ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗೀತಾ; ಫೋಟೋ ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್‌ ಫುಲ್ ಶಾಕ್!

First Published | Aug 16, 2023, 10:48 AM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿ ಭವ್ಯಾ ಗೌಡ ಮದುವೆ ಫೋಟೋಗಳು. ಸ್ವತಃ ವಿಜಯ್ ಫ್ಯಾನ್ಸ್ ಫುಲ್ ಶಾಕ್ ಅಗಿದ್ದಾರೆ.....
 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿ ದಿನಕ್ಕೊಂದು ಟ್ವಿಸ್ಟ್‌ ಪಡೆದು ವೀಕ್ಷಕರ ಗಮನ ಸೆಳೆಯುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಗೀತಾ ಉರ್ಫ್‌ ಭವ್ಯಾ ಗೌಡ ಮಧುಮಗಳಂತೆ ಅಲಂಕಾರ ಮಾಡಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. 

Tap to resize

ನಿಜಕ್ಕೂ ಭವ್ಯಾ ಸೈಲೆಂಟ್ ಅಗಿ ಮದುವೆ ಮಾಡಿಕೊಂಡಿದ್ದಾರೆ ಹುಡುಗ ಯಾರು ಎಂದು ಎಲ್ಲೆಡೆ ಹುಡುಟಾಕ ಶುರುವಾಗಿದೆ. ಆದರೆ ಇಲ್ಲಿ ಒಂದು ಟ್ವಿಸ್ಟ್‌ ಇದೆ.

ಕಳೆದ ಸಂಚಿಕೆಯಲ್ಲಿ ವಿಜಯ್ ಮತ್ತು ಗೀತಾಗೆ ಮರು ಮದುವೆ ಮಾಡಿಸಿದ್ದರು. ಆಗ ಗೀತಾ ಪಾತ್ರಕ್ಕೆ ಮಧುಮಗಳಂತೆ ಅಲಂಕಾರ ಮಾಡಿಕೊಂಡಾಗ ಕ್ಲಿಕ್ ಮಾಡಿದ ಫೋಟೋಗಳು. 

ಗೀತಾ ವಿಜಿ ಮದುವೆ ಎಂದು ಸ್ಪೆಷಲ್ ಸಂಚಿಕೆ ಮಾಡಲಾಗಿತ್ತು. ಪಕ್ಕಾ ಐಷಾರಾಮಿ ಕುಟುಂಬಗಳು ಮಾಡುವ ಮದುವೆ ರೀತಿನೇ ಇಡೀ ವಾರದ ಸಂಚಿಕೆ ಮಾಡಿದ್ದಾರೆ. 

ಗೀತಾ ಮತ್ತು ವಿಜಿ ಆನ್‌ಸ್ಕ್ರೀನ್ ಮಾತ್ರವಲ್ಲ ಆಫ್‌ ಸ್ಕ್ರೀನ್‌ಕೂಡ ಸೂಪರ್ ಹಿಟ್ ಜೋಡಿ. ಇನ್‌ಸ್ಟಾಗ್ರಾಂ ರೀಲ್ಸ್ ಮತ್ತು ವಿಡಿಯೋಗಳು ಮಾಡುತ್ತಾರೆ. 

 ಈ ಹಿಂದೆ ಭವ್ಯಾ ಗೌಡ ಮತ್ತು ವಿಜಯ್ ನಡುವೆ ಪ್ರೀತಿ ಇದೆ ಎಂದು ಸುದ್ದಿಯಾಗಿತ್ತು. ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದರೂ ನೆಟ್ಟಿಗರು ಒಪ್ಪಿರಲಿಲ್ಲ. 
 

ಗೀತಾ ಪಾತ್ರಕ್ಕೆ ಭವ್ಯಾ ಸಖತ್ ಸಿಂಪಲ್ ಆಗಿ ಅಲಂಕಾರ ಮಾಡಿಕೊಳ್ಳುತ್ತಾರೆ. ಆದರೆ ನಿಜ ನೀಜವನದಲ್ಲಿ ಸಖತ್ ಸ್ಟೈಲಿಷ್ ಆಗಿ ಮಿಂಚುತ್ತಾರೆ. 

Latest Videos

click me!