Lakshmi Baramma : ಕೀರ್ತಿ ಪ್ರೀತಿ ಪರೀಕ್ಷೆಯಲ್ಲಿ ವೈಷ್ಣವ್ ಪಾಸ್

First Published | May 31, 2023, 11:17 AM IST

ಲಕ್ಷ್ಮೀ ಬಾರಮ್ಮ ಸೀರಿಯಲ್ ಸದ್ಯ ವೈಷ್ಣವ್, ಕೀರ್ತಿ ಮತ್ತು ಲಕ್ಷ್ಮೀ ಮಧ್ಯಾನೆ ಸುತ್ತುತ್ತಿದೆ. ಲಕ್ಷ್ಮೀಗೆ ತನ್ನ ಹಳೆ ಗರ್ಲ್ ಫ್ರೆಂಡ್ ಯಾರು ಎಂದು ಹೇಳಲೇಬೇಕು ಎನ್ನುವ ಆತುರದಲ್ಲಿ ವೈಷ್ಣವ್ ಇದ್ರೆ, ಅದ್ರ ಬಗ್ಗೆ ಕೇಳುವ ಆಸಕ್ತಿಯೇ ಲಕ್ಷ್ಮೀಗೆ ಇಲ್ಲ, ಇನ್ನೊಂದೆಡೆ ಪ್ರೀತಿ ಪಡೆಯಲು ಕೀರ್ತಿ ಸರ್ಕಸ್. 
 

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಕತೆ ಪೂರ್ತಿಯಾಗಿ ವೈಷ್ಣವ್, ಕೀರ್ತಿ ಮತ್ತು ಲಕ್ಷ್ಮೀ ಜೊತೆ ಕಾವೇರಿ ಮಧ್ಯೆ ಸುತ್ತುತ್ತಿದೆ. ಇದೆಲ್ಲದರ ಮಧ್ಯೆ ಕೀರ್ತಿಯ ಪ್ರೀತಿ ಪರೀಕ್ಷೆಯಲ್ಲಿ ವೈಷ್ಣವ್ ಪಾಸ್ ಆಗಿದ್ದಾನೆ. 

ಒಂದೆಡೆ ಸಂಕಷ್ಟಗಳ ಮಧ್ಯೆ ಸಿಕ್ಕಾಕಿಕೊಂಡಿರುವ ವೈಷ್ಣವ್‌ಗೆ ತನ್ನ ಪತ್ನಿಗೆ ಮೋಸ ಮಾಡೋದಕ್ಕೆ ಇಷ್ಟಾನೆ ಇಲ್ಲ. ಅದಕ್ಕಾಗಿ ಆತ ತನ್ನ ಗರ್ಲ್ ಫ್ರೆಂಡ್ ಯಾರು ಅನ್ನೋದನ್ನು ಲಕ್ಷ್ಮೀಗೆ ತಿಳಿಸುವ ಕಾತುರ ತೋರಿದ್ದ. ಆದರೆ ಅದನ್ನು ತಿಳಿದುಕೊಳ್ಳುವ ಮನಸ್ಸು ಮಾತ್ರ ಲಕ್ಷ್ಮೀಗೆ ಕಿಂಚಿತ್ತೂ ಇರಲಿಲ್ಲ. 

Tap to resize

ಕೊನೆಗೂ ಲಕ್ಷ್ಮೀ ಮನಸ್ಸು ಮಾಡಿ, ಸರಿ ನಿಮ್ಮ ಗರ್ಲ್ ಫ್ರೆಂಡ್ ಹೆಸರನ್ನು ಮರದ ಮೇಲೆ ಕೆತ್ತಿ, ಮನಸ್ಸನ್ನು ಹಗುರ ಮಾಡಿಕೊಳ್ಳೋದು ಒಳ್ಳೆದು ಅಂತ ಗಂಡನಿಗೆ ಹೇಳ್ತಾಳೆ. ವೈಷ್ಣವ್ ಕೀರ್ತಿ ಹೆಸರನ್ನು ಮರದ ಮೇಲೆ ಕೆತ್ತಿಯೂ ಆಗಿದೆ. 

ಇದರ ಮಧ್ಯೆ ವೈಷ್ಣವ್ ಗೆ ಕೀರ್ತಿ ಮನೆಯಿಂದ ಬರುವ ಕರೆ, ಮತ್ತೆ ಲಕ್ಷ್ಮೀಗೆ ವೈಷ್ಣವ್ ಗರ್ಲ್ ಫ್ರೆಂಡ್ (girlfriend) ಯಾರು ಅನ್ನೋದನ್ನು ತಿಳಿದುಕೊಳ್ಳುವ ಒಂದು ಚಾನ್ಸ್ ನಿಂದ ದೂರ ಆಗುತ್ತೆ. ಕಾಲ್ ಬಂದ ಕೂಡ್ಲೆ ವೈಷ್ಣವ್ ಎಲ್ಲೋದ್ರು ಅನ್ನೋ ಕನ್‌ಫ್ಯೂಶನ್ ಕೂಡ ಲಕ್ಷ್ಮೀಗೆ. 
 

ಇನ್ನೊಂದೆಡೆ ಮನೆಗೆ ಬಂದ ಲಕ್ಷ್ಮೀಯನ್ನು ಪ್ರೀತಿಯ ಬಣ್ಣ ಬಳಿದಿರೋ ಕಾವೇರಿ ಒಂದೊಂದು ಪ್ರಶ್ನೆ ಕೇಳಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾಳೆ. ರೆಕಾರ್ಡಿಂಗ್ ಸ್ಟುಡಿಯೋದಲ್ಲೂ ಹೇಗಾಯ್ತು, ಮೊದಲ ಎಕ್ಸ್‌ಪಿರಿಯನ್ಸ್ ಹೇಗಿತ್ತು? ಎಂದೆಲ್ಲಾ ಪ್ರಶ್ನೆ ಕೇಳಿದ್ರೆ ಲಕ್ಷ್ಮೀ ಮಾತ್ರ ಏನೂ ಹೇಳದೆ ಸುಮ್ಮನೆ ನಿಂತಿದ್ದಾಳೆ. 
 

ಮತ್ತೊಂದೆಡೆ ತನ್ನ ಪ್ರೀತಿ ಪರೀಕ್ಷೆಯಲ್ಲಿ ವೈಷ್ಣವ್ ಗೆದ್ದ ಸಂತಸದಲ್ಲಿದ್ದಾಳೆ ಕೀರ್ತಿ. ಕೆಜಿ ಗಟ್ಟಲೆ ಗೋಡಂಬಿ ತಿನ್ನುವ ಕೀರ್ತಿಯನ್ನು ತಡೆದು, ಆಕೆಗೆ ಟ್ಯಾಬ್ಲೆಟ್ ಹುಡುಕಿ ಕೊಟ್ಟ ವೈಷ್ಣವ್ ಅಮ್ಮನಿಗಿಂತ ತನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ ಎನ್ನುತ್ತಾಳೆ ಕೀರ್ತಿ. 

ಅಷ್ಟೇ ಅಲ್ಲ, ಈ ಪ್ರೀತಿಯ ಪರೀಕ್ಷೆಯಲ್ಲಿ ವೈಷ್ಣವ್ ತಾನು ಗೆದ್ದು, ನನ್ನನ್ನು ಗೆಲ್ಲಿಸಿರೋ ಖುಷಿಯಲ್ಲಿ ಕೀರ್ತಿ ತೇಲಾಡುತ್ತಿದ್ದು, ಅಮ್ಮ ಸೋತಿರೋದಾಗಿ ಹೇಳ್ತಿದ್ದಾಳೆ. ಕೀರ್ತಿ ಹುಚ್ಚಾಟಕ್ಕೆ ಅಮ್ಮನೂ ಕೋಪಗೊಂಡಿದ್ದಾರೆ, ಜೊತೆಗೆ ವೈಷ್ಣವ್ ಸಹ ಸಹನೆ ಕಳೆದುಕೊಂಡಿದ್ದಾನೆ. ಮುಂದೇನಾಗುತ್ತೆ ನೋಡಬೇಕು. 

Latest Videos

click me!