ಅಶೋಕ್ ಜಂಬೆ ಅವರ ಸಹಾಯ ನೆನೆದು, ನನ್ನ ಗುರುಗಳು ಎಂದು ಕಾಲಿಗೆ ಬಿದ್ದ ನಟಿ ಅಪೂರ್ವ

Published : Nov 10, 2024, 09:14 AM ISTUpdated : Nov 10, 2024, 09:19 AM IST

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಅಪ್ಪ ಶ್ರೀನಿವಾಸನ ಪಾತ್ರ ನಿರ್ವಹಿಸುತ್ತಿರುವ ನಟ ಅಶೋಕ್ ಜಂಬೆ ಸೀರಿಯಲ್ ನಲ್ಲಿ ಎಷ್ಟೊಂದು ದಯಾಳುವೋ, ನಿಜ ಜೀವನದಲ್ಲೂ ಅಷ್ಟೇ ಒಳ್ಳೆಯವರು ಅನ್ನೋದು ತಿಳಿದು ಬಂದಿದೆ.   

PREV
17
ಅಶೋಕ್ ಜಂಬೆ ಅವರ ಸಹಾಯ  ನೆನೆದು, ನನ್ನ ಗುರುಗಳು ಎಂದು ಕಾಲಿಗೆ ಬಿದ್ದ ನಟಿ ಅಪೂರ್ವ

ಝೀ ಕನ್ನಡ ವೇದಿಕೆಯಲ್ಲಿ ಸದ್ಯ ಭರ್ಜರಿ ಎಂಟರ್ ಟೇನ್ಮೆಂಟ್ ಶುರುವಾಗಿದೆ. ಸಖತ್ ಮನರಂಜನೆ ನೀಡುವ ಸೆಲೆಬ್ರಿಟಿಗಳ ಆಟದ ಸಮಯದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶ್ರೀನಿವಾಸರ ಪಾತ್ರ ನಿರ್ವಹಿಸುತ್ತಿರುವ ಅಶೋಕ್ ಜಂಬೆ (Ashok Jambe) ಅವರ ಗುಣದ ಬಗ್ಗೆ ನಟಿ ಅಪೂರ್ವ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. 
 

27

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಾಯಕಿ ಅನು ಸಿರಿಮನೆ ತಾಯಿ ಪುಷ್ಪ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಇದೇ ನಟಿ ಈಗ ಶ್ರಾವಣಿ ಸುಬ್ರಹ್ಮಣ್ಯ ಧಾರವಾಹಿಯಲ್ಲಿ ಸುಬ್ಬುವಿನ ತಾಯಿ ವಿಶಾಲು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಝೀ ಎಂಟರ್ ಟೇನ್ ಮೆಂಟ್ ಕಾರ್ಯಕ್ರಮದಲ್ಲಿ ನಟಿ ವಿಶಾಲು ಪಾತ್ರದಲ್ಲಿ ನಟಿಸುತ್ತಿರುವ ನಟಿ ಅಪೂರ್ವ (Apoorva) ತಮ್ಮ ಮನದ ಮಾತುಗಳನ್ನು ಹೇಳಿದ್ದಾರೆ. 
 

37

ನಟಿ ಅಪೂರ್ವ ಅವರು ಆಗಷ್ಟೇ ಇಂಡಷ್ಟ್ರಿಗೆ ಬಂದ ಸಮಯದಲ್ಲಿ ತಮಗೆ ಡೈಲಾಗ್ ಹೇಳಲು ಸಹಾಯ ಮಾಡಿದ ನಟ ಅಶೋಕ್ ಜಂಬೆ ಅವರ ಸಹಾಯ ಮಾಡುವ ಗುಣವನ್ನ ನೆನೆದು ವೇದಿಕೆಯಲ್ಲೇ ಕಾಲಿಗೆ ಬಿದ್ದು ನಮಸ್ಕರಿಸಿದ ಘಟನೆ ನಡೆದಿದೆ.
 

47

ನಟಿ ಅಪೂರ್ವ ಬಗ್ಗೆ ಹೇಳೋದಾದರೆ ಅವರಿಗೆ ಓದುವುದಕ್ಕೆ ಬರೆಯೋದಕ್ಕೆ ಬರೋದೆ ಇಲ್ಲ. ತುಂಬಾನೇ ಚಿಕ್ಕ ವಯಸ್ಸಿನಿಂದಲೇ ಮನೆಯ ಜವಾಬ್ಧಾರಿ ವಹಿಸಿ, ನಂತ್ರ ಮದುವೆಯಾಗಿ, ಆಮೇಲೆ ಗಂಡನಿಂದಲೂ ದೂರವಾಗಿರುವ ನಟಿ ಅಕ್ಷರಗಳನ್ನು ಕಲಿತಿಲ್ಲ,  ಹಾಗಿದ್ದರೂ ಡೈಲಾಗ್ ಗಳನ್ನು ಹೇಳಿಸಿಕೊಂಡು ಕಂಠಪಾಠ ಮಾಡಿ, ಡೆಲಿವರಿ ಮಾಡೋದ್ರಲ್ಲಿ ಅಪೂರ್ವ ಬೆಸ್ಟ್. ಅವರ ಡೈಲಾಗ್ ಡೆಲಿವರಿ, ಅಭಿನಯವನ್ನು ವೀಕ್ಷಕರು ಮೆಚ್ಚಿಕೊಂಡಿರೋದೆ ಆಕೆಯ ಪ್ರತಿಭೆಯನ್ನು ತೋರುತ್ತದೆ. 
 

57

ಆದರೆ ಕರಿಯರ್ ಆರಂಭವಾದ ಸಮಯದಲ್ಲಿ ಅಪೂರ್ವಗೆ 'ಹ' ಕಾರ, 'ಸ'ಕಾರ ಕಷ್ಟವಾಗುತ್ತಿತ್ತಂತೆ. ಈ ಸಂದರ್ಭದಲ್ಲಿ ಅವರು ಸೆಟ್ ನಲ್ಲಿ ಬೈಸಿಕೊಂಡಿದ್ದರಂತೆ. ಒಂದು ದಿನ ಕಣ್ಣೀರು ಹಾಕುತ್ತಾ ಡೈಲಾಗ್ ಅಭ್ಯಾಸ ಮಾಡುವ ಸಂದರ್ಭದಲ್ಲಿ, ಸಿನಿಮಾದಲ್ಲಿ ಅಸೋಸಿಯೇಟ್ ಆಗಿದ್ದ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಗಿದ್ದ ನಟ ಅಶೋಕ್ ಜಂಬೆ ಸಹಾಯ ಮಡಿದ್ದರಂತೆ. 
 

67

ಆ ಸಮಯದಲ್ಲಿ ಅಶೋಕ್ ಜಂಬೆ ಯಾರೊಂದಿಗೂ ಅಷ್ಟೊಂದು ಮಾತನಾಡುತ್ತಲೇ ಇರಲಿಲ್ಲವಂತೆ.  ಆದರೆ ಅಪೂರ್ವ ಕಣ್ಣೀರಿಟ್ಟು ಅಭ್ಯಾಸ ಮಾಡೋದನ್ನು ನೋಡಿ, ಅವರ ಬಳಿ ಹೋಗಿ ಏನೂ ಚಿಂತೆ ಮಾಡಬೇಡಿ ಎಂದು ಶ, ಹ ಹೇಳುವುದನ್ನು ಹೇಳಿಕೊಟ್ಟರು. ಜೊತೆಗೆ ಡಬ್ಬಿಂಗ್ ಮಾಡುವಾಗ ತುಟಿಗಳನ್ನು ಮಾತ್ರ ನೋಡಿ, ಲಿಪ್ ಸಿಂಕ್ ಮಾಡೋದನ್ನ ಕಲಿಬೇಕು ಎಂದಿದ್ದರಂತೆ. 
 

77

ಈ ವಿಷಯವನ್ನು ನೆನಪಿಸಿಕೊಂಡ ಅಪೂರ್ವ ಅವರು ಆವತ್ತು ನನ್ನನ್ನು ತಿದ್ದಿದ್ದಕ್ಕೆ ನಾನು ಈವತ್ತು ಈ ಮಟ್ಟಕ್ಕೆ ಬೆಳೆಯೋದಕ್ಕೆ ಸಾಧ್ಯವಾಯಿತು. ಅವರು ನನಗೆ ಗುರುಗಳ ಸಮಾನ ಎನ್ನುತ್ತಾ, ವೇದಿಕೆಯಲ್ಲಿ ಅಶೋಕ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಅಪೂರ್ವ ಮಾತು ಕೇಳಿ ವೇದಿಕೆಯಲ್ಲಿದ್ದವರು ಹೆಮ್ಮೆಯಿಂದ ಚಪ್ಪಾಳೆ ಹೊಡೆದಿದ್ದಾರೆ. 
 

Read more Photos on
click me!

Recommended Stories