ಭರ್ಜರಿ ಬ್ಯಾಚುಲರ್ಸ್‌ ಗೋಪಿಕೆಯರ ನಡುವೆ ಕೃಷ್ಣಲೋಲನಾದ ಕುರಿಗಾಹಿ ಹನುಮಂತ

First Published | Sep 17, 2023, 7:17 PM IST

ಬೆಂಗಳೂರು (ಸೆ.12): ಕುರಿಗಾಹಿ ಸಿಂಗರ್ ಹನುಮಂತ ಭರ್ಜರಿ ಬ್ಯಾಚುಲರ್ಸ್‌ (Bharjari Bachulars) ರಿಯಾಲಿಟಿ ಶೋ ಮೂಲಕ ತನ್ನ ಜೀವನದ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಈಗ ಹನುಮಂತನ (Singer Hanumantha) ಲುಕ್ ಫುಲ್ ಚೇಂಜ್‌ ಆಗಿದೆ. ಲುಂಗಿ ಉಟ್ಟು ಮೈಕ್ ಹಿಡಿದು ಹಾಡ್ತಿದ್ದ ಹನುಮಂತ ಈಗ ಸೂಟು ಬೂಟು ತೊಟ್ಟು ವರಸೆ ಬದಲಾಯಿಸಿಬಿಟ್ಟಿದ್ದಾರೆ. ಮಾಡೆಲ್ ಜೊತೆ ಸ್ಟೈಲಿಷ್ ಹನುಮಂತು ರ್ಯಾಂಪ್ ವಾಕ್ (Ramp walk Hanumantha) ಮಾಡಿದ್ದಾರೆ. ಹುಡುಗೀರ ಗುಂಪಿನಲ್ಲಿ ಕಾಣಿಸಿಕೊಂಡ ಹನುಮಂತ, ಕೃಷ್ಣಲೋಲನಾದನೇ? ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ಕುರಿಗಾಹಿ ಸಿಂಗರ್ ಹನುಮಂತ ಭರ್ಜರಿ ಬ್ಯಾಚುಲರ್ಸ್‌ (Bharjari Bachulars) ರಿಯಾಲಿಟಿ ಶೋ ಮೂಲಕ ತನ್ನ ಜೀವನದ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. 

ಹುಡುಗೀರ ಗುಂಪಿನಲ್ಲಿ ಕಾಣಿಸಿಕೊಂಡು ಸನ್ಯಾಸಿ ಹನುಮಂತ, ಕೃಷ್ಣಲೋಲನಾದನೇ? ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

Tap to resize

ಈಗ ಹನುಮಂತನ (Singer Hanumantha) ಲುಕ್ ಫುಲ್ ಚೇಂಜ್‌ ಆಗಿದೆ. ಲುಂಗಿ ಉಟ್ಟು ಮೈಕ್ ಹಿಡಿದು ಹಾಡ್ತಿದ್ದ ಹನುಮಂತ ಈಗ ಸೂಟು ಬೂಟು ತೊಟ್ಟು ವರಸೆ ಬದಲಾಯಿಸಿಬಿಟ್ಟಿದ್ದಾರೆ.

 ಭರ್ಜರಿ ಬ್ಯಾಚುಲರ್ಸ್‌ ರಿಯಾಲಿಟಿ ಶೋನಲ್ಲಿ ಮಾಡೆಲ್‌ಗಳ ಜೊತೆಗೆ ಸ್ಟೈಲಿಷ್ ಹನುಮಂತು ರ್ಯಾಂಪ್ ವಾಕ್ (Ramp walk Hanumantha) ಮಾಡಿದ್ದಾರೆ.

ರಾಮಾಚಾರಿ ಧಾರವಾಹಿ: 'ಚಾರು'ಗೆ ಅಳುವ ಪಾತ್ರ ಬೇಡ, ಸರಪಟಾಕಿ ಪಾತ್ರ ಕೊಡಿ! ಅಭಿಮಾನಿಗಳ ಡೈರೆಕ್ಟ್‌ ಹಿಟ್

ಹಾವೇರಿ ಜಿಲ್ಲೆಯ ಕುರಿಗಾಹಿ ಹನುಮಂತ ತನ್ನ ಗಾಯನದಿಂದಲೇ ಸರಿಗಮಪ ರಿಯಾಲಿಟಿ ಶೋ ಮೂಲಕ ನಾಡಿಗೆ ಪರಿಚಿತವಾದವನು. ಯಾವುದೇ ಸ್ಟೇಜ್‌ ಹಾಗೂ ಐಷಾರಾಮಿ ಮಾಲ್‌ಗೆ ಹೋದರೂ ಲುಂಗಿಯನ್ನು ಮಾತ್ರ ಬಿಡದ ಹಳ್ಳಿ ಹೈದನ ಲುಕ್‌, ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಭರ್ಜರಿಯಾಗಿಯೇ ಬದಲಾಗಿದೆ.

ಇನ್ನು ಹನುಮಂತನ ಸಾಧನೆ ಬಗ್ಗೆ ಹೇಳಲೆ ಬೇಕು ಈತ ಮೂಮೂಲಿ ಹುಡ್ಗ ಅಲ್ಲವೇ ಅಲ್ಲ. ಐದನೇ ಕ್ಲಾಸ್ ಓದ್ಕೊಂಡು ಗುರುವಿಲ್ಲದೇ ಸಂಗೀತ ಕಲಿತು ಸರಿಗಮಪ ವೇದಿಕೆ ಏರಿದ. ಹಾವೇರಿ ಜಿಲ್ಲೆ ಸವಣೂರು ತಾಲೂಕು ಚಿಲ್ಲೂರ ಬಡ್ನಿ ತಾಂಡಾದ ಕುರಿಗಾಹಿ ಹನುಮಂತ.

ಹನುಮಂತನದ್ದು ಒಂಥರಾ ಡಿಫರೆಂಟ್ ವ್ಯಕ್ತಿತ್ವ. ಹೀಗಾಗೆ ಈತ ಎಲ್ಲರಿಗಿಂತ ವಿಭಿನ್ನ ಅನ್ನಿಸೋದು. ತಾಂಡಾದಿಂದ ಬಂದು ಪಟ್ಟಣ ಸುತ್ತಾಡಿದ್ರೂ ಈತನ ನಡೆ ನುಡಿ ಬದಲಾಗಿಲ್ಲ. ಆದರೆ ಈಗ ಹುಡ್ಗಿಗಾಗಿ ಕೊನೆಗೂ ಬದಲಾದ ಹನುಮಂತನ ನೋಡಿ  ಅವರ ಅಮ್ಮನೇ ಕಂಗಾಲಾಗಿದ್ದಾರೆ. 

ಸರಿಗಮಪ ಸೀಸನ್ 15ರ ಫಸ್ಟ್ ರನ್ನರ್ ಅಪ್ ಆಗಿರುವ ಹನುಮಂತ, ನೇರ ಮುಗ್ದ  ಮಾತು ಬಣ್ಣವಿಲ್ಲದ ಬದುಕಿನಿಂದ ಎಲ್ಲರಿಗಿಂತ ಭಿನ್ನ ಸಾಲಿನಲ್ಲಿ ನಿಲ್ತಾನೆ, ವಿಭಿನ್ನ ಕಂಠದಿಂದಲೇ ಖ್ಯಾತಿಗಳಿಸಿದ ಹಳ್ಳಿ ಹೈದ ಮತ್ತೀಗ ಹೊಸ ರೂಪದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. 

ಭರ್ಜರಿ ಬ್ಯಾಚುಲರ್ಸ್‌ ಮೂಲಕ ಹನುಮಂತನ ಬಾಳಲ್ಲಿ ಮಾಡೆಲ್/ನಟಿ ಆಸಿಯಾ ಬೇಗಂ ಎಂಟ್ರಿಯಾಗಿದ್ದಾಳೆ. ಟಾಸ್ಕ್ ಪ್ರಕಾರ ಹನುಮಂತನನ್ನ ಮಾಡರ್ನ್ ಹುಡುಗನನ್ನಾಗಿ ಮಾಡಬೇಕು. ಈ ಟಾಸ್ಕ್‌ನಲ್ಲಿ ಆಸಿಯಾ ಯಶಸ್ವಿಯಾಗಿದ್ದಾರೆ ಎಂಬಂತೆ ಕಂಡುಬರುತ್ತಿದೆ.

'ಭರ್ಜರಿ ಬ್ಯಾಚುಲರ್ಸ್' ಕಾರ್ಯಕ್ರಮಕ್ಕೆ ಕುರಿಗಾಹಿ ಹನುಮಂತ ಓರ್ವ ಸ್ಪರ್ಧಿ, ಎಂದಿನಂತೆ ಮುಗ್ಧತೆಯಿಂದ ಹನುಮಂತ ಎಂಟ್ರಿ ಕೊಟ್ಟಿದ್ದಾನೆ. 10 ಹುಡುಗರಿಗೆ 10 ಹುಡುಗಿಯರನ್ನ ಜೋಡಿ ಮಾಡಲಾಗಿದೆ. ಎಂದಿನಂತೆ ಲುಂಗಿ ಶರ್ಟ್‌ನಲ್ಲೇ ಎಂಟ್ರಿ ಕೊಟ್ಟ ಹನುಮ ಜಂಟಿಯಾದ ಬಳಿಕ ಹಳೆಯ ಜಂಜಾಟಕ್ಕೆ ಜೂಟ್ ಅಂದಿದ್ದಾನೆ. 

Latest Videos

click me!