ಪದವಿ ಪಡೆದ ಮಗಳು.. ಸಾಧನೆಯನ್ನು ಮೆಚ್ಚಿ ಭಾವುಕ ಪತ್ರ ಬರೆದ ಗಾಯಕ ವಿಜಯ್ ಪ್ರಕಾಶ್

Published : Nov 10, 2024, 12:01 PM ISTUpdated : Nov 10, 2024, 02:46 PM IST

ಖ್ಯಾತ ಗಾಯಕ ವಿಜಯ್ ಪ್ರಕಾಶ್ ಪುತ್ರಿ ಕಾವ್ಯ ಇದೀಗ ಪದವಿ ಪಡೆದಿದ್ದು, ಹೆಮ್ಮೆಯ ತಂದೆ ಭಾವುಕರಾಗಿ ಮಗಳ ಸಾಧನೆಯ ಬಗ್ಗೆ ಗುಣಗಾನ ಮಾಡಿದ್ದಾರೆ.   

PREV
16
ಪದವಿ ಪಡೆದ ಮಗಳು.. ಸಾಧನೆಯನ್ನು ಮೆಚ್ಚಿ ಭಾವುಕ ಪತ್ರ ಬರೆದ ಗಾಯಕ ವಿಜಯ್ ಪ್ರಕಾಶ್

ಭಾರತದ ಶ್ರೇಷ್ಠ ಗಾಯಕರಲ್ಲಿ ಒಬ್ಬರು ಅಂದ್ರೆ ವಿಜಯ್ ಪ್ರಕಾಶ್ (Singer Vijay Prakash). ಕನ್ನಡದಲ್ಲಿ ಸರಿಗಮಪ ಜಡ್ಜ್ ಆಗುವ ಮೂಲಕ ಕನ್ನಡಿಗರ ಮನ ಸೆಳೆದ ಗಾಯಕ, ಜೊತೆಗೆ ತಮ್ಮ ಸೂಪರ್ ಡೂಪರ್ ಹಾಡುಗಳ ಮೂಲಕ ದೇಶದೆಲ್ಲೆಡೆ ಜನಪ್ರಿಯತೆ ಪಡೆದ ಗಾಯಕರೂ ಹೌದು. 
 

26

ಇದೀಗ ವಿಜಯ್ ಪ್ರಕಾಶ್ ಪುತ್ರಿ ಕಾವ್ಯ ಪದವಿ (Graduate) ಪಡೆದಿದ್ದಾರೆ. ನೆದರ್ ಲ್ಯಾಂಡ್ ನ ಯುನಿವರ್ಸಿಟಿಯಲ್ಲಿ ಓದುತ್ತಿದ್ದ ಕಾವ್ಯ ಈಗಷ್ಟೇ ಗ್ರಾಜ್ಯುಯೇಟ್ ಆಗಿದ್ದು, ಈ ವಿಶೇಷ ಸಂಭ್ರಮದ ಫೋಟೊಗಳನ್ನು ವಿಜಯ್ ಪ್ರಕಾಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. 
 

36

ಗ್ರಾಜ್ಯುಯೇಷನ್ ಡ್ರೆಸ್ ಧರಿಸಿ, ಕೈಯಲ್ಲಿ ಪದವಿ ಸರ್ಟಿಫಿಕೇಟ್ ಹಿಡಿದಿರುವ ಅಮ್ಮ ಮಹತಿ ಹಾಗೂ ಅಪ್ಪ ವಿಜಯ್ ಪ್ರಕಾಶ್ ಜೊತೆ ಕಾವ್ಯ ಪೋಸ್ ಕೊಟ್ಟಿದ್ದಾರೆ. ಈ ಫೋಟೊದೊಂದಿಗೆ ವಿಜಯ್ ಪ್ರಕಾಶ್ ಮಗಳಿಗೆ ಭಾವುಕ ಪತ್ರ ಬರೆದಿದ್ದಾರೆ. 
 

46

ನನ್ನ ಮುದ್ದಿನ ಮಗಳು ಕಾವ್ಯ, 22 ವರ್ಷಗಳ ಹಿಂದೆ ನಿನ್ನನ್ನು ಮೊದಲ ಬಾರಿಗೆ ನನ್ನ ಕೈಯಲ್ಲಿ ಹಿಡಿದಾಗ, ನನ್ನ ಹೃದಯ ಒಂದು ಬಾರಿ ಬಡಿಯುವುದೇ ನಿಂತಿತ್ತು. ಇವತ್ತು ನೀನು ಗ್ರಾಜುಯೇಟ್ ಆಗಿರೋದನ್ನು ನೋಡಿ, ಹೆಮ್ಮೆಯಿಂದ ನನ್ನ ಹೃದಯ ಉಬ್ಬಿದೆ ಎಂದಿದ್ದಾರೆ ವಿಜಯ್ ಪ್ರಕಾಶ್. 
 

56

ಅಷ್ಟೇ ಅಲ್ಲ ನೀನು ಬ್ರಿಲಿಯಂಟ್, ಮೃದು ಹೃದಯದ ಹಾಗೂ ಸುಂದರವಾದ ಯುವತಿಯಾಗಿ ಬೆಳೆದಿರುವೆ. ನಾವು ಜೊತೆಯಾಗಿ ಕಳೆದ ಎಲ್ಲಾ ಕ್ಷಣಗಳಿಗೂ ಅದು ನಗು ಆಗಿರಲಿ, ಅಳು, ಹಾಗೂ ನಮ್ಮ ಎಲ್ಲಾ ನೆನಪುಗಳಿಗಾಗಿ ನಾನು ಚಿರಋಣಿ. ನನ್ನ ಮಡಿಲಿನಲ್ಲಿ ಆಡುತ್ತಿದ್ದ ಪುಟ್ಟ ಹುಡುಗಿಯ ನೆನಪಿದೆ ನನಗೆ, ಇದೀಗ ಅದೇ ಹುಡುಗಿ ತನ್ನ ರೆಕ್ಕೆಗಳನ್ನು ಬಿಡಿಸಿ, ಪ್ರಪಂಚದ ಎತ್ತರಕ್ಕೆ ಹಾರಲು ರೆಡಿಯಾಗಿದ್ದಾಳೆ. ಇದಕ್ಕಿಂತ ಹೆಮ್ಮೆ ಪಡುವ ವಿಷ್ಯ ಬೇರೆನಿದೆ ಎಂದಿದ್ದಾರೆ. 
 

66

ಜೊತೆಗೆ ಕಂಗ್ರಾಜ್ಯುಲೇಶನ್ ಸ್ವೀಟಿ, ನಿನ್ನ ಕಠಿಣ ಪರಿಶ್ರಮ ಮತ್ತು ಛಲಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಪದಗಳಲ್ಲಿ ಹೇಳೋದಕ್ಕಿಂತ ಹೆಚ್ಚಾಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ ಮಗಳೆ, ನಿನ್ನ ಪ್ರೀತಿಯ ಅಪ್ಪ ಎಂದು ಬರೆದು ಭಾವುಕರಾಗಿದ್ದಾರೆ ವಿಜಯ್ ಪ್ರಕಾಶ್. ಕಾವ್ಯ ವಿಜಯ್ ಪ್ರಕಾಶ್ ಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. 
 

click me!

Recommended Stories