ಸಿಹಿ ತಂಟೆಗೆ ಬಂದ ಭಾರ್ಗವಿಗೆ ತಿರುಗೇಟು ಕೊಟ್ಟ ಸೀತಾ...‌ಇದು ಆಕ್ಚುಲಿ ಚೆನ್ನಾಗಿರೋದು ಅಂದ್ರು ವೀಕ್ಷಕರು

First Published | Sep 2, 2024, 4:35 PM IST

ಸಿಹಿ ಮನಸು ಕೆಡಿಸಿ, ತನ್ನ ಕಾರ್ಯ ಸಾಧಿಸುತ್ತಿದ್ದ ಭಾರ್ಗವಿಗೆ ಸೀತಾ ಸರಿಯಾಗಿ ತಿರುಗೇಟು ನೀಡಿದ್ದು, ಭಾರ್ಗವಿ ತತ್ತರಿಸಿ ಹೋಗಿದ್ದಾರೆ. ವೀಕ್ಷಕರಂತೂ ಹೊಟ್ಟೆ ತುಂಬ ಊಟ ಮಾಡಿದಷ್ಟು ಖುಷಿ ಪಟ್ಟಿದ್ದಾರೆ. 
 

ಸೀತಾ ರಾಮ ಸೀರಿಯಲ್ (Sita Rama Serial) ನಲ್ಲಿ ಸದ್ಯಕ್ಕೆ ಒಂದಷ್ಟು ಟ್ವಿಸ್ಟ್ ಗಳು ಬಂದಿರೋದರಿಂದ ವೀಕ್ಷಕರು ತುಂಬಾನೆ ಕುತೂಹಲದಿಂದ ಸೀರಿಯಲ್ ನೋಡ್ತಿದ್ದಾರೆ. ಇದೀಗ ಸೀತಾ, ಭಾರ್ಗವಿಗೆ ಖಡಕ್ ತಿರುಗೇಟು ನೀಡಿದ್ದು, ಇದನ್ನ ಹಲವಾರು ಸಮಯದಿಂದ ನಿರೀಕ್ಷಿಸುತ್ತಿದ್ದ ವೀಕ್ಷಕರು ತುಂಬಾನೆ ಖುಷಿ ಪಟ್ಟಿದ್ದಾರೆ. 
 

ಸೀತಾ ರಾಮನನ್ನು ಮದುವೆಯಾಗೋ ಮುನ್ನವೇ ತನಗೆ ಇನ್ನೊಂದು ಮಗು ಬೇಡ, ಸಿಹಿ ಮಾತ್ರ ನನ್ನ ಮಗಳಾಗಿದ್ರೆ ಸಾಕು ಎಂದು ರಾಮನ ಬಳಿ ಹೇಳಿದ್ಲು. ರಾಮನು(Ram) ಅದಕ್ಕೆ ಒಪ್ಪಿಗೆ ಸೂಚಿಸಿದ್ದ. ಭಾರ್ಗವಿ ಈ ಟೈಮಲ್ಲೂ ತನ್ನ ಕುತಂತ್ರ ಬುದ್ದಿಯನ್ನು ಉಪಯೋಗಿಸಿ, ತಾತನಿಂದ ಆ ವಿಷ್ಯ ಮುಚ್ಚಿಟ್ಟು, ಆದ್ರೆ ರಾಮ ಮತ್ತು ಸೀತೆಯಿಂದ ಆ ವಿಷ್ಯ ಮಾವನಿಗೆ ಗೊತ್ತಿದೆ ಎನ್ನೋ ಥರ ನಾಟಕ ಆಡಿದ್ಲು. 
 

Tap to resize

ಇದಾಗಿ, ರಾಮ -ಸೀತೆ ಮದುವೆಯಾದ ಬಳಿಕ, ಸಿಹಿಯನ್ನ ಮುಂದಿಟ್ಟು ನಾಟದ ಆಡ್ತಿದ್ರು ಭಾರ್ಗವಿ (Bhargavi). ಸೀತಾಳಿಂದ ಸಿಹಿಯನ್ನ ದೂರ ಮಾಡೋಕೆ, ಸಿಹಿ ಮನಸಲ್ಲಿ ಇಲ್ಲಸಲ್ಲದ ಆಲೋಚನೆ ತುಂಬಿ ಬೋರ್ಡಿಂಗ್ ಸ್ಕೂಲ್ ಹೋಗುವಂತೆ ಮಾಡಿದ್ಲು, ಅದಿಷ್ಟು ಸಾಲದು ಅಂತ, ಸಿಹಿ ತನಗೆ ತಮ್ಮ ಬೇಕು ಅಂತ ಅಮ್ಮ-ಅಪ್ಪನ ಬಳಿ ಹಠ ಮಾಡುವಂತೆ ಸಹ ಮಾಡಿದ್ದಾಳೆ. 
 

ರಾಮ -ಸೀತಾರ ಮುದ್ದಿನ ಮಗಳು ಸಿಹಿ, ಇದೀಗ ತನಗೆ ಇದನ್ನೆಲ್ಲಾ ಮಾಡೊದಕ್ಕೆ ಹೇಳಿದ್ದು, ಬಡ್ಡಿ ಬಂಗಾರಮ್ಮ ಅನ್ನೋದನ್ನು ಸಹ ಹೇಳಿದ್ದಾಳೆ. ಈಗ ಸೀತಾಗೆ ಭಾರ್ಗವಿ ಅತ್ತೆಯ ಒಂದೊಂದು ಪ್ಲ್ಯಾನ್ ಗಳ ಬಗ್ಗೆಯೂ ತಿಳಿದು ಬಂದಿದ್ದು, ಭಾರ್ಗವಿಗೆ ಸರಿಯಾದ ತಿರುಗೇಟನ್ನ ನೀಡುತ್ತಿದ್ದಾಳೆ. 
 

ಸಿಹಿ ಹರಕೆ ಹೊತ್ತು ಪೂಜೆ ಮಾಡಿರೋದಾಗಿ ಹೇಳಿ ಭಾರ್ಗವಿಗೆ ಆರತಿ, ಪ್ರಸಾದ ಕೊಡುವ ಸೀತಾ, ಸಿಹಿ ತನಗೆ ತಮ್ಮ ಬೇಕು ಅಂತ ಹೇಳಿ ತಾನೇ ಹೂಇಟ್ಟು ಪೂಜೆ ಮಾಡೋದಾಗಿ ಹರಕೆ ಹೊತ್ತಿದ್ದಾಳೆ. ಅದಕ್ಕೆ ಪ್ರಸಾದ ತೆಗೊಳಿ ಎನ್ನುತ್ತಾಳೆ. ಇದನ್ನ ಕೇಳಿದ ಭಾರ್ಗವಿ ಶಾಕ್ ಆಗಿದ್ದು, ಸೀತಾ ಮಾವ ಸಿಹಿ ಮಗುನ ಕೇಳ್ತಾರೆ ಅಂತ ನೀನು ಅವರಿಗೆ ಸಮಾಧಾನ ಆಗ್ಲಿ ಅಂತ ನಾಟಕ ಮಾಡ್ತಿದ್ದಿಯಾ? ಎಂದು ಕೇಳಿದ್ದಕ್ಕೆ ಸೀತಾ, ಇಲ್ಲ ಅತ್ತೆ,ಈ ವಿಷ್ಯದಲ್ಲಿ ಯಾರು ನಾಟಕ ಮಾಡ್ತಾರೆ ಅಂತಾಳೆ. 
 

ನಾನು ಈ ಮನೆಗೆ ಬರೋ ಮೊದಲು, ಸಿಹಿಗೆ ತಾನು ಬೇರೆ, ಒಂಟಿ ಅಂತ ಅನಿಸಬಾರದು ಅಂತ ಮಗು ಬೇಡ ಅಂತ ಯೋಚ್ನೆ ಮಾಡಿದ್ದೆ ನಿಜಾ, ಆದ್ರೆ ನೀವು ನನ್ನನ್ನ ನೋಡಿಕೊಳ್ಳೋ ರೀತಿ, ರಾಮ್ ನ ಪ್ರೀತಿ ಎಲ್ಲಾ ನನ್ನನ್ನ ಬದಲಾಯಿಸಿದೆ. ಮಗು ಬೇಡ ಅಂತ ನಾನು ಯೋಚನೆ ಮಾಡಿದ್ದೆ ನಗು ತರಿಸುತ್ತಿದೆ ಎನ್ನುತ್ತಾಳೆ ಸೀತಾ. ರಾಮ್ ನ ನಾನು ತುಂಬಾ ಇಷ್ಟಪಡ್ತೀನಿ. ಹಾಗಾಗಿ ಪ್ರೀತಿಯಲ್ಲಿ ಸೋಲೋದೆ ಗೆಲುವು, ಸಿಹಿಗೆ ತಮ್ಮ ಬೇಕು, ತಾತನಿಗೆ ಮರಿಮೊಮ್ಮಗು ಬೇಕು ಎನ್ನುವಾಗ ಅದನ್ನೆಲ್ಲಾ ಹೇಗೆ ಬೇಡ ಅನ್ನೋದು ಎನ್ನುವ ಸೀತಾ ಮಾತನ್ನ ಕೇಳಿ ಭಾರ್ಗವಿ ಮುಖದ ಬಣ್ಣಾನೆ ಬದಲಾಗುತ್ತೆ. 
 

ಇದ್ರ ಜೊತೆಗೆ ನನಗೆ ಇನ್ನೊಂದು ಮಗು ಆದ್ರೆ ಸಿಹಿನ ದೂರ ಮಾಡ್ತೀವಿ ಅನ್ನೋ ಸಣ್ಣ ಮನಸ್ಥಿತಿ ಇಲ್ಲಿ ಯಾರಿಗೂ ಇಲ್ಲ ಅಂದ್ಕೊಳ್ತೀನಿ, ಸಿಹಿನ ಬೋರ್ಡಿಂಗ್ ಸ್ಕೂಲ್ ಗೆ ಕಳಿಸಿ, ನನ್ನ ರಾಮನ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡಿದ್ದಕ್ಕೆ ಥ್ಯಾಂಕ್ಸ್  ಎಂದು ನೇರವಾಗಿ ಭಾರ್ಗವಿಗೆ ತಿರುಗೇಟು ನೀಡ್ತಾಳೆ ಸೀತಾ. ಜೊತೆಗೆ ತನಗೆ ಸಿಹಿ ನೀವು ಹೇಳಿದ್ದ ಎಲ್ಲವನ್ನೂ, ಅಂದ್ರೆ ಎಲ್ಲಾ ವಿಷ್ಯಗಳನ್ನು ಹೇಳಿರೊದಾಗಿ ಹೇಳ್ತಾಳೆ. 
 

ಸೀತಾ ನೇರವಾಗಿ ಭಾರ್ಗವಿಗೆ ತಿರುಗೇಟು ನೀಡ್ತಿರೋದನ್ನ ನೋಡಿ ವೀಕ್ಷಕರು ಖುಷಿ ವ್ಯಕ್ತಪಡಿಸಿದ್ದು, ಇದು ಆಕ್ಚುಲಿ ಚೆನ್ನಾಗಿರೋದು, ಅಂತಿದ್ದಾರೆ ಅಲ್ಲದೇ, ಈಗ ನಿಜವಾದ ಆಟ ಶುರು, ಸೀತಾ ರಾಕ್ಸ್, ಭಾರ್ಗವಿ ಶಾಕ್ ಎಂದಿದ್ದಾರೆ. ಈ ಎಪಿಸೋಡ್ ತುಂಬಾನೆ ಚೆನ್ನಾಗಿದೆ, ಭಾರ್ಗವಿಗೆ ರೇಷ್ಮೆ ಸೀರೆಯಲ್ಲಿ ಸುತ್ತಿ ಹೊಡೆದಂಗಾಗಿದೆ ಎಂದು ತಮ್ಮ ಸಂತಸವನ್ನ ವ್ಯಕ್ತಪಡಿಸಿದ್ದಾರೆ ಜನ. 
 

Latest Videos

click me!