ರೀಲ್ಸ್‌ ಯುಗದಲ್ಲಿ ಎಲ್ಲರೂ ಆಕ್ಟರ್ ಅಗ್ಬೇಕು ಅಂತ ಇಷ್ಟ ಪಡ್ತಾರೆ: ನಟಿ ಮಯೂರಿ ಕ್ಯಾತರಿ

First Published Jul 1, 2024, 4:11 PM IST

 ಸೀರಿಯಲ್ ಲೋಕಕ್ಕೆ ಮತ್ತೆ ಕಾಲಿಟ್ಟ ಮಯೂರಿ. ರೀಲ್ಸ್‌ ಯುಗ ಹೇಗಿದೆ? ಫ್ಯಾಮಿಲಿ ಟೈಂ ಮ್ಯಾನೇಜ್ಮೆಂಟ್ ಹೇಗಿದೆ? ಇಲ್ಲಿದೆ ನೋಡಿ ಫುಲ್ ಮಾಹಿತಿ....

ಕಲರ್ಸ್ ಕನ್ನಡ ವಾಹಿನಿಯಲ್ಲಿ ಜುಲೈ 8ರಿಂದ ಹೊಸ ಧಾರಾವಾಹಿ 'ನನ್ನ ದೇವ್ರು' ಆರಂಭವಾಗಲಿದೆ. ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ಈ ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. 

ಇಷ್ಟು ದಿನ ಫ್ಯಾಮಿಲಿ, ಮಗು ಮತ್ತು ಫಿಟ್ನೆಸ್ ಕಾಳಜಿಯಲ್ಲಿ ಬ್ಯುಸಿಯಾಗಿದ್ದ ನಟಿ ತಮ್ಮ ಕಮ್ ಬ್ಯಾಕ್‌ ಬಗ್ಗೆ ಖುಷಿ ವ್ಯಕ್ತ ಪಡಿಸಿದ್ದಾರೆ.


'ಈಗ ರೀಲ್ಸ್‌ ಪ್ರಪಂಚ..ಈ ಸಮಯದಲ್ಲಿ ಪ್ರತಿಯೊಬ್ಬರೂ ಆಕ್ಟರ್‌ ಆಗಲು ಇಷ್ಟ ಪಡುತ್ತಾರೆ. ಒಬ್ಬರ ಕಲೆಯನ್ನು ಪ್ರದರ್ಶಿಸಲು ಟಿವಿ ಅತ್ಯುತ್ತಮ ವೇದಿಕೆ ಅನ್ನೋದು ನನ್ನ ಅಭಿಪ್ರಾಯ. 

ಇದು ಸಮರ್ಪಣೆ ಮತ್ತು ಶಿಸ್ತನ್ನು ಬಯಸುತ್ತದೆ, ಹೀಗಿದ್ದರೆ ಮಾತ್ರ ಕಲಾವಿದರು ವೀಕ್ಷಕರ ಜೊತೆ ಸಮಯ ಕಳೆದಂತೆ ಕನೆಕ್ಟ್‌ ಆಗಲು ಸಹಾಯವಾಗುತ್ತದೆ'

'ಟಿವಿ ಜಗತ್ತು ತುಂಬಾ ಮುಂದುವರೆದಿದೆ. ಪ್ರೊಡಕ್ಷನ್‌ ಕ್ವಾಲಿಟಿ ತುಂಬಾನೇ ಚೆನ್ನಾಗಿ ಆಗಿದೆ. ಒಂದು ಸಮಯದಲ್ಲಿ ಇಡೀ ಕುಟುಂಬವನ್ನು ಒಟ್ಟಿಗೆ ತರುವ ಸಾಮರ್ಥ್ಯ ಟಿವಿ ಹೊಂದಿದೆ. 

ಒಂದೇ ಸಮಯ ಶೂಟಿಂಗ್ ಇರುವ ಕಾರಣ ಪ್ರತಿ ದಿನವೂ ಹೊತನ ಕಲಿಯಲು ದಾರಿ ಮಾಡಿಕೊಟ್ಟಿದೆ. ತಾಯಿತನ ಮತ್ತು ಕಲಾವಿದೆಯ ಜೀವನ ಎರಡು ಸಮನಾಗಿ ಬ್ಯಾಲೆಕ್ಸ್ ಮಾಡುವುದು ಕೊಂಚ ಕಷ್ಟ. 

ಒಂದು ದಿನ ರಜೆ ಸಿಕ್ಕರೂ ಅದು ನನ್ನ ಮಗನಿಗೆ ಮೀಸಲಿಡುವೆ. ಮನೆಯಲ್ಲಿದ್ದಾಗ ಯಾವಾಗ ಆಕ್ಟಿಂಗ್ ಮಾಡುತ್ತೀನಿ ಎಂದು ಕಾಯುತ್ತಿದ್ದೆ. ಈಗ ಸೆಟ್ಟಿನಲ್ಲಿ ಇರುವಾಗ ಫ್ಯಾಮಿಲಿ ಜೊತೆ ಕಳೆದ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡುತ್ತೀನಿ. ಈ ಜರ್ನಿ ಚೆನ್ನಾಗಿದೆ. 

click me!