ನಿಂಗೆ ಸ್ಟೈಲ್ ಮಾಡೋಕೆ ಬರಲ್ಲ; ದಿನಾ ಸೀರೆಯಲ್ಲಿ 'ಲಕ್ಷಣ' ನೋಡಲು ಬೋರು ಎಂದ ನೆಟ್ಟಿಗರು!

First Published | Sep 13, 2023, 3:28 PM IST

ಸಾಮಾಜಿಕ ಜಾಲತಾನದಲ್ಲಿ ಆಕ್ಟಿವ್ ಆಗುತ್ತಿರುವ ವಿಜಯಲಕ್ಷ್ಮಿ. ಲಕ್ಷಣ ಮುಗಿಯುತ್ತಿದೆ ಆದರೂ ಸ್ಟೈಲಿಷ್ ಆಗಿಲ್ಲ ಯಾಕೆ..... 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯಲ್ಲಿ ಲಕ್ಷಣ ಪಾತ್ರದಲ್ಲಿ ಮಿಂಚುತ್ತಿರುವ ವಿಜಯ ಲಕ್ಷ್ಮಿ. 

ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಆಕ್ಟಿವ್ ಆಗಿರುವ ವಿಜಯಲಕ್ಷ್ಮಿ ನಿಯಾನ್ ಬ್ಲೂ ಬಣ್ಣದ ಸೀರೆ ಧರಿಸಿದ್ದು, ಫೋಟೋ ಅಪ್ಲೋಡ್ ಮಾಡಿದ್ದಾರೆ.

Tap to resize

ನೀಲಿ ಮತ್ತು ವೈಟ್ ಹಾರ್ಟ್ ಎಮೋಜಿ ಹಾಕಿರುವ ವಿಜಯಲಕ್ಷ್ಮಿ ಈ ಸೀರೆಗೆ ಕೃಪೆಯನ್ನು ಲಿಖಿತಾ ಸುರೇಶ್‌ಗೆ ನೀಡಿದ್ದಾರೆ ಹಾಗೂ ಫೋಟೋ ಕ್ಲಿಕ್ ಮಾಡಿರುವುದು ಸ್ಪಂದನಾ ಸೋಮಣ್ಣ.

ನಿಯಾನ್ ಬ್ಲೂ ಸೀರೆಗೆ ಗೋಲ್ಡ್‌ ಡಿಸೈನರ್ ಬಾರ್ಡರ್‌ ಇದೆ. ಬ್ಲೌಸ್‌ಗೂ ಕೂಡ ಸಂಪೂರ್ಣವಾಗಿ ಗೋಲ್ಡ್‌ ಬಣ್ಣದಲ್ಲಿ ವರ್ಕ್‌ ಇದೆ.

ಇನ್ನು ಸದಾ ಸಿಂಪಲ್ ಮೇಕಪ್ ಆಯ್ಕೆ ಮಾಡಿಕೊಳ್ಳುವ ವಿಜಯಲಕ್ಷ್ಮಿ ಈ ಗ್ರ್ಯಾಂಡ್‌ ಸೀರೆಗೂ ಸಿಂಪಲ್ ಮೇಕಪ್ ಮತ್ತು ಫಿಶ್ ಬ್ರೇಡ್ ಹೇರ್‌ಸ್ಟೈಲ್ ಮಾಡಿಕೊಂಡಿದ್ದಾರೆ.

ಲಕ್ಷಣ ಸೀರಿಯಲ್ ಮುಗಿಯುವ ಹಂತದಲ್ಲಿದೆ ಆದರೂ ಲಕ್ಷಣ ಮಾಡರ್ನ್‌ ಸ್ಟೈಲ್ ಮಾಡುತ್ತಿಲ್ಲ. ಕೊಂಚ ಸ್ಟೈಲಿಷ್ ಆಗಿ ಎಂದು ನೆಟ್ಟಿಗರು ಮನವಿ ಮಾಡಿದ್ದಾರೆ. 

Latest Videos

click me!