ಹೊಟ್ಟೆಗೆ ಏನ್ ತಿಂತೀರಾ ಇಷ್ಟು ಚೆನ್ನಾಗಿದ್ದೀರಾ; 'ಸವಿರುಚಿ' ನಿರೂಪಕಿ ಕಾಲೆಳೆದ ಪಡ್ಡೆ ಹುಡುಗರು

First Published | Sep 23, 2024, 1:30 PM IST

ಕಿರುತೆರೆ ಖ್ಯಾತ ನಿರೂಪಕಿ ಕಾಲೆಳೆದ ನೆಟ್ಟಿಗರು....ಸೂಮರ್ ಮಾಮ್ ಅಥವಾ ಸಂತೂರ್ ಮಾಮ್ ನೀವೇ ಅಂತಿದ್ದಾರೆ ನೋಡಿ.... 
 

ಕನ್ನಡ ಸುದ್ದಿ ವಾಹಿನಿಯಲ್ಲಿ ಆಂಕರ್ ಆಗಿ ಮಿಂಚುತ್ತಿದ್ದ ಜಾನವಿ ಆರ್‌ 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಮೂಲಕ ಕಿರುತೆರೆ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. 

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ವಿಜಯಶಾಲಿ ಆಗಿಲ್ಲವಾದರೂ ಇಲ್ಲಿಂದ ಗಿಚ್ಚಿ ಗಿಲಿಗಿಲಿ ಕಾಮಿಡಿ ರಿಯಾಲಿಟಿ ಶೋಗೆ ಅವಕಾಶ ಗಿಟ್ಟಿಸಿಕೊಂಡರು ಜಾನವಿ.

Tap to resize

ಈ ನಡುವೆ ಜಾನವಿ ಪರ್ಸನಲ್ ಲೈಫ್‌ನಲ್ಲಿ ಕೊಂಚು ಏರುಪೇರು ಕಂಡು ಬಂದಿತ್ತು. ಕೆಲವೇ ದಿನಗಳಲ್ಲಿ ತಮ್ಮ ವಿಚ್ಛೇದನ ಸುದ್ದಿಯಲ್ಲಿ ಘೋಷಣೆ ಮಾಡಿಬಿಟ್ಟರು.

ಇದಾದ ಮೇಲೆ ಜಾನವಿ ಬಿಗ್ ಬಾಸ್‌ನಲ್ಲಿ ಮಿಂಚಲಿದ್ದಾರೆ ಹಾಗೆ ಹೀಗೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಆದರೆ ಸದ್ಯ ಕಲರ್ಸ್ ಕನ್ನಡ ವಾಹಿನಿಯ ಸವಿ ರುಚಿ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. 

ನಿರೂಪಕಿಯಾಗಿರುವ ಜಾನವಿ ಸಾಕಷ್ಟು ಜನಪ್ರಿಯ ಬ್ರ್ಯಾಂಡ್‌ಗಳ ಜೊತೆ ಕೈ ಜೋಡಿಸಿ ಫೋಟೋಶೂಟ್ ಮಾಡಿಸುತ್ತಾರೆ. ಹೀಗೆ ಮಾಡಿಸಿದ ಮಾಡರ್ನ್‌ ಲುಕ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅರ್ಥ ಬೈ ರಚನಾ ಡಿಸೈನ್ ಮಾಡಿರುವ ವಸ್ತ್ರವನ್ನು ಜಾನವಿ ಧರಿಸಿದ್ದಾರೆ, ಇವರ ಲುಕ್‌ ಹೆಚ್ಚಿಸಿರುವುದು ನವ್ಯಾ ಮೇಕ್ಓವರ್. ಫೋಟೋ ಕ್ಲಿಕ್ ಮಾಡಿರುವುದು ಅಚ್ಚು.

ಈ ಲುಕ್‌ನಲ್ಲಿ ಜಾನವಿ ಸಖತ್ ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದ ಕಾರಣ 'ಹೊಟ್ಟೆಗೆ ಏನು ತಿಂತೀರಾ ಇಷ್ಟು ಚೆನ್ನಾಗಿದ್ದೀರ ಅಲ್ವಾ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Latest Videos

click me!