ವರ್ಜೀನಿಯಾ ಬೀದಿಯಲ್ಲಿ ಮಿನಿ ಡ್ರೆಸ್ ಧರಿಸಿ ಕ್ಯಾಟ್ ವಾಕ್ ಮಾಡಿದ ಪುಟ್ಟ ಗೌರಿ ಸಾನ್ಯಾ

First Published | Sep 22, 2024, 3:23 PM IST

ಪುಟ್ಟ ಗೌರಿ ಮದುವೆ ಸೀರಿಯಲ್, ಮತ್ತು ಗೌರಿ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ ನಟಿ ಸಾನ್ಯಾ ಅಯ್ಯರ್ ವರ್ಜೀನಿಯಾದ ಬೀದಿಯಲ್ಲಿ ಮಿನಿ ಡ್ರೆಸ್ ಧರಿಸಿ ಕ್ಯಾಟ್ ವಾಕ್ ಮಾಡ್ತಿದ್ದಾರೆ. 
 

ಪುಟ್ಟ ಗೌರಿಯ ಮದುವೆ ಧಾರಾವಾಹಿಯಲ್ಲಿ ಬಾಲನಟಿಯಾಗಿ ನಟಿಸಿ ಪುಟ್ಟ ಗೌರಿ ಅಂತಾನೆ ಮನೆಮಾತಾಗಿರುವ ಸಾನ್ಯಾ ಅಯ್ಯರ್ (Saanya Iyer), ಇದೀಗ ದೊಡ್ಡ ಗೌರಿಯಾಗಿ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ಟು ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. 
 

ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ ಸಾನ್ಯಾ ಅಯ್ಯರ್. ಸಿನಿಮಾದ ಹಾಡುಗಳು, ಟ್ರೇಲರ್ ಕ್ರೇಜ್ ಹುಟ್ಟಿಸಿದಷ್ಟು ಸಿನಿಮಾ ಅಷ್ಟೇನೂ ಸದ್ದು ಮಾಡಲಿಲ್ಲ. ಸಿನಿಮಾ, ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡಿರುವ ನಟಿ ಸಾನ್ಯಾ ಸದ್ಯ ವಿದೇಶದಲ್ಲಿದ್ದಾರೆ. 
 

Tap to resize

ಅಕ್ಕ ಸಮ್ಮೇಳನಕ್ಕಾಗಿ ವರ್ಜೀನಿಯಾಕ್ಕೆ (Verginia) ತೆರಳಿದ್ದ ಸಾನ್ಯಾ ಅಯ್ಯರ್, ಕಳೆದ ಕೆಲವು ದಿನಗಳಿಂದ ಅಲ್ಲಿಂದಲೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಪೋಸ್ಟ್ ಮಾಡ್ತಿದ್ದಾರೆ. ಈ ವರ್ಷದ ಗೌರಿ, ಗಣೇಶ ಹಬ್ಬಕ್ಕೂ ನಟಿ ವಿದೇಶದಲ್ಲೇ ಇದ್ದರು. 
 

ತಮ್ಮ ಬೋಲ್ಡ್ ಫೋಟೊ ಶೂಟ್ (bold photoshoot) ಮೂಲಕ ಸುದ್ದಿಯಲ್ಲಿರುವ ಸಾನ್ಯಾ ಅಯ್ಯರ್, ಇದೀಗ ವರ್ಜೀನಿಯಾದ ಬೀದಿಯಲ್ಲಿ, ಮಿನಿ ಡ್ರೆಸ್ ಧರಿಸಿ ಕ್ಯಾಟ್ ವಾಕ್ ಮಾಡಿದ್ದು, ನಟಿಯ ಸ್ಟೈಲ್, ಆಧಾ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 
 

ಮಿನಿ ಸ್ಕರ್ಟ್ ಮತ್ತು ಕ್ರಾಪ್ ಟಾಪ್ ಧರಿಸಿರುವ ಸಾನ್ಯಾ ಅಯ್ಯರ್, ಅದರ ಜೊತೆ ಗಾಗಲ್ಸ್ ಧರಿಸಿ, ಓಪನ್ ಹೇರ್ ಬಿಟ್ಕೊಂಡು, ಮಾಡೆಲ್ ರೀತಿ ವಾಕ್ ಮಾಡುವ ರೀಲ್ಸ್ ನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾನ್ಯಾ ಸ್ಟೈಲ್ ನೋಡಿ ನೆಟ್ಟಿಗರು ಫೈರ್ ಎಂದು ಕಾಮೆಂಟ್ ಮಾಡಿದ್ದಾರೆ. 
 

ಅಷ್ಟೇ ಅಲ್ಲ ಕಿಲ್ಲರ್ ಫೋಟೊ, ಬ್ಯೂಟಿಫುಲ್, ಹಾಟ್ ಎಂದೆಲ್ಲಾ ಕೆಲವರು ಕಾಮೆಂಟ್ ಮಾಡಿದ್ರೆ ಇನ್ನೂ ಕೆಲವರು ಸಾನ್ಯಾ ಮಿನಿ ಡ್ರೆಸ್ ಧರಿಸಿರೋ ಬಗ್ಗೆ ಕಾಮೆಂಟ್ ಮಾಡಿದ್ದು, ಬರ್ತಾ ಬರ್ತಾ ಈಕೆಯ ಡ್ರೆಸ್ ಸಣ್ಣದಾಗ್ತಾ ಬರ್ತಿದೆ ಅಂದಿದ್ದಾರೆ. 
 

ಸಾನ್ಯಾ ಅಯ್ಯರ್ ಮಾಡರ್ನ್ ಜೊತೆ ಜೊತೆಗೆ ಟ್ರೆಡಿಶನಲ್ ಬೆಡಗಿಯೂ ಹೌದು, ಜೊತೆಗೆ ಇವರು ಆಧ್ಯಾತ್ಮಿಕತೆ, ಧ್ಯಾನಕ್ಕೂ ತುಂಬಾನೆ ಇಂಫಾರ್ಟನ್ಸ್ ಕೊಡ್ತಾರೆ. ತಮ್ಮ ಫ್ಯಾಮಿಲಿ ಜೊತೆ ಹೆಚ್ಚಾಗಿ ದೇಶ, ವಿದೇಶ ಸುತ್ತುವ ಸಾನ್ಯಾ ಅಯ್ಯರ್ ಸದ್ಯ ವರ್ಜೀನಿಯಾದಲ್ಲಿ ಎಂಜಾಯ್ ಮಾಡ್ತಿದ್ದಾರೆ. 
 

Latest Videos

click me!