ಕೋಟಿಗೊಬ್ಬ 3 ಬೆಡಗಿ ಮಡೋನಾ ಡಿವೈನ್ ಫೋಟೊಗ್ರಫಿಗೆ ಫಿದಾ ಆದ ಅಭಿಮಾನಿಗಳು

Published : Sep 26, 2024, 07:23 AM ISTUpdated : Sep 26, 2024, 07:53 AM IST

ಕೋಟಿಗೊಬ್ಬ 3 ಸಿನಿಮಾದಲ್ಲಿ ಕಿಚ್ಚ ಸುದೀಪ್ ಗೆ ಜೊಡಿಯಾಗಿದ್ದ ಮಲಯಾಳಿ ಬೆಡಗಿ ಮಡೋನಾ ಸೆಬಾಸ್ಟಿಯನ್ ತುಂಬಾನೆ ಮುದ್ದಾಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.   

PREV
18
ಕೋಟಿಗೊಬ್ಬ 3 ಬೆಡಗಿ ಮಡೋನಾ ಡಿವೈನ್ ಫೋಟೊಗ್ರಫಿಗೆ ಫಿದಾ ಆದ ಅಭಿಮಾನಿಗಳು

ಪ್ರೇಮಂ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ ನಟಿ ಮಡೋನಾ ಸೆಬಾಸ್ಟಿಯನ್ (Madonna Sebastian), ಕನ್ನಡದಲ್ಲಿ ಕಿಚ್ಚ ಸುದೀಪ್ ಜೊತೆಗೆ ಕೋಟಿಗೊಬ್ಬ 3 ಸಿನಿಮಾದಲ್ಲಿ ನಟಿಸಿ, ಕನ್ನಡಿಗರ ಮನಸನ್ನು ಸಹ ಗೆದ್ದಿದ್ದರು. 
 

28

ಮಡೋನಾ ಕೊನೆಯದಾಗಿ ತಮಿಳಿನಲ್ಲಿ ವಿಜಯ್ ಜೊತೆ ಲಿಯೋ (Leo) ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ವಿಜಯ್ ಸಹೋದರಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾದಲ್ಲಿನ ಲಿಸಾ ದಾಸ್ ಪಾತ್ರ ಸಣ್ಣದಾಗಿದ್ದರೂ, ಜನರು ತುಂಬಾನೆ ಇಷ್ಟಪಟ್ಟಿದ್ದರು. ಸದ್ಯ ಅವರ ಕೈಯಲ್ಲಿ ಅದೃಷ್ಟಸಾಲಿ ಹಾಗೂ ಜಾಲಿ ಒ ಜಿಮ್ಕಾನ ಎನ್ನುವ ಎರಡು ಸಿನಿಮಾಗಳಿವೆ. 
 

38

ಮಡೋನಾ ಮಲಯಾಲಂ, ತಮಿಳು, ಕನ್ನಡ, ತೆಲುಗು ಸಿನಿಮಾಗಳಲ್ಲಿ, ವೆಬ್ ಸೀರೀಸ್ ಗಳಲ್ಲಿ, ಹಾಗೂ ಡಿಸ್ಕೋಗ್ರಾಫಿಯಲ್ಲೂ ನಟಿಸಿದ್ದಾರೆ ಮಡೋನಾ. ಈ ಸುಂದರಿ ನಟಿ ಸಿಂಗರ್ ಕೂಡ ಹೌದು, ಅದ್ಭುತವಾಗಿ ಹಾಡ್ತಾರೆ. ಕೋಟಿಗೊಬ್ಬ ೩ (Kotigobba 3)ಸಿನಿಮಾದ ಪ್ರಚಾರದ ಸಮಯದಲ್ಲಿ ನೀ ಕೋಟಿಯಲಿ ಒಬ್ಬನೇ ಎನ್ನುವ ಹಾಡು ಹಾಡುವ ಮೂಲಕ ಕನ್ನಡಿಗರ ಮನಸೂರೆಗೊಂಡಿದ್ದರು. 
 

48

ಮಡೋನಾ ಪ್ರೇಮಂ (2015), ಕಿಂಗ್ ಲಯರ್ (2016), ಪಾ ಪಾಂಡಿ (2017), ಕವನ್ (2017), ಇಬ್ಲಿಸ್ (2018), ವೈರಸ್ (2019) ಮತ್ತು ಬ್ರದರ್ಸ್ ಡೇ (2019) ನಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದ್ದೇ ತಮಿಳು ಮತ್ತು ತೆಲುಗಿನಲ್ಲಿ ಕೈಯುಮ್ ಕಲವುಮ್ ಮತ್ತು ಆಂಗರ್ ಟೇಲ್ಸ್ ಎನ್ನುವ ವೆಬ್ ಸೀರಿಸ್ ಗಳಲ್ಲೂ ನಟಿಸಿದ್ದರು. 
 

58

ಸೋಶಿಯಲ್ ಮೀಡೀಯಾದಲ್ಲಿ (Social media) ಆಕ್ಟಿವ್ ಆಗಿರುವ ಮಡೋನಾ, ಹೆಚ್ಚಾಗಿ ತಮ್ಮ ಬೋಲ್ಡ್ ಫೋಟೋ ಶೂಟ್ ಗಳಿಂದ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಟ್ರೆಡಿಶನಲ್ ಆಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ನಟಿಯ ಸೌಂದರ್ಯ ಡಿವೈನ್ ಆಗಿ ಕಾಣಿಸಿಕೊಂಡಿದೆ. 
 

68

ಆಕಾಶ ನೀಲಿ ಬಣ್ಣದ ಬ್ಲೌಸ್ ಧರಿಸಿರುವ ಮಡೋನಾ, ಗೋಲ್ಡನ್ ಬಣ್ಣದ ಸ್ಕರ್ಟ್ ಧರಿಸಿದ್ದು, ಕೈಯಲ್ಲಿ ರೋಸ್ ಹಿಡಿದು ಪೋಸ್ ನೀಡಿದ್ದಾರೆ. ಕಿವಿಯಲ್ಲಿ ದೊಡ್ಡದಾದ ಜುಮ್ಕಿ, ಬೆರಳಿನಲ್ಲಿ ಸುಂದರವಾದ ಉಂಗುರ, ತಲೆಯಲ್ಲಿ ಮುಡಿದ ರೋಸ್, ಎಲ್ಲವೂ ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. 
 

78

ನಟಿಯ ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ಹಾರ್ಟ್ ಇಮೋಜಿಗಳಿಂದ ಭರ್ತಿಯಾಗಿದೆ, ಅಷ್ಟೊಂದು ಸುಂದರವಾಗಿ ಕಾಣಿಸ್ತಿದ್ದಾರೆ ಕಿಚ್ಚನ ಬೆಡಗಿ. ಸ್ಟನ್ನಿಂಗ್ ಪ್ರಿನ್ಸಸ್, ಗಾರ್ಜಿಯಸ್, ನಿಜವಾದ ಸೌಂದರ್ಯಕ್ಕೆ ಹೆಸರೇ ನೀವು. ರಾಧಾ ರಾಣಿ, ಧರೆಗಿಳಿದ ಅಪ್ಸರೆ ನೀವು ಎಂದೆಲ್ಲಾ ಕಾಮೆಂಟ್ ಮೂಲಕ ಮಡೋನಾರ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ ಜನ. 
 

88

ಮಡೋನಾ ಸೆಬಾಸ್ಟಿಯನ್ ಗಾಯಕಿಯಾಗಿ ದೀಪಕ್ ದೇವ್ ಮತ್ತು ಗೋಪಿ ಸುಂದರ್ ರಂತಹ ಸಂಯೋಜಕರಿಗೆ ಹಾಡುಗಳನ್ನು ಹಾಡಿದ್ದಾರೆ. ಮಡೋನಾ ಮಲಯಾಳಂ ಮ್ಯೂಸಿಕಲ್ ಪ್ರೋಗ್ರಾಮ್ ಮ್ಯೂಸಿಕ್ ಮೋಜೋದಲ್ಲಿ ಹಾಗೂ ಸೂರ್ಯ ಟಿವಿಗೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು, ಇಲ್ಲಿಯೇ ಅವರನ್ನು ನಿರ್ದೇಶಕ ಅಲ್ಫೋನ್ಸ್ ಪುಟಾರೆನ್ ನೋಡಿ ಪ್ರೇಮಂ ಸಿನಿಮಾದ ಆಡೀಶನ್ ಗೆ ಕರೆದದ್ದು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories