Bhagya Lakshmi Serial: ಮಗನಿಗೆ ಸವಾಲು ಹಾಕಿ ಸೊಸೆ ಬೆಂಬಲಕ್ಕೆ ನಿಂತ ಕುಸುಮಾ

First Published | May 27, 2023, 3:10 PM IST

ದಿನದಿಂದ ದಿನಕ್ಕೆ ಇಂಟ್ರೆಸ್ಟಿಂಗ್ ಕಥೆಯೊಂದಿಗೆ ಜನರನ್ನು ಸೆಳೆದಿರುವ ಧಾರಾವಾಗಿ ಭಾಗ್ಯಲಕ್ಷ್ಮಿ ಇದೀಗ ವಿಭಿನ್ನ ತಿರುವು ಪಡೆದಿದ್ದು, ಮಗನಿಗೆ ಸವಾಲು ಹಾಕಿ, ಸೊಸೆ ಪರ ನಿಂತಿದ್ದಾಳೆ ಕುಸುಮಾ. ಮುಂದೇನಾಗಬಹುದು ಕಾದು ನೋಡಬೇಕು. 

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ದಿನದಿಂದ ದಿನಕ್ಕೆ ಇಂಟ್ರೆಸ್ಟಿಂಗ್ ಸ್ಟೋರಿಯೊಂದಿಗೆ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅತ್ತೆ ಸೊಸೆ ಜಗಳವನ್ನೆ ತೋರಿಸುವ ಸೀರಿಯಲ್ ಗಳ ಮಧ್ಯೆ ಸೊಸೆಗೆ ಏನೆ ಕಷ್ಟ ಬಂದರೂ ಅವಳ ಬೆನ್ನೆಲುಬಾಗಿ ನಿಲ್ಲುತ್ತಾಳೆ ಭಾಗ್ಯನ ಅತ್ತೆ ಕುಸುಮಾ.

ಸೀರಿಯಲ್ ಕಥೆಯಂತೆ ತನ್ವಿ ಸ್ಕೂಲ್ ನಲ್ಲಿ ಪ್ರಾಜೆಕ್ಟ್ ಗಾಗಿ (school project)ತಾಯಿಯನ್ನು ಕರೆದುಕೊಂಡೊಯ್ಯಲು ಹೇಳಲಾಗುತ್ತೆ, ಆದರೆ ಅಮ್ಮನ ಬಗ್ಗೆ ಅಸಡ್ಡೆಯಿಂದ ಮಾತನಾಡುವ ತನ್ವಿ ಸ್ಕೂಲ್ ಗೆ ಶ್ರೇಷ್ಠಾಳನ್ನು ಬರುವಂತೆ ಹೇಳಿ, ಅವಳೆದುರು ಅಮ್ಮನನ್ನು ಮೂದಲಿಸುತ್ತಾಳೆ. 

Tap to resize

ಇದರಿಂದ ನೊಂದ ಭಾಗ್ಯ ಮನೆಗೆ ಬಂದ ನಂತರ ಮಗಳನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡು, ಇಷ್ಟು ಸಮಯ ನಿಂಗೆ ಬೇಕು ಬೇಡದ್ದನ್ನೆಲ್ಲಾ ನೋಡಿಕೊಂಡು ಕೊಡ್ತಿದ್ದಿದಕ್ಕೆ ಇವತ್ತು ನೀನು ಅಮ್ಮಾನೆ ಬೇಡ ಅನ್ನೋವಷ್ಟರ ಮಟ್ಟಿಗೆ ಬಂದೆ ಎಂದು ತನ್ವಿ ಮೇಲೆ ಕೈ ಮಾಡ್ತಾಳೆ. 
 

ಮಗಳ ಮೇಲೆ ಕೈಮಾಡ್ತಿರೋ ಭಾಗ್ಯನನ್ನು ತಡೆಯುವ ತಾಂಡವ್, ಭಾಗ್ಯಳಿಗೆ ಹೊಡೆಯಲು ಕೈ ಎತ್ತುತ್ತಾನೆ. ಇದನ್ನ ತಡೆಯುವ ಕುಸುಮಾ, ನನ್ನ ಸೊಸೆ ಮೇಲೆ ಕೈ ಎತ್ತುವಷ್ಟು ಬೆಳೆದುಬಿಟ್ಟಿದ್ದೀಯಾ ನೀನು, ಅವಳು ಅವಳ ಮಗಳಿಗೆ ಹೊಡೆತಾರೆ ಅದ್ರಲ್ಲಿ ತಪ್ಪೇನಿಲ್ಲ ಎಂದು ಸೊಸೆ ಪರವಾಗಿ ಮಾತನಾಡ್ತಾರೆ.

ಭಾಗ್ಯ ಓದಿಲ್ಲ ಅನ್ನೋದ್ರ ಬಗ್ಗೆ ನಿಂಗೆ ಸಮಸ್ಯೆ ಇದೆಯಾ ಅನ್ನೋದನ್ನು ಕುಸುಮಾ ಕೇಳಿದಾಗ ತಾಂಡವ್ ಹೌದು ಎನ್ನುತ್ತಾನೆ. ಇದರಿಂದ ಕೋಪಗೊಳ್ಳುವ ಕುಸುಮಾ, ನಾನು ನನ್ನ ಸೊಸೆ ಭಾಗ್ಯಳನ್ನು ಓದಿಸ್ತೇನೆ, ನೀನು ಎಷ್ಟು ಓದಿದ್ಯಾ, ಅದಕ್ಕಿಂತ ಹೆಚ್ಚು ಅವಳನ್ನು ಓದಿಸ್ತೇನೆ ಎಂದು ತನ್ನ ಮಗನಿಗೆ ಸವಾಲು ಹಾಕ್ತಾಳೆ.

ಅತ್ತೆ - ಸೊಸೆ ಜಗಳ ನೋಡಿಯೇ ಸಾಕಾಗಿದ್ದೆ ಜನರಿಗೆ ಸೀರಿಯಲ್ ನಲ್ಲಿ ಕುಸುಮಾ ನಟನೆ ಮತ್ತು ಸೊಸೆಗೆ ಬೆಂಬಲವಾಗಿ ನಿಲ್ಲುವ ಅವರ ನಡೆ ಎಲ್ಲರಿಗೂ ಇಷ್ಟವಾಗಿದ್ದು, ಸೀರಿಯಲ್ ಬಗ್ಗೆ ಸಾಕಷ್ಟು ಪಾಸಿಟಿವ್ ಕಾಮೆಂಟ್ ಗಳು ವ್ಯಕ್ತವಾಗುತ್ತಿದೆ. 

ಎಷ್ಟೋ ಧಾರಾವಾಹಿಗಳು ಮನೆ ಹಾಳು ಮಾಡ್ತಾ ಇದ್ದವು ಎಲ್ಲ ಧಾರಾವಾಹಿಗಳಲ್ಲಿ (serial) ಅತ್ತೆ ಒಳ್ಳೆವರು ಆದರೆ ಸೊಸೆ ಕೆಟ್ಟವಳು ಸೊಸೆ ಒಳ್ಳೆವಳು ಆದರೆ ಅತ್ತೆ ಕೆಟ್ಟವಳು ಇಂತ ಧಾರಾವಾಹಿ ನೋಡಿ ನೋಡಿ ನಮ್ಮ ಸಮಾಜ ಹಾಳಾಗಿ ಹೋಗಿತ್ತು ಆದರೆ ಈ ಧಾರಾವಾಹಿ ನೋಡಿದ ಮೇಲೆ ಅತ್ತೆ ಸೊಸೆ ಅಂದರೆ ಹೀಗೂ ಇರಬಹುದು ಅಂತ ತೋರಿಸಿ ಕೊಟ್ಟರಿ ಸೂಪರ್ ಸೀರಿಯಲ್ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. 

Latest Videos

click me!