ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ ಧಾರಾವಾಹಿಯಲ್ಲಿ ಅತ್ತೆ ಮತ್ತು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಶರ್ಮಿತಾ ಗೌಡ.
ಶರ್ಮಿತಾ ಗೌಡ ವಿಲನ್ ಆಗಿದ್ದರೂ ನಾಯಕಿಗಿಂತ ತುಂಬಾ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರ ಫ್ಯಾಷನ್ ಸೆನ್ಸ್ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಲೇ ಇರುತ್ತಾರೆ.
ಶರ್ಮಿತಾ ಗೌಡ ಮೂಲಕ ಮಂಗಳೂರಿನವರು ಹಲವು ವರ್ಷಗಳಿಂದ ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ನಟಿಸುತ್ತಿದ್ದಾರೆ. ಬಣ್ಣದ ಜರ್ನಿ ಹೊರತುಪಡಿಸಿ ಶರ್ಮಿತಾ ಬೇರೆ ಕೆಲಸನೂ ಮಾಡುತ್ತಾರೆ.
ಶರ್ಮಿತಾ ಅವರು ಫಿಟ್ನೆಸ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದು ನ್ಯೂಟ್ರಿಷನಿಸ್ಟ್ ಕೂಡ. ಹೀಗಾಗಿ ಅವರು ಇಷ್ಟೊಂದು ಫಿಟ್ ಆಂಡ್ ಫೈನ್ ಆಗಿರುವುದು.
ಅಮ್ಲೆಟ್, ಸೀತಾಯಣ (Seetharam), ಫ್ಯಾಮಿಲಿ ಪ್ಯಾಕ್ (Family Pack) ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ.
ಆನ್ ಸ್ಕ್ರೀನ್ ಮತ್ತು ಆಫ್‌ಸ್ಕ್ರೀನ್ ಶರ್ಮಿತಾ ಅವರದ್ದು ಬೇರೆ ವ್ಯಕ್ತಿತ್ವ. ಶರ್ಮಿತಾ ಅವರು ಜಗಳವಾಡುತ್ತಾರೆ ಸಿಟ್ಟು ಬೇಸರದಿಂದ ಫುಲ್ ದೂರವಂತೆ.
ಚಿತ್ರೀಕರಣ ಸಮಯದಲ್ಲಿ ಹೊಡೆಯುವ ಅಥವಾ ವ್ಯಂಗ್ಯ ಮಾಡುವ ಪ್ರಸಂಗ ಬಂದಾಗ ಭಾನುಮತಿಯಾಗಿ ನಟಿಸಿ ಆನಂತರ ಶರ್ಮಿತಾ ಆಗಿ ಕ್ಷಮೆ ಕೇಳುತ್ತಾರಂತೆ.
ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಶರ್ಮಿತಾ ತುಂಬಾನೇ ಮಾಡ್ರನ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
Suvarna News