ಕದ್ದು ಮುಚ್ಚಿ ಪ್ರೀತಿ ಮಾಡೋಕೆ ಇಷ್ಟವಿಲ್ಲ: ಸ್ಪಷ್ಟನೆ ಕೊಟ್ಟ 'ಗೀತಾ' ಭವ್ಯಾ ಗೌಡ

First Published | Sep 19, 2023, 10:55 AM IST

ಗೀತಾ- ವಿಜಿ ರಿಯಲ್‌ ಲೈಫ್‌ನಲ್ಲೂ ಪ್ರೀತಿಸುತ್ತಿದ್ದಾರೆ? ಹರಿದಾಡುತ್ತಿರುವ ಗಾಸಿಪ್‌ಗೆ ಸ್ಪಷ್ಟನೆ ಕೊಟ್ಟ ಭವ್ಯಾ.... 
 

ಕಲರ್ಸ್‌ ಕನ್ನಡ ಜನಪ್ರಿಯಾ ಸೀರಿಯಲ್ ಗೀತಾ. ಭವ್ಯಾ ಗೌಡ ಮತ್ತು ಧನುಷ್ ...ಗೀತಾ ಮತ್ತು ವಿಜಯ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಆಫ್‌ ಸ್ಕ್ರೀನ್‌ನಲ್ಲಿ ಸೂಪರ್ ಕ್ಯೂಟ್ ಆಗಿ ಕಾಣಿಸುವ ಈ ಜೋಡಿ ರಿಯಲ್‌ ಲೈಫ್‌ನಲ್ಲೂ ಡೇಟಿಂಗ್ ಮತ್ತು ಪ್ರೀತಿ ಆಂತ ಓಡಾಡುತ್ತಿದ್ದಾರೆ ಅನ್ನೋ ಸುದ್ದಿ ಆಗಾಗ ಕೇಳಿ ಬರುತ್ತಿತ್ತು. 

Tap to resize

ಈ ಗಾಸಿಪ್‌ನಿಂದಾಗಿ ಗೀತಾ ಎಲ್ಲೇ ಹೋದರೂ ನಾವಿಬ್ಬರೂ ಜಸ್ಟ್‌ ಫ್ರೆಂಡ್ಸ್‌ ಎಂದು ಪದೇ ಪದೇ ಸ್ಪಷ್ಟನೆ ಕೊಟ್ಟರೂ ಯಾರೂ ನಂಬುತ್ತಿಲ್ಲ.

'ನಾನು ಪಾರದರ್ಶಕವಾಗಿರಬೇಕು, ಓಪನ್ ಬುಕ್ ಆಗಿರಬೇಕು ಎಂಬುದು ನನ್ನ ಇಚ್ಛೆ. ಕದ್ದು ಮುಚ್ಚಿ ಪ್ರೀತಿ ಮಾಡೋದು ನನಗೆ ಇಷ್ಟವಿಲ್ಲ' ಎಂದು ಭವ್ಯಾ ಹೇಳಿದ್ದಾರೆ.

'ನಾನು ಡೇಟಿಂಗ್ ಮಾಡ್ತಿದ್ದೀನಿ ಅಂದ್ರೆ ಇವರನ್ನೇ ಡೇಟಿಂಗ್ ಮಾಡುತ್ತಿದ್ದೀನಿ ಅಂತ ಬಾಯಿ ಬಿಟ್ಟು ಹೇಳುತ್ತೀನಿ' ಎಂದು ಭವ್ಯಾ ಹೇಳಿದ್ದಾರೆ.

'ನಾನು ಧನುಷ್ ಡೇಟಿಂಗ್ ಮಾಡುತ್ತಿಲ್ಲ. ನಾವು ಜಸ್ಟ್‌ ಫ್ರೆಂಡ್ಸ್ ಅಷ್ಟೇ. ಇದು 102% ನಿಜ ಎಂದು ಗೀತಾ ಸ್ಪಷ್ಟನೆ ಕೊಟ್ಟಿದ್ದಾರೆ.

'ಕೆಲವು ವರ್ಷಗಳ ನಂತರ ನಾವು ಬೇರೆ ಮದುವೆಯಾದರೆ ನಿಮಗೆ ಅಥವಾ ಜನರಿಗೆ ಕ್ಲಾರಿಟಿ ಸಿಗಲಿದೆ' ಎಂದು ಗೀತಾ ಸ್ಪಷ್ಟನೆ ಕೊಟ್ಟಿರುವುದಾಗಿ ಖಾಸಗಿ ಮಾಧ್ಯಮ ಸುದ್ದಿ ಮಾಡಿದೆ.

Latest Videos

click me!