ಹೇರ್‌ಕಟ್ ಮಾಡಿಸಿದ 'ರಾಮಾಚಾರಿ' ವೈಶಾಖ'; ಜೈಲ್‌ಗೆ ಹೋಗಿದ್ರೆ ಹೇರ್‌ಕಟ್‌ಗೆ ಯಾವಾಗ ಬಂದ್ರಿ ಎಂದ ನೆಟ್ಟಿಗರು!

First Published | Nov 11, 2024, 11:20 AM IST

ವೈರಲ್ ಅಯ್ತು ವೈಶಾಖ ನ್ಯೂಸ್ ಹೇರ್‌ಕಟ್ ಲುಕ್. ಐಶ್ವರ್ಯ ವಿನಯ್‌ ಹಿಂದೆ ಬಿದ್ದ ನೆಟ್ಟಿಗರು.....
 

 ಕನ್ನಡ ಕಿರುತೆರೆಯ ಜನಪ್ರಿಯ ನಟಿ ಐಶ್ವರ್ಯ ವಿನಯ್ ಸದ್ಯ ಬಹು ಬೇಡಿಕೆಯ ನಟಿ. ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಲೈಫ್‌ಸ್ಟೈಲ್‌ ಬಗ್ಗೆ ಜನರಿಗೆ ಅಪ್ಡೇಟ್‌ ನೀಡುತ್ತಾರೆ. 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ಅತ್ತಿಗೆ ವೈಶಾಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ ವೈಶಾಖ. 

Tap to resize

 ಮಾನ್ಯತಾ ಜೊತೆ ಕುತಂತ್ರ ಮಾಡಿ ಜೈಲು ವಾಸ ಅನುಭವಿಸುತ್ತಿರುವ ವೈಶಾಖಳ ಕಥೆ ಅಲ್ಲಿಗೆ ನಿಲ್ಲಿಸಿದ್ದಾರೆ. ಕಥೆ ಮತ್ತೊಂದು ದಾರಿಯಲ್ಲಿ ಹೋಗುತ್ತಿದ್ದರು ಕಾರಣ ಸದ್ಯ ವೈಶಾಖ ಭಾಗ ಸ್ಟಾಪ್ ಆಗಿದೆ.  

ಶೂಟಿಂಗ್ ಬಿಡುವಿನ ಸಮಯದಲ್ಲಿ ಐಶ್ವರ್ಯ ಸೆಲ್ಫ್‌ ಕೇರ್ ಮಾಡುವುದರಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಪತಿ ಜೊತೆ ವಿದೇಶ ಪ್ರಯಾಣ ಹಾಗೂ ನ್ಯೂ ಹೇರ್‌ಕಟ್ ಮಾಡಿಸಿಕೊಂಡಿದ್ದಾರೆ.

ಹೌದು! ವಿದೇಶ ಪ್ರಯಾಣ ಮಾಡುವ ಮುನ್ನ ವೈಶಾಖ ಹೊಸ ಹೇರ್‌ಕಟ್ ಮಾಡಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನ್ಯೂ ಲುಕ್ ವೈರಲ್ ಆಗುತ್ತಿದೆ. 

ಜೈಲ್‌ಗೆ ಹೋಗಿದ್ರೆ ಅಲ್ವಾ ನೀವು ಹೇರ್‌ಕಟ್‌ಗೆ ಯಾವಾಗ ಬಂದ್ರಿ, ಮಾನ್ಯತಾ ಜೊತೆ ಸೇರಿಕೊಂಡು ಸ್ಟೈಲ್ ಮಾಡೋಕೆ ಶುರು ಮಾಡಿದ್ದೀರಿ ಎಂದು ನೆಟ್ಟಿಗರು ಕಾಲೆಳೆದು ಕಾಮೆಂಟ್ ಮಾಡಿದ್ದಾರೆ. 

Latest Videos

click me!