ನಾನಿನ್ನೂ ಸಿಂಗಲ್ ಅಂದ ಗಂಡನಿಗೆ ಚಮಕ್ ಕೊಟ್ಟ ಸಂಗೀತಾ ಭಟ್

First Published | Jul 1, 2024, 12:41 PM IST

ನಟಿ ಸಂಗೀತಾ ಭಟ್ ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಕಮೆಂಟ್ ಮಾಡಿದ ಪತಿರಾಯನಿಗೆ ಚಮಕ್ ಕೊಟ್ಟಿದ್ದಾರೆ.

ಸಂಗೀತಾ ಭಟ್ ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಕಣ್ಣಲ್ಲೇ ಮಿಂಚು ಹರಿಸೋ ಫೋಟೋಗಳು ವೈರಲ್ ಆಗುತ್ತಿರುತ್ತವೆ. ಬಿಳಿ ಬಣ್ಣದ ಕಸೂತಿಯುಳ್ಳ ಡ್ರೆಸ್ ಧರಿಸಿರುವ ಸಂಗೀತಾ ಭಟ್ ಮಾದಕ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಂಗೀತಾ ಭಟ್ ಪತಿ ಸುದರ್ಶನ್ ರಂಗಪ್ರಸಾದ್ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮೀ ಧಾರಾವಾಹಿಯ ತಾಂಡವ್ ಪಾತ್ರದಲ್ಲಿ ಅಬ್ಬರಿಸುತ್ತಿದ್ದಾರೆ. ಸುದರ್ಶನ್ ರಂಗಪ್ರಸಾದ್ ರಂಗಭೂಮಿ ಕಲಾವಿದರಾಗಿದ್ದಾರೆ.

Tap to resize

ತಾಂಡವ್ ಪಾತ್ರಕ್ಕೆ ಜೀವ ತುಂಬುತ್ತಿರುವ ಸುದರ್ಶನ್ ನಟನೆಗೆ ಮನಸೋಲದವರಿಲ್ಲ. ಸಂಚಿಕೆಯಿಂದ ಸಂಚಿಕೆಗೆ ಭಾಗ್ಯಲಕ್ಷ್ಮೀ ಧಾರಾವಾಗಿ ವೀಕ್ಷಕರ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿಯೂ ಸುದರ್ಶನ್ ಆಕ್ಟಿವ್ ಆಗಿರುತ್ತಾರೆ.

ಸಾಮಾನ್ಯವಾಗಿ ಕಲಾವಿದರ ಫೋಟೋಗಳಿಗೆ ಅಭಿಮಾನಿಗಳು ಕಮೆಂಟ್ ಮಾಡುತ್ತಿರುತ್ತಾರೆ. ನೀವು ನನ್ನ ಮೆಚ್ಚಿನ ನಟಿ, ನನಗೆ ಕರೆ ಮಾಡಿ, ಲವ್ ಯು ಅಂತ ಕಮೆಂಟ್ ಮಾಡುತ್ತಿರುತ್ತಾರೆ. ಕೆಲವರು ತಮ್ಮ ಕಮೆಂಟ್‌ಗಳಿಗೆ ಪ್ರತಿಕ್ರಿಯೆ ನೀಡುವಂತೆಯೂ ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಾರೆ.

ಪತ್ನಿ ಸಂಗೀತಾ ಭಟ್ ಫೋಟೋಗೆ ಕಮೆಂಟ್ ಮಾಡಿರುವ ಸುದರ್ಶನ್, ಕಾಲ್ ಮಿ ಮೇಡಮ್. ಆಯ್ ಆಮ್ ಸಿಂಗಲ್ ಎಂದು ಬರೆದುಕೊಂಡಿದ್ದಾರೆ. ಸಿಂಗಲ್ ಅಂತ ಹೇಳಿಕೊಂಡಿರುವ ಪತಿಗೆ ಸೋಶಿಯಲ್ ಮೀಡಿಯಾದಲ್ಲಿಯೇ ಸಂಗೀತಾ ಚಮಕ್ ನೀಡಿದ್ದಾರೆ.

ಸಾರಿ ಸರ್. ನೀವು 13 ವರ್ಷ ಲೇಟ್.  ನನಗೆ ಈಗಾಗಲೇ ಮದುವೆಯಾಗಿದೆ ಎಂದು ಪತಿಯ ಕಮೆಂಟ್‌ಗೆ ಸಂಗೀತಾ ಭಟ್ ಪ್ರತಿಕ್ರಿಯಿಸಿದ್ದಾರೆ. ಇವರಿಬ್ಬರ ಕ್ಯೂಟ್ ಸಂಭಾಷಣೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇಂದು ಹಂಚಿಕೊಂಡಿರುವ ಫೋಟೋಗಳಲ್ಲಿ ಸಂಗೀತಾ ಭಟ್ ಅವರ ಕಣ್ಣುಗಳ ಬಗ್ಗೆಯೇ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಕಣ್ಣುಗಳ ಎಂತಹವರನ್ನು ಸೆಳೆಯುವ ಸಾಮಾರ್ಥ್ಯವನ್ನು ಹೊಂದಿದೆ. ಒಟ್ಟಿನಲ್ಲಿ ಫೋಟೋಗಳು ಚೆನ್ನಾಗಿ ಬಂದಿವೆ ಎಂದು ಹೇಳಿದ್ದಾರೆ.

Latest Videos

click me!