ಮಗಳು ಸುಂದ್ರಿ ಅಂದ್ಕೊಂಡೆ ಆದರೆ ನೀವು ತ್ರಿಪುರ ಸುಂದರಿ; ಚಾರು ತಾಯಿ ಜೊತೆಗಿರುವ ಫೋಟೋ ವೈರಲ್!

Published : Sep 26, 2024, 11:08 AM IST

ಅಮ್ಮ - ಮಗಳು ಫುಲ್ ಮ್ಯಾಚಿಂಗ್ ಮ್ಯಾಚಿಂಗ್...ಫೋಟೋ ನೋಡಿ ಸಖತ್, ಸೂಪರ್ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು.....

PREV
18
ಮಗಳು ಸುಂದ್ರಿ ಅಂದ್ಕೊಂಡೆ ಆದರೆ ನೀವು ತ್ರಿಪುರ ಸುಂದರಿ; ಚಾರು ತಾಯಿ ಜೊತೆಗಿರುವ ಫೋಟೋ ವೈರಲ್!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿ ದಿನದಿಂದ ಟಿಆರ್‌ಪಿಯಲ್ಲಿ ಮತ್ತು ವೀಕ್ಷಕರ ಮನಸ್ಸಿಗೆ ದೊಡ್ಡ ಸ್ಥಾನ ಗಳಿಸುತ್ತಿದೆ. ಧಾರಾವಾಹಿಯ ಪ್ರತಿಯೊಬ್ಬ ಪಾತ್ರಧಾರಿಗೂ ಅವರದ್ದೇ ಪ್ಯಾನ್ ಬೇಸ್ ಇದ್ದಾರೆ. 

28

ರಾಮಾಚಾರಿ ಪಾತ್ರದಲ್ಲಿ ರಿತ್ವಿಕ್ ಮತ್ತು ಚಾರು ಪಾತ್ರದಲ್ಲಿ ಮೌನಾ ಗುಡ್ಡೆಮನೆ ಮಿಂಚುತ್ತಿದ್ದಾರೆ. ಪ್ರತಿಯೊಂದು ಪಾತ್ರ ವೀಕ್ಷಕರಲ್ಲಿ ಪ್ರಭಾವ ಬೀರುತ್ತಿದ್ದರೂ, ಚಾರು ಪಾತ್ರಕ್ಕೆ ಮಾತ್ರ ಯಾವ ರೀತಿಯಲ್ಲೂ ಡಿಮ್ಯಾಂಡ್ ಮತ್ತು ಪ್ಯಾನ್ಸ್ ಕಡಿಮೆ ಆಗಿಲ್ಲ.

38

ಸಿರಿವಂತ ಕುಟುಂಬಕ್ಕೆ ಸೇರಿದ ಮಾಡರ್ನ್ ಹುಡುಗಿ ಚಾರು, ನಾರಾಯಣಾಚಾರು ಮನೆಯ ಸೊಸೆಯಾಗಿ ಬಂದ ಮೇಲೆ ಸಂಪೂರ್ಣವಾಗಿ ಮಂಗಳ ಗೌರಿ ರೀತಿಯಲ್ಲಿ ಬದಲಾಗಿರುವುದು ಜನರಿಗೆ ಇಷ್ಟವಾಗಿದೆ. ಆಕೆಯ ಸೀರೆ ಕಲೆಕ್ಷನ್‌ ಮೇಲೆ ಹೆಣ್ಣು ಮಕ್ಕಳ ಕಣ್ಣು ಬಿದ್ದಿದೆ. 

48

ಆನ್‌ಸ್ಕ್ರೀನ್ ಕಾಣಿಸಿಕೊಳ್ಳುವ ಚಾರುಗೂ ಆಫ್‌ಸ್ಕ್ರೀನ್‌ ಇರುವ ಚಾರುಗೂ ತುಂಬಾನೇ ವ್ಯತ್ಯಾಸವಿದೆ. ರಿಯಲ್‌ ಲೈಫ್‌ನಲ್ಲಿ ಚಾರು ಸಿಕ್ಕಾಪಟ್ಟೆ ಪಾಸಿಟಿವ್ ಆಂಡ್ ಮಾಡರ್ನ್ ಹುಡುಗಿ. ಫೇಮಸ್ ಡಿಸೈನರ್ ಉಡುಪುಗಳನ್ನು ಹೆಚ್ಚಾಗಿ ಧರಿಸುತ್ತಾರೆ. 

58

ಕೆಲವು ದಿನಗಳ ಹಿಂದೆ ನಡೆದ ಅನುಬಂಧ ಅವಾರ್ಡ್ 2024 ಕಾರ್ಯಕ್ರಮದಲ್ಲಿ ಚಾರು ಹಳದಿ ಬಣ್ಣದ ಬಾಡಿಕಾನ್ ಡಿಸೈನರ್ ಡ್ರೆಸ್ ಧರಿಸಿದ್ದರು. ಈ ವಿಶೇಷ ಕಾರ್ಯಕ್ರಮಕ್ಕೆ ಚಾರು ತಮ್ಮ ತಾಯಿ ಜೊತೆ ಆಗಮಿಸಿದ್ದರು. ತಾಯಿ ಕೂಡ ಹಳದಿ ಮತ್ತು ಕೆಂಪು ಕಾಂಬಿನೇಷನ್ ಸೀರೆಯಲ್ಲಿ ಮಿಂಚಿದ್ದಾರೆ.

68

ಫೋಟೋಶೂಟ್‌ ಮಾಡಿಸುವಾಗ ತಾಯಿಯನ್ನು ಮುದ್ದಾಡುತ್ತಿದ್ದಾಳೆ ಚಾರು. ಈ ಫೋಟೋವನ್ನು ನೋಡಿದ ನೆಟ್ಟಿಗರು 'ಅಯ್ಯೋ ಇಷ್ಟು ದಿನ ಮಗಳು ಮಾತ್ರ ಸುಂದರಿ ಅಂದುಕೊಂಡೆ ಆದರೆ ಆಕೆ ತಾಯಿ ತ್ರಿಪುರ ಸುಂದರಿ' ಎಂದು ಕಾಮೆಂಟ್ ಮಾಡಿದ್ದಾರೆ. 

78

ಈ ವರ್ಷ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಚಾರು ಮತ್ತು ರಾಮಾಚಾರಿ ಎರಡು ಅವಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ಒಂದು - ಡಿಜಿಟಲ್ ಜೋಡಿ ವಿನ್ನರ್ ಅವಾರ್ಡ್, ಎರಡು - ಜನ ಮೆಚ್ಚಿದ ಜೋಡಿ ಅವಾರ್ಡ್. 

88

ಚಾರು ಧರಿಸಿರುವ ಹಳದಿ ಡ್ರೆಸ್‌ನ ರಶ್ಮಿ ಅನೂಪ್ ರಾವ್ ಡಿಸೈನ್ ಮಾಡಿದರೆ, ಧಾತ್ರಿ ಅವರಿಂದ ಮೇಕಪ್, ವಾಸವಿ ಪ್ರಕಾಶ್‌ರವರಿಂದ ಹೇರ್‌ ಸ್ಟೈಲ್ ಮತ್ತು ಪಿಕೆ ಸ್ಟುಡಿಯೋ ಫೋಟೋಗ್ರಾಫಿ ಅವರು ಕ್ಲಿಕ್ ಮಾಡಿರುವ ಚಿತ್ರವಿದು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories