ಬಿಗ್ ಬಾಸ್ ತೆಲುಗು: ಹೋಸ್ಟ್ ನಾಗರ್ಜುನನಿಗೆ ಸಹಾಯ ಹಸ್ತ ಚಾಚಿದ್ದ ಸಮಂತಾ!

First Published | Sep 2, 2024, 3:26 PM IST

ಬಿಗ್ ಬಾಸ್ ತೆಲುಗಿನ 8ನೇ ಸೀಸನ್‌ ಆರಂಭಗೊಂಡಿದೆ. ಕನ್ನಡಿಗರೂ ಸೇರಿ 14 ಮಂದಿ ಈಗಾಗಲೇ ಮನೆಯೊಳಗೆ ಕಾಲಿಟ್ಟಾಗಿದೆ. ಸಹಜವಾಗಿಯೇ ಹಲವು ಕುತೂಹಲಗಳೊಂದಿಗೆ ಶೋ ಮುಂದುವರಿಯಲಿದೆ. ಈ ರಿಯಾಲಿಟಿ ಶೋಗೆ ಅಕ್ಕಿನೇನಿ ನಾಗರ್ಜುನ ನಿರೂಪಕರಾಗಿದ್ದು, ಇವರಿಗೆ ಮಾಜಿ ಸೊಸೆ ಸಮಂತಾಗೆ ಹಿಂದಿನ ಶೋಗಳಲ್ಲಿ ಹೇಗೆ ಸಹಕರಿಸಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು. 

ಬಿಗ್ ಬಾಸ್ ತೆಲುಗು ಸೀಸನ್ 8 ಗ್ರ್ಯಾಂಡ್ ಲಾಂಚ್

ಬಿಗ್ ಬಾಸ್ ರಿಯಾಲಿಟಿ ಶೋನ ಹೊಸ ಸೀಸನ್‌ನಲ್ಲಿ ಮನೆಯ ವಿನ್ಯಾಸ ಹೇಗಿರಲಿದೆ? ಸ್ಪರ್ಧಿಗಳು ಯಾರು? ಈ ಬಾರಿ ಹೇಗಿರಲಿದೆ? ನಿಯಮಗಳು ಹೇಗಿರಲಿವೆ? ಇಂತಹ ವಿಷಯಗಳು ಕುತೂಹಲಕಾರಿಯಾಗಿವೆ. ಅಲ್ಲದೇ ಸ್ಪರ್ಧಿಗಳು ಬಗ್ಗೆ ಇದ್ದ ಅನೇಕ ಊಹಾಪೋಹಗಳಿದ್ದು, ಎಲ್ಲವಕ್ಕೂ ಸ್ಪಷ್ಟ ಉತ್ತರ ಸಿಕ್ಕಿದೆ. 

ಇದೇ ಸಮಯದಲ್ಲಿ ಈ ಹಿಂದೆ ನಡೆದ ಶೋಗಳಲ್ಲಿ ನಡೆದ ವಿವಾದ, ಮನೋರಂಜನೆ ಸೇರಿ ಎಲ್ಲ ವಿಷಯಗಳನ್ನೂ ವೀತಕ್ಷಕರು ನೆನಪಿಸಿಕೊಳ್ಳುತ್ತಿದ್ದಾರೆ. ಈ ಶೋನ 3ನೇ ಸೀಸನ್‌ನಿಂದಲೂ ನಾಗಾರ್ಜುನ ನಿರೂಪರಕರಾಗಿ ಮುಂದುವರಿದಿದ್ದು, ಅವರ ಮಾಜಿ ಸೊಸೆ, ಮಗ ನಾಗ ಚೈತನ್ಯ ಡಿವೋರ್ಸ್ ನೀಡಿರುವ ಸಮಂತಾ ರುತ್‌ಪ್ರಭು ಹಾಗೂ ರಮ್ಮಾಕೃಷ್ಣ ಕೆಲ ಕಾಲ ಈ ಕಾರ್ಯಕ್ರಮಕ್ಕೆ ಹೋಸ್ಟ್ ಆಗಿ ಬಂದಿದ್ದರು. ಅಷ್ಟಕ್ಕೂ ಇವರು ಯಾಕೆ ಬಂದಿದ್ದು? ಇಲ್ಲಿದೆ ಕೆಲವು ಮಾಹಿತಿ. 

Tap to resize

ನಾಗಾರ್ಜುನ ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ವೇಳೆ ಇವರಿಬ್ಬರೂ ಕೆಲವು ವಾರಗಳ ಕಾಲ ನಿರೂಪಕರಾಗಿ ನಿರ್ವಹಿಸಿದರು. ಸೀಸನ್ 4ರಲ್ಲಿ ಸಮಂತ ಒಂದು ವಾರಾಂತ್ಯದಲ್ಲಿ ನಿರೂಪಕಿಯಾಗಿ ಮಿಂಚಿದರು. ಸೀಸನ್ 4ರಲ್ಲಿ ಏಳನೇ ವಾರದ ವಾರಾಂತ್ಯದಲ್ಲಿ ನಾಗಾರ್ಜುನ ಲಭ್ಯವಿರಲಿಲ್ಲ. ಮನಾಲಿಯಲ್ಲಿ ಚಿತ್ರೀಕರಣಕ್ಕೆ ಹಾಜರಾಗಬೇಕಾಯಿತು. ಇದರಿಂದ ಮಾವನಿಗಾಗಿ ಸಮಂತ ತಾತ್ಕಾಲಿಕ ನಿರೂಪಕಿಯಾಗಿ ಕಾರ್ಯನಿರ್ವಹಿಸಿದರು. ಸಮಂತಾ ಹಿಂದೆ ಕೆಲವು ಟಾಕ್ ಶೋಗಳಿಗೆ ನಿರೂಪಕಿಯಾಗಿ ಅನುಭವ ಹೊಂದಿದ್ದರು.

ಯುವಕರಲ್ಲಿ ಸಮಂತಾಗೆ ಇರುವ ಕ್ರೇಜ್ ಬಗ್ಗೆ ಹೇಳಬೇಕಾಗಿಲ್ಲ. ಸಮಂತ ಬಿಗ್ ಬಾಸ್ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರಿಂದ ಅಭಿಮಾನಿಗಳು ಸಖತ್ ಖುಷಿಯಾಗಿದ್ದರು. ಕುತೂಹಲಕಾರಿ ಸಂಗತಿಯೆಂದರೆ ಲಾಂಚ್ ಎಪಿಸೋಡ್, ಗ್ರ್ಯಾಂಡ್ ಫಿನಾಲೆ ಹೊರತುಪಡಿಸಿ ಆ ಸೀಸನ್‌ನಲ್ಲಿ ಎಲ್ಲಾ ವಾರಾಂತ್ಯಗಳಲ್ಲಿಯೂ ಟಿಆರ್‌ಪಿ ಪಡೆದ ವಾರಾಂತ್ಯದ ಎಪಿಸೋಡ್ ಸಮಂತಾ ಅವರು ನಡೆಸಿಕೊಟ್ಟ ಬಿಗ್‌ಬಾಸ್. ಒಟ್ಟು 11.4 ಟಿಆರ್‌ಪಿ ಪಡೆದು ಸ್ಯಾಮ್ ದಾಖಲೆ ಮಾಡಿದ್ದರು.

ಮಾವನಿಗಾಗಿ ಸಮಂತಾ ಮಾಡಿದ ಸಹಾಯ ಬಿಗ್ ಬಾಸ್ ಶೋಗೆ ದಾಖಲೆಯ ವೀಕ್ಷಣೆಯನ್ನು ತಂದುಕೊಟ್ಟಿತು. ಆ ನಂತರ ಸಮಂತಾ ನಾಗ ಚೈತನ್ಯ ಅವರೊಂದಿಗೆ ಬೇರ್ಪಟ್ಟು, ಅಕ್ಕಿನೇನಿ ಕುಟುಂಬದಿಂದ ದೂರವಾದ ವಿಷಯ ಎಲ್ಲರಿಗೂ ತಿಳಿದಿದೆ.

ಸೀಸನ್ 7 ಲಾಂಚ್ ಎಪಿಸೋಡ್ 18.1 ಟಿಆರ್‌ಪಿ ರೇಟಿಂಗ್ ಪಡೆದುಕೊಂಡಿದೆ. ಸೀಸನ್ 8 ಲಾಂಚ್ ಎಪಿಸೋಡ್ ಯಾವ ರೀತಿಯ ದಾಖಲೆ ಸೃಷ್ಟಿಸಬಹುದು ಎಂಬುದನ್ನು ಕಾದು ನೋಡಬೇಕಿದೆ. ಲಾಂಚ್ ಎಪಿಸೋಡ್‌ಗೆ ಅನೇಕ ಅತಿಥಿಗಳು ವೇದಿಕೆಯಲ್ಲಿ  ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ, ಎಂದಿನಂತೆ ಸ್ಪರ್ಧಿಗಳು ಡ್ಯಾನ್ಸ್ ಮನರಂಜನೆ ನೀಡುವುದರಲ್ಲಿ ಅನುಮಾನವೇ ಇಲ್ಲ.

Latest Videos

click me!