"ತೋಳ ಬಂತು! ತೋಳ ಬಂತು!" ಗಾನವಿ ಮೋಸದ ಆಟಕ್ಕೆ ಸಿಲುಕಿ ಮನೆಮಂದಿ ಮುಂದೆ ಬಕ್ರಾ ಆದ ಆಸಿಯಾ!

Published : Oct 20, 2026, 01:29 PM IST

Bigg Boss Kannada: ಒಂದ್ಸಲ ಮೋಸ ಹೋದ್ರೆ ತಪ್ಪು ಎದುರಿಗಿದ್ದವರದ್ದು, ಅದೇ ಪದೇ ಪದೇ ಮೋಸ ಹೋದ್ರೆ ತಪ್ಪು ನಮ್ಮದೇ! ಬಿಗ್‌ಬಾಸ್ ಮನೆಯಲ್ಲಿ ಆಸಿಯಾ ಸ್ಥಿತಿ ಈಗ ಹೀಗೇ ಆಗಿದೆ. ಗಾನವಿ ಈಗ ಎಷ್ಟೇ ಕಣ್ಣೀರು ಹಾಕಿದರೂ, ಅವರ ಬಣ್ಣ ಬಯಲಾಗಿದ್ದು, ಆಸಿಯಾ ಮಾತ್ರ ಮುಖಭಂಗ ಅನುಭವಿಸುವಂತಾಗಿದೆ.

PREV
15
ಮತ್ತೆ ಅದೇ ತಪ್ಪು ಮಾಡಿದ ಗಾನವಿ

ಮತ್ತೆ ಅದೇ ತಪ್ಪು ಮಾಡಿದ ಗಾನವಿ
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಟಾಸ್ಕ್‌ಗಳ ವೇಳೆ ನಂಬಿಕೆ ದ್ರೋಹ, ಕಳ್ಳಾಟಗಳು ಮುಂದುವರಿದಿವೆ. ಕಳೆದ ಬಾರಿಯಷ್ಟೇ ಟಾಸ್ಕ್‌ನಲ್ಲಿ ಮೋಸ ಮಾಡಿ ಪವರ್ ಕಾಯಿನ್ ಗಿಟ್ಟಿಸಿಕೊಂಡಿದ್ದ ಗಾನವಿ, ಈ ಬಾರಿಯೂ ಅದೇ ತಪ್ಪನ್ನು ಪುನರಾವರ್ತಿಸಿ ಸಿಕ್ಕಿಬಿದ್ದಿದ್ದಾರೆ.

25
ಮೋಸದ ಆಟಕ್ಕೆ ಬಲಿಯಾಗಿರುವುದು ಸ್ಪರ್ಧಿ ಆಸಿಯಾ

ಮೋಸದ ಆಟಕ್ಕೆ ಬಲಿಯಾಗಿರುವುದು ಸ್ಪರ್ಧಿ ಆಸಿಯಾ
ಸದ್ಯ ಬಿಡುಗಡೆಯಾಗಿರುವ ಬಿಗ್ ಬಾಸ್‌ನ ಹೊಸ ಪ್ರೊಮೊದಲ್ಲಿ ಈ ವಿಚಾರ ರಿವೀಲ್ ಆಗಿದೆ. ವಿಶೇಷವೆಂದರೆ, ಈ ಬಾರಿ ಗಾನವಿ ಅವರ ಈ ಮೋಸದ ಆಟಕ್ಕೆ ಬಲಿಯಾಗಿರುವುದು ಸ್ಪರ್ಧಿ ಆಸಿಯಾ.

35
ಆಸಿಯಾಗೆ ಕುಹಕವಾಡಿದ ಮನೆಮಂದಿ

ಆಸಿಯಾಗೆ ಕುಹಕವಾಡಿದ ಮನೆಮಂದಿ
ಗಾನವಿಯನ್ನು ಕಣ್ಣುಮುಚ್ಚಿ ನಂಬಿ ಮೋಸಹೋದ ಆಸಿಯಾ ಅವರ ಸ್ಥಿತಿ ನೋಡಿ ಮನೆಯ ಇತರ ಸ್ಪರ್ಧಿಗಳು ಆಡಿಕೊಳ್ಳುತ್ತಿದ್ದಾರೆ. "ಹೋಗಿ ಹೋಗಿ ಮತ್ತೆ ಆ ಗಾನವಿಯನ್ನೇ ನಂಬಿದೆಯಲ್ಲಾ... ನಿನಗೆ ಮೊದಲೇ ಗೊತ್ತಾಗಬೇಕಿತ್ತು" ಎಂದು ಮನೆಮಂದಿಯೆಲ್ಲಾ ಆಸಿಯಾಗೆ ಛೇಡಿಸುತ್ತಿದ್ದಾರೆ.

45
ಕಣ್ಣೀರಿಟ್ಟರೂ ಕರಗದ ಬಿಗ್ ಬಾಸ್ ಸ್ಪರ್ಧಿಗಳು

ಕಣ್ಣೀರಿಟ್ಟರೂ ಕರಗದ ಬಿಗ್ ಬಾಸ್ ಸ್ಪರ್ಧಿಗಳು
ತನ್ನ ಮೇಲಿನ ಆರೋಪಗಳಿಂದ ಪಾರಾಗಲು ಗಾನವಿ ಎಂದಿನಂತೆ ಕಣ್ಣೀರಿನ ಮೊರೆ ಹೋಗಿದ್ದಾರೆ. "ನಾನು ಬೇಕು ಅಂತ ಹೀಗೆ ಮಾಡಿದ್ದಲ್ಲ" ಎಂದು ಗಾನವಿ ಕಣ್ಣೀರಿಡುತ್ತಾ ಸಮರ್ಥಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರಾದರೂ, ಅವರ ಆಟವನ್ನು ಮೊದಲೇ ಬಲ್ಲ ಮನೆಯಲ್ಲಿ ಯಾರೊಬ್ಬರೂ ಅವರ ಮಾತನ್ನು ನಂಬುವ ಸ್ಥಿತಿಯಲ್ಲಿಲ್ಲ.

55
'ತೋಳ ಬಂತು ತೋಳ' ಕಥೆಯಂತಾದ ಗಾನವಿ ಸ್ಥಿತಿ

'ತೋಳ ಬಂತು ತೋಳ' ಕಥೆಯಂತಾದ ಗಾನವಿ ಸ್ಥಿತಿ
ಹಿಂದೊಮ್ಮೆ ಕಳ್ಳಾಟವಾಡಿ ಸಿಕ್ಕಿಬಿದ್ದಿದ್ದ ಗಾನವಿ, ಈಗ ಮತ್ತೆ ಮೋಸ ಮಾಡಿರುವುದು ಅವರ ಮೇಲಿನ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಕುಗ್ಗಿಸಿದೆ. ಅವರ ಇಂದಿನ ನಡೆ ಬಾಲ್ಯದ 'ತೋಳ ಬಂತು ತೋಳ' ಕಥೆಯಂತಾಗಿದೆ. ನಿಜವಾಗಿಯೇ ಅವರು ಅಚಾತುರ್ಯದಿಂದ ಮಾಡಿದ್ದರೂ ಸಹ, ಗಾನವಿ ಮತ್ತೆ ಕಣ್ಣೀರು ಹಾಕುತ್ತಿರುವುದು ಮನೆಯವರ ದೃಷ್ಟಿಯಲ್ಲಿ ಮತ್ತೊಂದು 'ನಾಟಕ'ದಂತೆ ಕಾಣಿಸುತ್ತಿದೆ.

ಮುಂದಿನ ದಿನಗಳಲ್ಲಿ ಗಾನವಿ ತಮ್ಮ ಮೇಲಿನ ಈ ಅಪವಾದದಿಂದ ಹೇಗೆ ಹೊರಬರುತ್ತಾರೆ? ಆಸಿಯಾ ಮತ್ತು ಗಾನವಿ ನಡುವಿನ ಸಂಬಂಧ ಯಾವ ಹಂತ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories