Actress Car: ಅಂತರಪಟ ಆರಾಧನಾ ಮನೆಗೆ ಬಂತು ಹೊಸ ಕಿಯಾ ಸೆಲ್ಟೋಸ್; ಹೊಸ ಕಾರು ಖರೀದಿ ಮಾಡಲಿ ಇದೇ ಕಾರಣ!

Published : Jul 08, 2026, 08:03 PM IST

'ಅಂತರಪಟ' ಧಾರಾವಾಹಿ ಖ್ಯಾತಿಯ ನಟಿ ರಾಧ್ಯಾ ರಾಜ್ ತಮ್ಮ 10 ವರ್ಷಗಳ ಹೋರಾಟದ ಫಲವಾಗಿ ಹೊಸ 'ಕಿಯಾ ಸೆಲ್ಟೋಸ್' ಕಾರನ್ನು ಖರೀದಿಸಿದ್ದಾರೆ. ತಮ್ಮ 17ನೇ ವಯಸ್ಸಿನಿಂದ 27ನೇ ವಯಸ್ಸಿನವರೆಗಿನ ಕಷ್ಟದ ಪಯಣವನ್ನು ನೆನಪಿಸಿಕೊಂಡು,  ತಮ್ಮ ಜನ್ಮದಿನದ ಉಡುಗೊರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

PREV
16

ಕನ್ನಡ ಕಿರುತೆರೆಯ ಜನಪ್ರಿಯ ನಟಿ ರಾಧ್ಯಾ ರಾಜ್ ತಮ್ಮ ಜೀವನದ ದೊಡ್ಡ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ. 17ನೇ ವಯಸ್ಸಿನ ಹೋರಾಟದಿಂದ 27ನೇ ವಯಸ್ಸಿನ ಈ ಯಶಸ್ಸಿನವರೆಗೆ ಅವರ ಪಯಣ ಓದುಗರಿಗೆ ಸ್ಫೂರ್ತಿದಾಯಕವಾಗಿದೆ.

ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ ಎಂಬ ಮಾತಿಗೆ ಸಾಕ್ಷಿಯಾಗಿದ್ದಾರೆ ಕನ್ನಡ ಕಿರುತೆರೆಯ ಪ್ರತಿಭಾನ್ವಿತ ನಟಿ ರಾಧ್ಯಾರಾಜ್. ಕಲರ್ಸ್ ಕನ್ನಡದ ಜನಪ್ರಿಯ 'ಅಂತರಪಟ' ಧಾರಾವಾಹಿಯ ಮೂಲಕ ಮನೆಮಾತಾಗಿರುವ ಇವರು, ಇದೀಗ ಐಷಾರಾಮಿ 'ಕಿಯಾ ಸೆಲ್ಟೋಸ್' (Kia Seltos) ಕಾರನ್ನು ಖರೀದಿಸುವ ಮೂಲಕ ಸಂಭ್ರಮದಲ್ಲಿದ್ದಾರೆ. ಕುಟುಂಬದೊಂದಿಗೆ ಶೋರೂಮ್‌ಗೆ ತೆರಳಿ ಕಾರು ಖರೀದಿಸಿದ ನಟಿ, ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ವೈರಲ್ ಆಗಿದೆ.

26

ಬ್ಯಾಕ್‌ಸ್ಟೇಜ್ ಡ್ಯಾನ್ಸರ್‌ನಿಂದ ನಾಯಕ ನಟಿಯವರೆಗೆ..

ರಾಧ್ಯಾ ರಾಜ್ ಅವರು ಇಂದು ಈ ಮಟ್ಟಕ್ಕೆ ಬೆಳೆದು ನಿಲ್ಲಲು ಸುಲಭದ ಹಾದಿಯನ್ನೇನೂ ತುಳಿದಿಲ್ಲ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಅವರು, 'ನನಗೆ 17 ವರ್ಷವಿದ್ದಾಗ ನಾನು ಒಬ್ಬ ಸಾಮಾನ್ಯ ಹುಡುಗಿಯಾಗಿದ್ದೆ. ಬ್ಯಾಕ್‌ಸ್ಟೇಜ್‌ನಲ್ಲಿ ನಿಂತು ಡ್ಯಾನ್ಸ್ ಮಾಡುತ್ತಾ, ಕಣ್ಣಲ್ಲಿ ಸಾವಿರಾರು ಕನಸುಗಳನ್ನು ಹೊತ್ತಿದ್ದೆ. ನನ್ನ ಜೀವನದಲ್ಲಿ ಯಾವುದೇ ಶಾರ್ಟ್‌ಕಟ್‌ಗಳಿರಲಿಲ್ಲ, ಆಸರೆ ನೀಡಲು ಯಾರೂ ಇರಲಿಲ್ಲ. ಕೇವಲ ಹೋರಾಟಗಳು, ಮೌನವಾಗಿ ಸುರಿಸಿದ ಕಣ್ಣೀರು ಮತ್ತು ನಿದ್ರೆಯಿಲ್ಲದ ರಾತ್ರಿಗಳಷ್ಟೇ ಜೊತೆಗಿದ್ದವು' ಎಂದು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

36

'ಇಂದು 27ನೇ ವಯಸ್ಸಿನಲ್ಲಿ ನನ್ನ ಮೊದಲ ಕಾರಿನ ಕೀ ಹಿಡಿದಿದ್ದೇನೆ. ಹಲವರಿಗೆ ಇದು ಕೇವಲ ಕಾರು ಇರಬಹುದು, ಆದರೆ ನನಗೆ ಇದು ವರ್ಷಗಳ ತ್ಯಾಗ, ಧೈರ್ಯ ಮತ್ತು ನನ್ನ ಮೇಲಿದ್ದ ನಂಬಿಕೆಗೆ ಸಿಕ್ಕ ಜಯ. ನನ್ನ ತಂದೆ-ತಾಯಿಯ ಕಣ್ಣಲ್ಲಿ ಹೆಮ್ಮೆಯನ್ನು ನೋಡುವುದೇ ಈ ಕ್ಷಣದ ಅತ್ಯಂತ ಅಮೂಲ್ಯವಾದ ಭಾಗ' ಎಂದಿದ್ದಾರೆ. ಈ ಕಾರನ್ನು ಅವರು ತಮಗೆ ತಾವೇ ನೀಡಿಕೊಂಡ 'ಜನ್ಮದಿನದ ಉಡುಗೊರೆ' ಎಂದು ಕರೆದಿದ್ದಾರೆ.

46

ಕಾರು ಖರೀದಿ ವೇಳೆ ಕುಟುಂಬ ಸದಸ್ಯರೊಂದಿಗೆ ಕೇಕ್ ಕತ್ತರಿಸಿ, ಸಿಹಿ ತಿನ್ನುವ ಮೂಲಕ ತಮ್ಮ ಜನ್ಮದಿನವನ್ನೂ ಆಚರಣೆ ಮಾಡಿಕೊಂಡಿದ್ದಾರೆ. ಕುಟುಂಬ ಸದಸ್ಯರೆಲ್ಲರೂ ರಾಧ್ಯಾ ರಾಜ್‌ಗೆ ಶುಭ ಕೋರಿದ್ದಾರೆ. 

ಮತ್ತೊಂದು ವಿಚಾರವೆಂದರೆ ತನ್ವಿಯ ಬಾಲರಾಜ್ ಎಂಬ ಹೆಸರನ್ನು ಹೊಂದಿದ್ದ ನಟಿ ಇತ್ತೀಚೆಗೆ ಜನವರಿ ತಿಂಗಳಲ್ಲಿ ರಾಧ್ಯಾ ರಾಜ್ ಎಂದು ಹೆಸರು ಬದಲಿಸಿಕೊಂಡಿದ್ದರು. ಹೆಸರು ಬದಲಿಸಿಕೊಂಡು 6 ತಿಂಗಳಲ್ಲಿ ಹೊಸ ಕಾರನ್ನು ಖರೀದಿಸಿದ್ದಾರೆ. ಹೆಸರಿನಿಂದಲೂ ಅದೃಷ್ಟ ಖುಲಾಯಿಸಿದೆಯೇ ಎಂದು ಅವರ ಹಿತೈಷಿಗಳು ಕೇಳುತ್ತಿದ್ದಾರೆ.

56

ರಾಧ್ಯಾ ರಾಜ್ ಖರೀದಿಸಿದ ಕಿಯಾ ಸೆಲ್ಟೋಸ್ ವಿಶೇಷತೆಗಳೇನು?

ರಾಧ್ಯಾ ರಾಜ್ ಅವರು ಆಯ್ಕೆ ಮಾಡಿಕೊಂಡಿರುವ ಕಿಯಾ ಸೆಲ್ಟೋಸ್ ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯಂತ ಪ್ರೀಮಿಯಂ ಮತ್ತು ಸ್ಟೈಲಿಶ್ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ:

ವಿನ್ಯಾಸ: ಕಿಯಾ ಸೆಲ್ಟೋಸ್ ತನ್ನ ಸಿಗ್ನೇಚರ್ 'ಟೈಗರ್ ನೋಸ್' ಗ್ರಿಲ್, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಆಕರ್ಷಕ ಅಲಾಯ್ ವೀಲ್‌ಗಳಿಂದಾಗಿ ರಸ್ತೆಯಲ್ಲಿ ಪ್ರೀಮಿಯಂ ಲುಕ್ ನೀಡುತ್ತದೆ.

ಎಂಜಿನ್ ಮತ್ತು ಪರ್ಫಾರ್ಮೆನ್ಸ್: ಈ ಕಾರು 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಸಿಟಿ ಚಾಲನೆ ಮತ್ತು ಲಾಂಗ್ ಡ್ರೈವ್ ಎರಡಕ್ಕೂ ಉತ್ತಮ ಪರ್ಫಾರ್ಮೆನ್ಸ್ ನೀಡುತ್ತದೆ.

ತಂತ್ರಜ್ಞಾನ ಮತ್ತು ಒಳಾಂಗಣ: ಕಾರಿನೊಳಗೆ 10.25 ಇಂಚಿನ ಟ್ವಿನ್ ಡಿಸ್‌ಪ್ಲೇ (ಇನ್ಫೋಟೈನ್‌ಮೆಂಟ್ ಮತ್ತು ಕ್ಲಸ್ಟರ್) ಇದ್ದು, ಪನೋರಮಿಕ್ ಸನ್‌ರೂಫ್ ಕಾರಿಗೆ ಐಷಾರಾಮಿ ಸ್ಪರ್ಶ ನೀಡುತ್ತದೆ. ಇನ್ನು ವೆಂಟಿಲೇಟೆಡ್ ಸೀಟುಗಳು ಮತ್ತು ಬೋಸ್ (Bose) ಸೌಂಡ್ ಸಿಸ್ಟಮ್ ಚಾಲನೆಯ ಅನುಭವವನ್ನು ಸುಧಾರಿಸುತ್ತದೆ.

ಸುರಕ್ಷತೆ: ಸುರಕ್ಷತೆಯ ದೃಷ್ಟಿಯಿಂದ ಈ ಕಾರಿನಲ್ಲಿ 6 ಏರ್‌ಬ್ಯಾಗ್‌ಗಳು ಮತ್ತು ADAS Level 2 (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಫೀಚರ್ಸ್‌ಗಳಿವೆ. ಇದು 360-ಡಿಗ್ರಿ ಕ್ಯಾಮೆರಾವನ್ನು ಸಹ ಹೊಂದಿದ್ದು, ಚಾಲಕನಿಗೆ ಹೆಚ್ಚಿನ ಭದ್ರತೆ ಒದಗಿಸುತ್ತದೆ.

66

'ಅಂತರಪಟ' ಧಾರಾವಾಹಿಯಲ್ಲಿ ಬಡತನದಿಂದ ಉದ್ಯಮ ಕಟ್ಟುವ ಹಾದಿಯಲ್ಲಿ ಸಾಗುವ 'ಆರಾಧನಾ' ಪಾತ್ರ ಮಾಡಿದ್ದ ರಾಧ್ಯಾ ರಾಜ್, ನಿಜ ಜೀವನದಲ್ಲೂ ಹಂತ ಹಂತವಾಗಿ ಬೆಳೆದು ಇಂದು ಈ ಸಾಧನೆ ಮಾಡಿರುವುದು ಅವರ ಅಭಿಮಾನಿಗಳಿಗೆ ಹೆಮ್ಮೆಯ ವಿಚಾರವಾಗಿದೆ. ಇದೀಗ ರಾಧ್ಯಾ ರಾಜ್ ತೆಲುಗು ಕಿರುತೆರೆಯಲ್ಲಿ ಬ್ಯೂಸಿಯಾಗಿದ್ದು, 'ಎನ್ನಾಲ್ಲೋ ವಚ್ಚಿನ ಹೃದಯಂ'ಯ ನಾಯಕಿಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories