ಪದ್ಮಿನಿ ಮತ್ತು ನಂದನ್ ಮಧ್ಯೆ ಇದ್ದ ವೈಮನಸ್ಸು ದೂರವಾಗಿದೆ, ಪದ್ಮಿನಿಯ ತಪ್ಪೇನಿಲ್ಲ ಎಂದು ಅರ್ಥ ಮಾಡಿಕೊಂಡಿರುವ ನಂದನ್ ಈಗ ಪದ್ಮಿನಿಯನ್ನು ಆಟವಾಡಿಸಲು ತಯಾರಿ ನಡೆಸಿದ್ದಾನೆ. 

ಮದುವೆ ಮನೆಯಿಂದ ಡ್ಯಾನ್ಸ್ ಗೆ ಎಂದು ಹೋಗಿದ್ದ ಪದ್ಮಿನಿ, ನಂದನ್ ಗಾಗಿ ಲೆಟರ್ (letter) ಬರೆದಿದ್ದಳು. ಆದರೆ ಆ ಪತ್ರ ನಂದನ್ ಕೈ ಸೇರೇ ಇರಲಿಲ್ಲ. ಪದ್ಮಿನಿ ತಡವಾಗಿ ಬಂದಿದ್ರಿಂದ ನಂದನ್ ಪೂರ್ವಿ ಕುತ್ತಿಗೆಗೆ ತಾಳಿ ಕಟ್ಟೋ ಹಾಗೆ ಆಯ್ತು. ತಾನು ತಾಳಿ ಕಟ್ಟಿದ್ದು, ಪದ್ಮಿನಿಗೆ ಅಲ್ಲ, ಎಲ್ಲಾ ಸೇರಿ ತನಗೆ ಮೋಸ ಮಾಡಿದ್ದಾರೆ ಎಂದು ನಂದನ್ ಗೆ ಪದ್ಮಿನಿ ಮೇಲೆ ವೈಮನಸ್ಸು ಮೂಡಿತ್ತು. 

Tap to resize

ಇದರಿಂದಾಗಿ ಪದ್ಮಿನಿಯಿಂದ ಅಂತರ ಕಾಯ್ದುಕೊಂಡಿದ್ದ ನಂದನ್ (Nandan) ಕೈಗೆ ಇದೀಗ ಪತ್ರ ಸೇರಿದ್ದು, ನಿಜ ಏನೆಂದು ಅರ್ಥ ಮಾಡಿಕೊಂಡಿದ್ದಾನೆ. ಆದರೆ ನಂದನ್‌ಗೆ ತನ್ನ ಮೇಲೆ ಯಾವುದೇ ಕೋಪ ಇಲ್ಲ ಅನ್ನೋದು ಪದ್ಮಿನಿಗೆ ಗೊತ್ತಿಲ್ಲ. ಹಾಗಾಗಿ ಆಕೆಯನ್ನು ಆಟವಾಡಿಸಲು ಹೊರಟಿದ್ದಾನೆ ನಂದನ್. 

ಒಂದು ವಾರದಿಂದ ಪದ್ಮಿನಿಯನ್ನು ತುಂಬಾ ಅಳಿಸಿರುವ ನಂದನ್‌ಗೆ ತನ್ನ ತಪ್ಪಿನ ಅರಿವಾಗಿದೆ, ನನ್ನಿಂದಾಗಿ ಅತ್ತೊಳನ್ನು ಇನ್ನು ಮುಂದೆ ಪ್ರತಿ ಕ್ಷಣವೂ ನಗಿಸೋ ಹಾಗೆ ಮಾಡಬೇಕು. ಅದಕ್ಕಾಗಿ ಏನಾದ್ರೂ ಮಾಡಬೇಕೆಂದು ನಂದನ್ ಪ್ಲ್ಯಾನ್ ಮಾಡ್ತಾನೆ. 
 

ಕಾಫಿ ಕುಡಿಯೋ ನೆಪದಲ್ಲಿ ಪದ್ಮಿನಿ (Padmini) ಬಳಿ ಬರೋ ನಂದನ್ ಗೆ ಅಕ್ಕನ ಮೇಲೆ ಕೋಪ ಇಲ್ಲ ಅನ್ನೋದು ಪೂರ್ವಿಗೆ ಗೊತ್ತಾಗಿ, ಭಾವನ ಬಳಿ ಬಂದು ಬಟ್ಟೆ ಮಡಚಿ ಇಡೋಕೆ ಅಕ್ಕನಿಗೆ ಗೊತ್ತಾಗದಂತೆ ಸಹಾಯ ಮಾಡಿರೋದು ನೀವೆ ಅಂತ ನಂಗೆ ಗೊತ್ತಾಗಿದೆ, ಎನ್ನುತ್ತಾಳೆ ಪೂರ್ವಿ. 

ತನಗೆ ಕೋಪ ಇಲ್ಲ ಅನ್ನೋದನ್ನು ಒಪ್ಪಿಕೊಂಡ ನಂದನ್, ಪದ್ಮಿನಿ ಆಟವಾಡಿಸಲು ಪ್ಲ್ಯಾನ್ ಮಾಡ್ತಿರೋದಾಗಿ ಹೇಳ್ತಾನೆ. ಸಂತೋಷದಿಂದಲೇ ತನ್ನ ಅಕ್ಕನನ್ನು ನಗಿಸೋಕೆ ಬಾವನ ಪ್ಲ್ಯಾನ್ ಗೆ ಸಾಥ್ ಕೊಡುತ್ತಾಳೆ ಪೂರ್ವಿ. ಮುಂದೇನಾಗುತ್ತೆ ನೋಡಬೇಕು. 

Latest Videos

click me!