ನಟ ವಿಜಯ್ ಸೂರ್ಯ ಮನೆಯಲ್ಲಿ ಲಕ್ಷ್ಮೀ ಪೂಜೆ: ನಮ್ಮ ಲಚ್ಚಿ ತಂಡ ಭಾಗಿ

Published : Sep 13, 2023, 03:16 PM IST

ನಮ್ಮ ಲಚ್ಚಿ ಸೀರಿಯಲ್ ನಟ ವಿಜಯ್ ಸೂರ್ಯ ಅವರ ಜನ್ಮದಿನದಂದು ಮನೆಯಲ್ಲಿ ಲಕ್ಷ್ಮೀ ಪೂಜೆ ಇಟ್ಟುಕೊಂಡಿದ್ದು, ನಮ್ಮ ಲಚ್ಚಿ ಸೀರಿಯಲ್ ತಂಡ ಪೂಜೆಯಾಗಿ ಭಾಗಿಯಾಗಿದ್ದಾರೆ.   

PREV
18
ನಟ ವಿಜಯ್ ಸೂರ್ಯ ಮನೆಯಲ್ಲಿ ಲಕ್ಷ್ಮೀ ಪೂಜೆ: ನಮ್ಮ ಲಚ್ಚಿ ತಂಡ ಭಾಗಿ

ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕರ್ನಾಟದ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದ ನಟ ವಿಜಯ್ ಸೂರ್ಯ (Vijay Suriya) ಇಬ್ಬರು ಮಕ್ಕಳ ತಂದೆಯಾಗಿ ಭಡ್ತಿ ಪಡೆದಿರುವ ಸಂಭ್ರಮದಲ್ಲಿದ್ದಾರೆ. ಜೊತೆಗೆ ಇವರು ತಮ್ಮ ಜನ್ಮ ದಿನದ ಹಿನ್ನೆಲೆಯಲ್ಲಿ ತಮ್ಮ ಮನೆಯಲ್ಲಿ ಲಕ್ಷ್ಮೀ ಪೂಜೆಯನ್ನು ಆಯೋಜಿಸಿದ್ದರು. 
 

28

ವಿಜಯ್ ಸೂರ್ಯ ಇದೀಗ ಸ್ಟಾರ್ ಸುವರ್ಣದಲ್ಲಿ (Star Suvarna) ಪ್ರಸಾರವಾಗುತ್ತಿರುವ  'ನಮ್ಮ ಲಚ್ಚಿ'  ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.  ಈ ಸೀರಿಯಲ್‌ನಲ್ಲಿ ನಟ ಜನಪ್ರಿಯ ಗಾಯಕ ಸಂಗಮ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಸೀರಿಯಲ್ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 
 

38

ಇನ್ನು ವಿಜಯ್ ಸೂರ್ಯ ಮನೆಯಲ್ಲಿ ನಡೆದ ಲಕ್ಷ್ಮೀ ಪೂಜೆಯ ಸಮಾರಂಭದಲ್ಲಿ 'ನಮ್ಮ ಲಚ್ಚಿ' (Namma Lacchi) ಧಾರಾವಾಹಿ ಕಲಾವಿದರು ಭಾಗಿಯಾಗಿದ್ದಾರೆ. ತಂದೆ ತಾಯಿ, ಹೆಂಡತಿ ಮಕ್ಕಳು, ಕುಟುಂಬಸ್ಥರು ಮತ್ತು ಸಹನಟರ ಜೊತೆ ವಿಜಯ್ ಅದ್ಧೂರಿಯಾಗಿ ಪೂಜೆ ನೆರವೇರಿಸಿದ್ದಾರೆ. 
 

48

ನಟಿ ಐಶ್ವರ್ಯಾ ಸಿಂಧೋಗಿ, ಸುಷ್ಮಿತಾ ಗೌಡ, ಜಗಪ್ಪ, ವಾಣಿಶ್ರೀ, ಲಚ್ಚಿ ಪಾತ್ರದಲ್ಲಿ ನಟಿಸುತ್ತಿರುವ ಬಾಲನಟಿ ಸಾಂಘವಿ ಕಾಂತೇಶ್ ಮುಂತಾದವರು ಕೂಡ ವಿಜಯ್ ಸೂರ್ಯ ಮನೆಯಲ್ಲಿ ನಡೆಯ ಲಕ್ಷ್ಮೀ ಪೂಜೆಯಲ್ಲಿ ಭಾಗವಹಿಸಿ, ಲಕ್ಷ್ಮೀ ಕೃಪೆಗೆ ಪಾತ್ರರಾಗಿದ್ದಾರೆ. 
 

58

ನಟಿಯರಾದ ಐಶ್ವರ್ಯಾ, ಸುಷ್ಮಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ವಿಜಯ್ ಮನೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸಮಾರಂಭದಲ್ಲಿ ನಮ್ಮ ಲಚ್ಚಿ ತಂಡದೊಂದಿಗೆ ಸಂಭ್ರಮಿಸಿದ ಫೋಟೊಗಳನ್ನು ಶೇರ್ ಮಾಡಿದ್ದಾರೆ. 
 

68

ಸೀರಿಯಲ್ ಬಗ್ಗೆ ಹೇಳೋದಾದರೆ ನಮ್ಮ ಲಚ್ಚಿ ಸೀರಿಯಲ್ ಅತ್ಯುತ್ತಮವಾಗಿ ಮೂಡಿ ಬರುತ್ತಿದ್ದು, ವಿಭಿನ್ನ ಕಥೆಯನ್ನು ಹೊಂದಿರುವ ಈ ಸೀರಿಯಲ್ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಗಾಯಕ ಸಂಗಮ್ ಮತ್ತು ಗ್ರಾಮದ ಹುಡುಗಿ ಗಿರಿಜಾ ನಡುವಿನ ಪ್ರೀತಿ, ದೂರವಾಗೋದು, ಇದೀಗ ಮಗಳು ಲಚ್ಚಿ ಅಪ್ಪನ ಹಾದಿಯಲ್ಲಿ ಸಂಗೀತ ಲೋಕದಲ್ಲಿ ಬೆಳೆಯುವುದು ಕಥೆ. 
 

78

ತಂದೆಯನ್ನು ನೋಡಿಯೇ ಇರದ ಲಚ್ಚಿ, ಅಮ್ಮ ತೀರಿಹೋದಾಗ, ಅತ್ತೆಯ ಕಾಟದಿಂದ ತಪ್ಪಿಸಲು ಬೆಂಗಳೂರಿಗೆ ಬಂದು, ಅಲ್ಲಿ ತನ್ನ ತಂದೆಯ ಬಗ್ಗೆ ಗೊತ್ತಿರದೇ ಇದ್ದರೂ ತನ್ನ ಆರಾಧ್ಯ ಗುರುಗಳಾದ ಸಂಗಮ್ ಅವರ ಮನೆಯಲ್ಲಿಯೇ ಆಶ್ರಯ ಪಡೆಯುತ್ತಾಳೆ. ಇನ್ನು ಲಚ್ಚಿ ತನ್ನದೇ ಮಗಳು ಅನ್ನೋದು ಸಂಗಮ್ ಗೆ ಗೊತ್ತಾಗಬೇಕಿದೆ. 
 

88

ವಿಜಯ್ ಸೂರ್ಯ ಬಗ್ಗೆ ಹೇಳೋದಾದ್ರೆ ಇವರು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಸೀರಿಯಲ್ ನಲ್ಲೂ ಸಹ ನಟಿಸುತ್ತಿದ್ದಾರೆ. ಅಲ್ಲದೇ ರೊಮ್ಯಾಂಟಿಕ್, ಚಾಕಲೇಟ್ ಹೀರೋ ಆಗಿದ್ದ ವಿಜಯ್ ಇದೀಗ ವೀರಪುತ್ರ ಎನ್ನುವ ಕನ್ನಡ ಆಕ್ಷನ್ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ. 
 

click me!

Recommended Stories