ಕೊನೆಗೂ ವೀಕ್ಷಕರ ಮೆಚ್ಚುಗೆಗೆ ಕಾರಣನಾದ ನಂದ; ಗಂಡ ಅಂದ್ರೆ ಹಿಂಗಿರಬೇಕು ಎಂದ ಮಹಿಳೆಯರು

Published : Jul 09, 2026, 09:23 AM IST

ನಂದಗೋಕುಲ ಸೀರಿಯಲ್‌ನಲ್ಲಿ, ತಾಯಿಯ ಆರೋಗ್ಯ ವಿಚಾರಿಸಲು ಗಂಡನಿಗೆ ಹೇಳದೆ ಆಸ್ಪತ್ರೆಗೆ ಹೋಗಿದ್ದ ಗಿರಿಜಾ, ಸೋದರರಿಂದ ಸಿಕ್ಕಿಬೀಳುತ್ತಾಳೆ. ಗಂಡ ನಂದ ಬೈಯುತ್ತಾನೆಂದು ಭಯಪಟ್ಟರೆ, ಆತ ಆಕೆಯ ನಿರ್ಧಾರವನ್ನು ಬೆಂಬಲಿಸಿ, ವೀಕ್ಷಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

PREV
15
ನಂದಗೋಕುಲ ಸೀರಿಯಲ್‌ನಲ್ಲಿ ಮೆಚ್ಚುಗೆಯ ಟ್ವಿಸ್ಟ್

ನಂದಗೋಕುಲದ ನಂದನ ಬಗ್ಗೆ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ನಂದ ಹೇಳಿದ ಮಾತುಗಳನ್ನು ಕೇಳಿಸಿಕೊಂಡು ಸೀರಿಯಲ್ ವೀಕ್ಷಕರು, ಒಳ್ಳೆಯ ಅಪ್ಪನ ಜೊತೆ ಒಳ್ಳೆಯ ಗಂಡ ಎಂದು ನಂದ ಸಾಬೀತು ಮಾಡಿದ್ದಾನೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಹಾಗಾದ್ರೆ ನಂದ ಹೇಳಿದ ಮಾತೇನು?

25
ಜಗಳಕ್ಕೆ ಬಂದಿದ್ದ ಸೂರ್ಯಕಾಂತ್ ಮತ್ತು ಚಂದ್ರಕಾಂತ್‌ಗೆ ಶಾಕ್

ತಾಯಿಯ ಆರೋಗ್ಯ ವಿಚಾರಿಸಲು ಮಗ ವಲ್ಲಭ ಮತ್ತು ಸೊಸೆ ಅಮೂಲ್ಯಾ ಜೊತೆ ಗಿರಿಜಾ ಆಸ್ಪತ್ರೆಗೆ ತೆರಳಿದ್ದಳು. ಗಿರಿಜಾಳ ಸೋದರರು ಆಸ್ಪತ್ರೆಯಲ್ಲಿರದಂತೆ ಕೇಶವ ಮತ್ತು ಮೀನಾ ನೋಡಿಕೊಂಡಿದ್ದರು. ಗಿರಿಜಾ ಆಸ್ಪತ್ರೆಗೆ ಬಂದಿರೋ ವಿಷಯ ಸೋದರರಿಗೆ ಲಂಚ್ ಬಾಕ್ಸ್‌ನಿಂದ ಗೊತ್ತಾಗಿತ್ತು. ಇದರಿಂದ ನಂದನ ಮನೆ ಮುಂದೆ ಸೂರ್ಯಕಾಂತ್ ಮತ್ತು ಚಂದ್ರಕಾಂತ್ ಹಂಗಾಮ ಸೃಷ್ಟಿಸಿದ್ದರು.

35
ಅಲ್ಲಿ ಆಗಿದ್ದೇ ಬೇರೆ?

ಇತ್ತ ಗಂಡ ನಂದನಿಗೆ ಹೇಳದೇ ಆಸ್ಪತ್ರೆಗೆ ಹೋಗಿ ಬಂದ ವಿಷಯ ಹೊರಗೆ ಬರುತ್ತಲೇ ಗಿರಿಜಾ ಭಯದಿಂದ ಕಣ್ಣೀರು ಹಾಕಲು ಶುರು ಮಾಡಿದ್ದಳು. ಮತ್ತೊಂದೆಡೆ ಗಿರಿಜಾ ಆಸ್ಪತ್ರೆಯಲ್ಲಿರೋ ಸಿಸಿಟಿವಿ ಫೂಟೇಜ್‌ ಸಹ ಸೂರ್ಯಕಾಂತ್ ಮತ್ತು ಚಂದ್ರಕಾಂತ್ ತೋರಿಸಿ ಜಗಳ ಶುರು ಮಾಡಿಕೊಂಡಿದ್ದರು. ಈ ವಿಷಯ ತಿಳಿದು ನಂದ ಕೋಪಗೊಳ್ಳಬಹುದು ಎಂದು ಗಿರಿಜಾ ಅಂದುಕೊಂಡಿದ್ದಳು. ಆದ್ರೆ ಅಲ್ಲಿ ಆಗಿದ್ದೇ ಬೇರೆ?

45
ಗಂಡನ ಮಾತು ಕೇಳಿ ನಿಟ್ಟುಸಿರು ಬಿಟ್ಟ ಗಿರಿಜಾ

ಆಸ್ಪತ್ರೆಯಲ್ಲಿ ಒಂದು ಗಂಟೆ ಇದ್ದು ಬಂದೆಯಾ? ಸಂಜೆಯವರೆಗೂ ಅಲ್ಲಿಯೇ ಇರಬೇಕಿತ್ತು? ಅದು ಆಸ್ಪತ್ರೆಯೇ ಹೊರತು ಇವರ ಮನೆ ಅಲ್ಲಾ? ಅವರು ನಿಮ್ಮ ತಾಯಿ ಎಂದು ನಂದ ಹೇಳುತ್ತಾನೆ. ನಂದ ಬೈಯ್ಯಬಹುದು ಎಂಬ ಭಯದಲ್ಲಿದ್ದ ಗಿರಿಜಾ, ಗಂಡನ ಮಾತುಗಳನ್ನು ಕೇಳಿ ನಿಟ್ಟುಸಿರು ಬಿಟ್ಟಿದ್ದಾಳೆ.

55
ನಂದಕುಮಾರ್ ಪಾತ್ರದ ಬಗ್ಗೆ ಮೆಚ್ಚುಗೆ

ಇಂದಿನ ಪ್ರೋಮೋ ನೋಡಿದ ಸೀರಿಯಲ್ ವೀಕ್ಷಕರು, ನಂದಕುಮಾರ್ ಪಾತ್ರದ ಬಗ್ಗೆ ಮೆಚ್ಚುಗೆ ಸೂಚಿಸಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇದು actually ಚೆನ್ನಾಗಿರೋದು ನಂದಕುಮಾರ್ ಅಂಕಲ್, ನಂದಾ sir ಅಭಿನಯ super, ಇವತ್ತು ಒಳ್ಳೆ ಮಾತಾಡಿದೀಯ ನಂದಣ್ಣ ಎಂಬ ಕಮೆಂಟ್‌ಗಳು ಪ್ರೋಮೋ ವಿಡಿಯೋಗೆ ಬಂದಿವೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರ ದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ನಂದಗೋಕುಲ ಸೀರಿಯಲ್ ಪ್ರಸಾರವಾಗುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories