ಪುಟ್ಟ ಲಕ್ಷ್ಮಿ ಬರ ಮಾಡಿಕೊಂಡ ಗಿಚ್ಚಿ ಗಿಲಿಗಿಲಿ ಧನರಾಜ್‌ ಆಚಾರ್; ವಿಶೇಷ ಉಂಟಾ ಎಂದವರಿಗೆ ಸಿಹಿ ಊಟ!

First Published | Sep 24, 2024, 12:51 PM IST

ಹೆಣ್ಣು ಮಗುವಿಗೆ ಜನ್ಮ ನೀಡಿದ ಧನರಾಜ್ ಮತ್ತು ಪ್ರಜ್ಞ. ವಿಶೇಷ ಉಂಟಾ ಎಂದು ಪದೇ ಪದೇ ಕೇಳುತ್ತಿದ್ದವರಿಗೆ ಮನೆ ಕೆಲಸ ಮಾಡಲು ಕರೆಸಿದ ನಟ...

ಇಡೀ ಫ್ಯಾಮಿಲಿಯನ್ನು ಒಟ್ಟಿಗೆ ಸೇರಿಸಿಕೊಂಡು ಕಾಮಿಡಿ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಮನೋರಂಜನೆ ನೀಡುತ್ತಿದ್ದ ಧನರಾಜ್ ಆಚಾರ್ಯ ಮತ್ತು ಪತ್ನಿ ಪ್ರಜ್ಞ ನಾಲ್ಕು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸೆಪ್ಟೆಂಬರ್ 20ರಂದು ಹೆಣ್ಣು ಮಗುವನ್ನು ಬರ ಮಾಡಿಕೊಂಡ ಧನರಾಜ್ ಮತ್ತು ಪತ್ನಿ ಇನ್‌ಸ್ಟಾಗ್ರಾಂನಲ್ಲಿ ವಿಶೇಷ ವಿಡಿಯೋವೊಂದನ್ನು ಅಪ್ಲೋಡ್ ಮಾಡುವ ಮೂಲಕ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

Tap to resize

ಕಾರಿನಿಂದ ಆಪ್ತರೊಬ್ಬರು ಇಳಿದು ಬರುತ್ತಾರೆ...ಮನೆ ಹೊರಗಡೆ ಒಳಗಡೆ ಸಾಕಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ ಅದನ್ನು ಗಮನಿಸಿ ಆ ವ್ಯಕ್ತಿ ಧನರಾಜ್‌ ಬಳಿ ಮಾತನಾಡಲು ಹೋಗುತ್ತಾರೆ. ಕಂಗ್ರಾಟ್ಸ್‌ ಹೆಣ್ಣು ಮಗು ಹುಟ್ಟಿದೆ ಎನ್ನುತ್ತಾರೆ.

ಖುಷಿಯಿಂದ ಶೇಕ್‌ಹ್ಯಾಂಡ್‌ ಮಾಡಿದ ಧನರಾಜ್‌ರನ್ನು ಮರು ಪ್ರಶ್ನೆ ಮಾಡುತ್ತಾರೆ. ಮಗಳು ಹುಟ್ಟಿದ್ದಾಳೆ ಅಂತ ಇಷ್ಟೋಂದು ಕೆಲಸದವರನ್ನು ಕರೆಸಿರುವೆ ಯಾಕೆ ಎನ್ನುತ್ತಾರೆ. ಆಗ ಧನರಾಜ್' ಇಲ್ಲ ಇಲ್ಲ...ನಮ್ಮನ್ನು ಪದೇ ಪದೇ ವಿಶೇಷ ಉಂಟಾ ಎಂದು ಪ್ರಶ್ನೆ ಮಾಡುತ್ತಿದ್ದವರಿಗೆ ವಿಶೇಷ ಕೆಲಸವನ್ನು ಕರೆದು ಕೊಟ್ಟಿದ್ದೀನಿ' ಎನ್ನುತ್ತಾರೆ.

ಇನ್ನು ಮುಂದೆ ಯಾರನ್ನು ವಿಶೇಷ ಉಂಟಾ ಎಂದು ಕೇಳಬಾರದು ಅಂತ ಹಾಸ್ಯ ಮಾಡಿದ್ದಾರೆ. 'ಮುದ್ದು ಮಗಳೇ ಸ್ವಾಗತ...ನಿಮ್ಮ ಆಶೀರ್ವಾದ ನನ್ನ ಮಗಳ ಮೇಲಿರಲಿ' ಎಂದು ಧನರಾಜ್ ಬರೆದುಕೊಂಡಿದ್ದಾರೆ.

ಅದೃಷ್ಟವಂತರಿಗೆ ಮಾತ್ರ ಹೆಣ್ಣು ಮಗು ಹುಟ್ಟುವುದು,ನಿಮಗೆ ಹೆಣ್ಣು ಮಗಳು ಹುಟ್ಟುವುದು ಎಂದು ನಾನು ಮೊದಲೇ ಕಾಮೆಂಟ್ ಮಾಡಿದ್ದೆ, ವಿಶೇಷ ಊಟ ಹಾಕಿಸಬೇಕು ನೋಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Latest Videos

click me!