ರಾಮ್ ಕಪೂರ್ ಜೊತೆಗಿನ ರೋಮ್ಯಾನ್ಸ್‌ನಲ್ಲಿ ಎಲ್ಲಾ ಮಿತಿ ದಾಟಿದ ನಟಿ ಸಾಕ್ಷಿ ತನ್ವರ್!

Published : Jan 12, 2022, 06:39 PM ISTUpdated : Jan 12, 2022, 06:41 PM IST

ಕಿರುತೆರೆಯ ಫೇಮಸ್‌ ಹಿಂದಿ ಧಾರಾವಾಹಿ 'ಬಡೆ ಅಚ್ಚೆ ಲಗ್ತೆ ಹೇ' (Bade Acche Lagte Hain) ನಾಯಕಿ ನಟಿ ಸಾಕ್ಷಿ ತನ್ವಾರ್ (Sakshi Tanwar) 49 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಜನವರಿ 12, 1973 ರಂದು ರಾಜಸ್ಥಾನದ ಅಲ್ವಾರ್‌ನಲ್ಲಿ ಜನಿಸಿದ ಸಾಕ್ಷಿ ಈ ಧಾರಾವಾಹಿಯಲ್ಲಿ ರಾಮ್ ಕಪೂರ್ (Ram Kapoor) ಅವರ ಗೆಳತಿ ಮತ್ತು ಹೆಂಡತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸುಮಾರು 3 ವರ್ಷಗಳ ಕಾಲ ನಡೆದ ಈ ಶೋನಲ್ಲಿ ರಾಮ್ ಕಪೂರ್ ಜೊತೆ ಸಾಕ್ಷಿ ತನ್ವರ್ ಅವರ ಜೋಡಿ ಸೂಪರ್‌ ಹಿಟ್‌ ಆಗಿತ್ತು. ಅಷ್ಟೇ ಅಲ್ಲ  ರಾಮ್ ಕಪೂರ್ ಮತ್ತು ಸಾಕ್ಷಿ ತನ್ವರ್ ನಡುವೆ ಚಿತ್ರೀಕರಿಸಲಾದ ಲವ್ ಮೇಕಿಂಗ್ ದೃಶ್ಯ ಕೂಡ ಸಾಕಷ್ಟು ಚರ್ಚೆಯನ್ನು ಸೃಷ್ಟಿಸಿತ್ತು. ಟಿವಿ ಅಲ್ಲದೆ ಸಾಕ್ಷಿ ಬಾಲಿವುಡ್ ಚಿತ್ರಗಳಲ್ಲೂ ಕೆಲಸ ಮಾಡಿರುವ ಸಾಕ್ಷಿ ಸನ್ನಿ ಡಿಯೋಲ್ ಜೊತೆ 'ಮೊಹಲ್ಲಾ ಅಸ್ಸಿ' ಚಿತ್ರದಲ್ಲಿ ಅವರ ಪತ್ನಿ ಪಾತ್ರವನ್ನು ನಿರ್ವಹಿಸಿದ್ದಾರೆ.  

PREV
17
ರಾಮ್ ಕಪೂರ್ ಜೊತೆಗಿನ ರೋಮ್ಯಾನ್ಸ್‌ನಲ್ಲಿ  ಎಲ್ಲಾ ಮಿತಿ ದಾಟಿದ ನಟಿ ಸಾಕ್ಷಿ ತನ್ವರ್!

ಧಾರಾವಾಹಿಯಲ್ಲಿ ಬೋಲ್ಡ್ ದೃಶ್ಯಗಳನ್ನು ನೀಡಿ ವೈರಲ್‌ ಆದ ಶುರುವಿನಲ್ಲಿ  ಸಾಕ್ಷಿ ತನ್ವರ್ ಮೊದಲು ಮೌನ ವಹಿಸಿದ್ದರು. ಆದರೆ ನಂತರ ಅವರು ಈ ಬಗ್ಗೆ ಮಾತನಾಡಿದರು. ಈ ದೃಶ್ಯ ಬಗ್ಗೆ ಅನಾವಶ್ಯಕವಾಗಿ ಇಷ್ಟೆಲ್ಲಾ ವಿವಾದ ಸೃಷ್ಟಿಸಲಾಗಿದೆ ಎಂದು ಸಾಕ್ಷಿ ಹೇಳಿದ್ದರು. ಆದರೂ ಈ ದೃಶ್ಯವನ್ನು ಮಾಡುವ ಮೊದಲು ಅವರು ತಮ್ಮ ಪೋಷಕರಿಗೆ ಸಾಕಷ್ಟು ಮನವರಿಕೆ ಮಾಡಬೇಕಾಗಿತ್ತು. ಅವರು ಮೊದಲು ಅದಕ್ಕೆ ಸಿದ್ಧರಿರಲಿಲ್ಲ ಎಂದು ಅವರು ಹೇಳಿದ್ದಾರೆ.

27

ರಾಮ್ ಕಪೂರ್ ಮತ್ತು ಸಾಕ್ಷಿ ತನ್ವರ್ ಅವರ ಈ ದೃಶ್ಯದಿಂದಾಗಿ, ಕಾರ್ಯಕ್ರಮದ ಟಿಆರ್‌ಪಿಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇಬ್ಬರ ನಡುವೆ ಸುಮಾರು 17 ನಿಮಿಷದ ಇಂಟಿಮೇಟ್‌ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಇದರಲ್ಲಿ ರಾಮ್ ಕಪೂರ್, ಸಾಕ್ಷಿ ತನ್ವಾರ್ ಲಿಪ್ಲಾಕ್ ಮಾಡಿದರು.

37

ರಾಮ್ ಕಪೂರ್ ಮತ್ತು ಸಾಕ್ಷಿ ತನ್ವರ್ ಅವರ ಈ ರೋಮ್ಯಾಂಟಿಕ್ ದೃಶ್ಯವು ಪರದೆಯ ಮೇಲೆ ಭಾರಿ ಸದ್ದು ಮಾಡಿತು. ಈ ಸೀನ್ ಇಂದಿಗೂ ಚರ್ಚೆಯಾಗುತ್ತಿದೆ. ಟಿವಿಯಲ್ಲಿ ಇಷ್ಟು ಬೋಲ್ಡ್ ನೆಸ್ ಈ ಹಿಂದೆ ಯಾವ ನಟ ನಟಿಯರ ನಡುವೆಯೂ ತೋರಿಸಿರಲಿಲ್ಲ

47

ಸಾಕ್ಷಿ ತನ್ವರ್ ಮತ್ತು ರಾಮ್ ಕಪೂರ್ ನಡುವೆ ಚಿತ್ರೀಕರಿಸಲಾದ ಈ ಆತ್ಮೀಯ ದೃಶ್ಯವು ಮಾರ್ಚ್ 12, 2012 ರಂದು ಪ್ರಸಾರವಾಯಿತು. ಇದಾದ ನಂತರ ಮರುದಿನ ಮಾಧ್ಯಮಗಳಲ್ಲಿ ರಾಮ್ ಮತ್ತು ಸಾಕ್ಷಿ ಮಾತ್ರ ಚರ್ಚೆಯಾದರು. ಈ ದೃಶ್ಯದಿಂದಾಗಿ ಕಾರ್ಯಕ್ರಮದ ರೇಟಿಂಗ್‌ಗಳಲ್ಲಿ ಭಾರಿ ಜಿಗಿತ ಕಂಡುಬಂದಿದೆ. ಈ ಇಬ್ಬರ ಜೋಡಿಯನ್ನು ಟಿವಿಯ ಐಕಾನಿಕ್ ಜೋಡಿ ಎಂದು ಕರೆಯಲಾಗುತ್ತದೆ 


 

57

ರಾಮ್ ಕಪೂರ್ ಮತ್ತು ಸಾಕ್ಷಿ ತನ್ವಾರ್ ಅವರ ಪರದೆ ಮೇಲಿನ ಈ ರೊಮ್ಯಾಂಟಿಕ್ ದೃಶ್ಯ ಸಿಕ್ಕಾಪಟ್ಟೆ ಸುದ್ದಿಯಾಯಿತು. ಇಬ್ಬರ ನಡುವೆಯ ಪ್ಯಾಶನೇಟ್‌ ಕಿಸ್ಸಿಂಗ್‌ನ ಚರ್ಚೆ ಹಲವು ವರ್ಷಗಳ ಕಾಲ ಮುಂದುವರೆಯಿತು. ಟಿವಿಯಲ್ಲಿ ಅಷ್ಟೊಂದು ಬೋಲ್ಡ್‌ನೆಸ್‌ ಈ ಹಿಂದೆ ಯಾವುದೇ ನಟ ಮತ್ತು ನಟಿಯರ ನಡುವೆಯೂ ತೋರಿಸಿರಲಿಲ್ಲ.

67

ಈ ದೃಶ್ಯವನ್ನು ಕೆಲವರು ಟೀಕಿಸಿದರು. ಗೇಲಿ ಮಾಡಿದರು. 'ಕಾರ್ಯಕ್ರಮದಲ್ಲಿ ರಾಮ್ ಕಪೂರ್ ಮತ್ತು ಸಾಕ್ಷಿ ತನ್ವರ್ ಲೈಂಗಿಕ ಸಂಬಂಧ ಹೊಂದಿದ್ದರು. ಡರ್ಟಿ ಪಿಕ್ಚರ್‌ ಹಿಟ್‌ ಆದ ಕಾರಣಕ್ಕೆ ಧಾರಾವಾಹಿಯನ್ನು ಕೂಡ ಡರ್ಟಿ ಮಾಡುತ್ತೀರಾ ಎಂದು ಏಕ್ತಾರನ್ನು ಕೇಳಿ ಎಂದು ಎಂಟಿವಿ ಇಂಡಿಯಾ ಟ್ವಿಟರ್‌ನಲ್ಲಿ ಬರೆದಿತ್ತು.

77

49 ವರ್ಷದ ಸಾಕ್ಷಿ ತನ್ವರ್ ಇನ್ನೂ ಮದುವೆಯಾಗಿಲ್ಲ. ಆದರೆ, 2015ರಲ್ಲಿ ಅವರು ಉದ್ಯಮಿಯೊಬ್ಬರನ್ನು ರಹಸ್ಯವಾಗಿ ಮದುವೆಯಾಗಿದ್ದರು ಎಂದು ವರದಿಯಾಗಿದೆ. ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ಇಲ್ಲಿಯವರೆಗೆ ನಾನು ಮದುವೆಯಾಗಬಹುದಾದ ಯಾರೂ ನನಗೆ ಸಿಕ್ಕಿಲ್ಲ ಎಂದು  ನಂತರ ಸಾಕ್ಷಿ ಹೇಳಿದ್ದರು. ಸಾಕ್ಷಿ ತನ್ವಾರ್ ಮದುವೆಯಾಗದೆ ದಿತ್ಯಾ ಎಂಬ ಮಗಳನ್ನು ದತ್ತು ಪಡೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories