'ಲಕ್ಷ್ಮಿ ಬಾರಮ್ಮ' ಕೀರ್ತಿ ದೆವ್ವ ಆಗಿಲ್ಲ ಬಿಗ್ ಬಾಸ್‌ಗೆ ಹೋಗ್ತಿದ್ದಾರೆ; ಅಸಲಿ ಸತ್ಯ ಬಿಚ್ಚಿಟ್ಟ ಟ್ರೋಲ್ ಪೇಜ್‌ಗಳು!

First Published | Sep 2, 2024, 4:44 PM IST

ಕೀರ್ತಿ ಪಾತ್ರಕ್ಕೆ ಗುಡ್ ಬೈ ಹೇಳಿ ಬಿಗ್ ಬಾಸ್ ಆಫರ್ ಒಪ್ಪಿಕೊಳ್ಳುತ್ತಾರಾ ತನ್ವಿ ರಾವ್?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಅತಿ ಹೆಚ್ಚು ಪ್ರಭಾವ ಬೀರಿರುವ ಪಾತ್ರ ಅಂದ್ರೆ ಕೀರ್ತಿ.

ಕೀರ್ತಿ ಹುಟ್ಟು ಪ್ರೀತಿ, ತುಂಟತನ, ಹಠ ನೋಡಿ ಬೈಯುತ್ತಿದ್ದ ಜನರು ಇದೀಗ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಕಾವೇರಿಗೆ ಶಾಪ ಹಾಕುತ್ತಿದ್ದಾರೆ.

Tap to resize

ಬೆಟ್ಟ ಮೇಲಿಂದ ಕೀರ್ತಿಯನ್ನು ದಬ್ಬಿ ಕೊಲೆ ಮಾಡಿರುವ ಕಾವೇರಿಗೆ ಕಾಟ ಕೊಡಲು ಕೀರ್ತಿ ದೆವ್ವ ಆಗಿ ಲಕ್ಷ್ಮಿ ಮೇಲೆ ಬರ್ತಿದ್ದಾಳೆ ಎಂದು ಕೆಲವು ಎಪಿಸೋಡ್‌ಗಳಲ್ಲಿ ತೋರಿಸಲಾಗುತ್ತಿದೆ.

ಅಯ್ಯೋ ಕೀರ್ತಿ ಪಾತ್ರ ಮುಕ್ತಾಯ ಮಾಡುತ್ತಿದ್ದಾರಾ? ಕೀರ್ತಿ ಇಲ್ಲ ಅಂದ್ರೆ ಸೀರಿಯಲ್ ನೋಡಲ್ಲ...ಕಾವೇರಿಗೆ ಕಾಟ ಕೊಡಲು ಕೀರ್ತಿ ಇರಬೇಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 

ಕೀರ್ತಿ ಉರ್ಫ್‌ ತನ್ವಿ ರಾವ್ ತಮಗೆ ಬಿಗ್ ಬಾಸ್ ಆಫರ್ ಬಂದಿದ್ಯಾ ಇಲ್ವಾ ಎಂದು ಹೇಳಿಕೊಂಡಿಲ್ಲ ಅಲ್ಲದೆ ಸೀರಿಯಲ್‌ಗೆ ಗುಡ್ ಬೈ ಹೇಳುತ್ತಿದ್ದಾರಾ ಅಂತಾನೂ ಗೊತ್ತಿಲ್ಲ.

ಸೆಟ್‌ಗೆ ಹೋಗಿ ಸ್ಕ್ರಿಪ್ಟ್‌ ನೋಡಿದ ಮೇಲೆ ಕಥೆ ಹೇಗೆ ಸಾಕುತ್ತಿದೆ ಎಂದು ತಿಳಿಯುವುದು ನನ್ನ ಪಾತ್ರ ಮುಗಿದಿಲ್ಲ ಆದರೆ ಹೇಗೆ ಮುಂದುವರೆಯುತ್ತದೆ ಗೊತ್ತಿಲ್ಲ ಎಂದು ತನ್ವಿ ಖಾಸಗಿ ಸಂದರ್ಶನದಲ್ಲಿ ಹೇಳಿದ್ದಾರೆ.

ಬಿಗ್ ಬಾಸ್ ಸೀಸನ್ 11 ಶೀಘ್ರದಲ್ಲಿ ಆರಂಭವಾಗುತ್ತಿದೆ. ಕೀರ್ತಿ ಕೊಲೆ ಮಾಡಿಸಿ ದೆವ್ವ ಆಗಿದ್ದಾಳೆ ಎಂದು ತೋರಿಸಿ ಪಾತ್ರಕ್ಕೆ ಅಂತ್ಯ ಮಾಡಿ ಇಲ್ಲಿಗೆ ಕರೆಸಿಕೊಳ್ಳುವ ಪ್ಲ್ಯಾನ್ ನಡೆಯುತ್ತಿದೆ ಅಂತಾರೆ ಫ್ಯಾನ್ಸ್‌.

ತನ್ವಿ ರಾವ್ ಸೀರಿಯಲ್‌ನಲ್ಲಿ ತಮ್ಮ ಪಾತ್ರ ಮುಕ್ತಾಯವಾಗುತ್ತಿದೆ ಅದಿಕ್ಕೆ ಬಿಗ್ ಬಾಸ್‌ ಸೀಸನ್ 11ರಲ್ಲಿ ಕಾಲಿಡಲು ರೆಡಿಯಾಗಿದ್ದಾರೆ ಎಂದು ಟ್ರೋಲ್‌ ಪೇಜ್‌ಗಳಲ್ಲಿ ವೈರಲ್ ಆಗುತ್ತಿದೆ.

Latest Videos

click me!