Shobitha Shivanna: ಸಪ್ತಪದಿ ತುಳಿದ ಬ್ರಹ್ಮ ಗಂಟು ಸೀರಿಯಲ್ ನಟಿ

First Published | May 25, 2023, 8:12 PM IST

ಬ್ರಹ್ಮ ಗಂಟು ಸೀರಿಯಲ್ ನಲ್ಲಿ ಕ್ಯೂಟ್ ವಿಲನ್ ಆಗಿ ಕಾಣಿಸಿಕೊಂಡಿದ್ದ ನಟಿ ಶೋಭಿತಾ ಶಿವಣ್ಣ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ನಟಿಗೆ ಕಿರುತೆರೆಯ ನಟರು ಶುಭ ಹಾರೈಸಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ. ‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಖ್ಯಾತಿ ಪಡೆದ ಶೋಭಿತಾ ಶಿವಣ್ಣ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮದ ಕ್ಷಣಗಳನ್ನು ಮದುವೆಗೆ ಹಾಜರಾಗಿದ್ದ ಬ್ರಹ್ಮಗಂಟು ಸೀರಿಯಲ್ ನ ಇತರ ನಟರು ಶೇರ್ ಮಾಡಿದ್ದಾರೆ.

ನಟಿ ಶೋಭಿತಾ ಶಿವಣ್ಣ ಅವರ ವಿವಾಹ ಅದ್ಧೂರಿಯಾಗಿ ನಡೆದಿದ್ದು, ಹಿಂದೂ ಸಂಪ್ರದಾಯದಂತೆ ಬಂಧು, ಬಾಂಧವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಶೋಭಿತಾ ವಿವಾಹ ಸಂಭ್ರಮದಿಂದ ಜರುಗಿದೆ.


ನಟಿ ಶೋಭಿತಾ ಶಿವಣ್ಣ (Shobitha Shivanna) ಅವರ ಮದುವೆಗೆ ‘ಬ್ರಹ್ಮಗಂಟು’ ಧಾರಾವಾಹಿಯ ಕಲಾವಿದರು ಹಾಗೂ ಕಿರುತೆರೆ ನಟ - ನಟಿಯರು ಹಾಜರಾಗಿದ್ದರು. ಇವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡುವ ಮೂಲಕ ನವದಂಪತಿಗೆ ಶುಭ ಹಾರೈಸಿದರು.

ಸಕಲೇಶಪುರ ಮೂಲದವರಾದ ಶೋಭಿತಾ ಶಿವಣ್ಣ ಕಿರುತೆರೆ ಹಾಗೂ ಹಿರಿತೆರೆಯಲ್ಲೂ ಮಿಂಚಿದ್ದಾರೆ. ಇವರು ಲಕ್ಷ್ಮೀ ಬಾರಮ್ಮ  ಸೀರಿಯಲ್ ನ ನಟ ಚಂದು ಗೌಡ ಜೊತೆ ಶತಭಿಷೆ ಚಿತ್ರದಲ್ಲೂ ನಟಿಸಿದ್ದರು. 

ಬ್ರಹ್ಮಗಂಟು ಮಾತ್ರವಲ್ಲದೇ 'ನಿನ್ನಿಂದಲೇ' ಧಾರಾವಾಹಿಯಲ್ಲಿ ಸಹ ಇವರು ನಟಿಸಿದ್ದರು. ಜೊತೆಗೆ 'ವಂದನಾ', 'ಅಟೆಂಪ್ಟ್‌ ಟು ಮರ್ಡರ್‌', 'ಜಾಕ್‌ಪಾಟ್' ಸಿನಿಮಾಗಳಲ್ಲಿ ಸಹ ಶೋಭಿತಾ ನಟಿಸಿದ್ದಾರೆ. 

ಸಿನಿಮಾ, ಕಿರುತೆರೆಯಲ್ಲಿ ಮಿಂಚಿದ ನಟಿ ಮದುವೆಯ ಬಳಿಕ ಮತ್ತೆ ನಟನೆಯಲ್ಲಿ ಮುಂದುವರೆಯುತ್ತಾರಾ ಅನ್ನೋ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸದ್ಯಕ್ಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನಟಿಗೆ ಶುಭ ಹಾರೈಸೋಣ. 

Latest Videos

click me!