Kannada

ನಿಶಾ ರವಿಕೃಷ್ಣನ್

ಕನ್ನಡ ಕಿರುತೆರೆಯ ರೌಡಿ ಬೇಬಿ ನಿಶಾ ರವಿಕೃಷ್ಣನ್, ತಮ್ಮ ಅಣ್ಣಯ್ಯ ಸೀರಿಯಲ್ ಕೋ ಆರ್ಟಿಸ್ಟ್ ಹಾಗೂ ತಮ್ಮ ಅಣ್ಣ ಪರಶು ಪಾತ್ರದಲ್ಲಿ ನಟಿಸುತ್ತಿರುವ ಚಿರಂಜಿವಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.

Kannada

ಚಿರಂಜೀವಿ ಹುಟ್ಟುಹಬ್ಬ

ಪರಶು ಪಾತ್ರದಲ್ಲಿ ನೆಗೆಟಿವ್ ಶೇಡ್ ನಲ್ಲಿ ನಟಿಸುತ್ತಿರುವ ಚಿರಂಜೀವಿಯವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ನಿಶಾ ಶುಭ ಕೋರಿದ್ದಾರೆ.

Image credits: Instagram
Kannada

ಮುದ್ದಾದ ಫೋಟೋಸ್ ಮೂಲಕ ವಿಶ್

ನಿಶಾ ರವಿಕೃಷ್ಣನ್ ತಮ್ಮ ಇನ್’ಸ್ಟಾಗ್ರಾಂನಲ್ಲಿ ಚಿರಂಜಿವಿ ಜೊತೆಗಿನ ಮುದ್ದಾಗಿರುವ ಫೋಟೋಸ್ ಹಂಚಿಕೊಂಡು ಅಷ್ಟೇ ಮುದ್ದಾಗಿ ವಿಶ್ ಮಾಡಿದ್ದಾರೆ.

Image credits: Instagram
Kannada

ನೆಚ್ಚಿನ ಚಿರಂಜಿವಿಗೆ ಹ್ಯಾಪಿ ಬರ್ತ್ ಡೇ

ನಿಶಾ ಫೋಟೊಗಳ ಜೊತೆ ನನ್ನ ನೆಚ್ಚಿನ ಚಿರಂಜೀವಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಮೊದಲಿಗೆ ಬರೆದುಕೊಂಡು, ಬಳಿಕ ಬ್ಯಾಂಗ್ ಬ್ಯಾಂಗ್ ಎಂದಿದ್ದಾರೆ.

Image credits: Instagram
Kannada

ನಿನ್ನ ಜೊತೆ ಇರುವಾಗ ಸಮಯ ಕಳೆದದ್ದೆ ಗೊತ್ತಾಗುವುದಿಲ್ಲ

ನಾನು ನಿಮ್ಮೊಂದಿಗೆ ಇರುವಾಗ ಹೆಚ್ಚು ನಗುತ್ತೇನೆ. ನಾವು ಅಕ್ಷರಶಃ ಗಂಟೆಗಟ್ಟಲೆ ಮಾತನಾಡುತ್ತೇವೆ. ಆದರೆ ಸಮಯ ಹೇಗೆ ಕಳೆದು ಹೋಗುತ್ತದೆ ಎನ್ನುವುದೇ ತಿಳಿಯುವುದಿಲ್ಲ.

Image credits: Instagram
Kannada

ನೀನು ನನ್ನ ಫೇವರಿಟ್

ನೀವು ಯಾವಾಗಲೂ ನನ್ನ ಫೇವರಿಟ್. ನನಗೆ ಅಗತ್ಯವಿದ್ದಾಗ ಯಾವಾಗಲೂ ಜೊತೆ ಇರುವುದಕ್ಕೆ ಥ್ಯಾಂಕ್ಯೂ. ನೀವು ನಿಜವಾಗಿಯೂ ಅತ್ಯಂತ ದಯಾಳು ಮತ್ತು ಪರಿಶುದ್ಧ ಆತ್ಮ ಎಂದಿದ್ದಾರೆ.

Image credits: Instagram
Kannada

ನಿನ್ನನ್ನು ಪಡೆದ ನಾನು ಅದೃಷ್ಟಶಾಲಿ

ನನ್ನ ಜೀವನದಲ್ಲಿ ನಿಮ್ಮನ್ನು ಪಡೆಯಲು ನಾನು ತುಂಬಾ ಅದೃಷ್ಟಶಾಲಿ. ಯಾವಾಗಲೂ ಹಾಗೆಯೇ ಇರಿ! ಲವ್ ಯೂ ಸೋ ಮಚ್ ಎಂದು ಮುದ್ದಾಗಿ ವಿಶ್ ಮಾಡಿದ್ದಾರೆ ನಿಶಾ.

Image credits: Instagram
Kannada

ಫೋಟೋಸ್ ವೈರಲ್

ನಿಶಾ ಈ ಫೋಟೊಗಳನ್ನು ಶೇರ್ ಮಾಡುತ್ತಿದ್ದಂತೆ, ಭಾರಿ ವೈರಲ್ ಆಗಿದೆ. ಜನರು ಮಾತ್ರ ವಿಕಾಶ್ ಉತ್ತಯ್ಯ ಹಾಗೂ ಚಿರಂಜಿವಿಗೆ ಹೋಲಿಕೆ ಮಾಡಿ ಪ್ರಶ್ನೆ ಕೇಳುತ್ತಿದ್ದಾರೆ.

Image credits: Instagram

‘ಪ್ರೇಮಂ’ ಮಲರ್ ಟೀಚರ್ ಆದ ಗೌರಿ ಶ್ರುತಿ… ನೋಟಕ್ಕೆ ಫ್ಯಾನ್ಸ್ ಫಿದಾ

ಅವನ ಜೊತೆ ಸಮುದ್ರ ಪಕ್ಕದಲ್ಲೇ ಮನೆ ಮಾಡುವ ಆಸೆ ನಮ್ರತಾ ಗೌಡಗೆ?

ಬೋಲ್ಡ್ ಅವತಾರದಲ್ಲಿ ಮಿಂಚಿದ 'ಮೈನಾ' ಧಾರಾವಾಹಿ ನಟಿ ವಿಜಯಲಕ್ಷ್ಮಿ

ಮತ್ತೆ ಜೊತೆಯಾಗಿ ಕಾಣಿಸಿಕೊಂಡ ‘ಕಮಲಿ’ ಜೋಡಿ… ಗುಡ್ ನ್ಯೂಸ್ ಯಾವಾಗ?