ಜೀವನದ ಕಹಿ ಸತ್ಯ ಬಿಚ್ಚಿಟ್ಟ ಭೂಮಿಗೆ ಬಂದ ಭಗವಂತ ಸೀರಿಯಲ್ ನಟಿ ಕೃತಿಕಾ!

Published : Sep 18, 2023, 03:42 PM IST

ಭೂಮಿಗೆ ಬಂದ ಭಗವಂತ ಸೀರಿಯಲ್ ನಲ್ಲಿ ಗಿರಿಜಾ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಾ, ಆ ಪಾತ್ರಕ್ಕೆ ಜೀವ ತುಂಬಿರುವ ನಟಿ ಕೃತಿಕಾ ರವೀಂದ್ರ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ.   

PREV
18
ಜೀವನದ ಕಹಿ ಸತ್ಯ ಬಿಚ್ಚಿಟ್ಟ ಭೂಮಿಗೆ ಬಂದ ಭಗವಂತ ಸೀರಿಯಲ್ ನಟಿ ಕೃತಿಕಾ!

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಅತ್ಯುತ್ತಮ ಸಂದೇಶ ಸಾರುತ್ತಿರುವ ಧಾರಾವಾಹಿ ಭೂಮಿಗೆ ಬಂದ ಭಗವಂತ. ಈ ಧಾರಾವಾಹಿಯಲ್ಲಿ ನಾಯಕಿ ಗಿರಿಜಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಕೃತಿಕಾ ರವೀಂದ್ರ (Kruttika Ravindra). 
 

28

ಕೃತಿಕಾ 2008ರಿಂದಲೂ ನಟನಾ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಬಾಲ ನಟಿಯಾಗಿ ಸೀರಿಯಲ್ ಜಗತ್ತಿಗೆ ಕಾಲಿಟ್ಟ ನಟ, ನಂತರ ಕನ್ನಡ ಸೀರಿಯಲ್, ಸಿನಿಮಾ ಮತ್ತು ಬಿಗ್ ಬಾಸ್ ನಲ್ಲೂ ಸ್ಪರ್ಧಿಸಿ ಸೈ ಎನಿಸಿಕೊಂಡಿದ್ದರು.  ಇದೀಗ ಭೂಮಿಗೆ ಬಂದ ಭಗವಂತ ಸೀರಿಯಲ್ ಮೂಲಕ ಮಿಂಚುತ್ತಿದ್ದಾರೆ. 
 

38

ಭೂಮಿಗೆ ಬಂದ ಭಗವಂತ ಸೀರಿಯಲ್ ನಲ್ಲಿ ಗಿರಿಜಾ ಪಾತ್ರಕ್ಕೆ ಜೀವ ತುಂಬಿದ್ದಾರೆ ಕೃತಿಕಾ. ತಮ್ಮ ವಯಸ್ಸಿಗೂ ಮೀರಿದ ಪಾತ್ರದಲ್ಲಿ, ಶಿವಪ್ರಸಾದ್ ಪಾತ್ರದಲ್ಲಿ ಮಿಂಚುತ್ತಿರುವ ನವೀನ್ ಕೃಷ್ಣ ಅವರ ಪತ್ನಿಯಾಗಿ, ಮಧ್ಯಮ ಕುಟುಂಬದ, ಆಸೆ, ಕನಸುಗಳನ್ನು ಹೊಂದಿದ, ಎರಡು ಮಕ್ಕಳ ತಾಯಿಯಾಗಿ ಕೃತಿಕಾ ನಟಿಸುತ್ತಿದ್ದಾರೆ. 
 

48

ಗಿರಿಜಾ ಪಾತ್ರದ ಮೂಲಕ ಜನಮನ ಗೆದ್ದಿರುವ ಕೃತಿಕಾ ಬಗ್ಗೆ ಹೇಳೋದಾದರೆ ಇವರು ಸಾಗರ ಮೂಲದ ಹುಡುಗಿ, ಹುಟ್ಟಿ ಬೆಳೆದು, ವಿದ್ಯಾಭ್ಯಾಸ ಮಾಡಿದ್ದೇಲ್ಲಾ ಅಲ್ಲೆ. ನಂತರ ಬಾಲನಟಿಯಾಗಿ (child artist) ಸೀರಿಯಲ್ ನಲ್ಲಿ ನಟಿಸಿದ್ದರು, 2008ರಲ್ಲಿ ಪಟ್ರೆ ಲವ್ಸ್ ಪದ್ಮ ಸಿನಿಮಾ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟರು. 
 

58

ಕಿರುತೆರೆ ಮತ್ತು ಹಿರಿತೆರೆ ಎರಡೂ ಕಡೆ ಮಿಂಚಿದ ನಟಿ ಆಟೋ, ಲಿಫ್ಟ್ ಕೊಡ್ಲಾ, ಕೆಂಗುಲಾಬಿ, ಯಾರಿಗೆ ಯಾರುಂಟು, ಮಾರೀಚ, ಶಾರ್ದೂಲ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ, ಅಲ್ಲದೇ ಮನೆಮಗಳು, ರಾಧಾ ಕಲ್ಯಾಣ, ವಿಜಯದಶಮಿ ಮೊದಲಾದ ಸೀರಿಯಲ್ (serials)ನಲ್ಲಿ ನಟಿಸಿದ್ದರು. 
 

68

ರಾಧಾ ಕಲ್ಯಾಣ ಸೀರಿಯಲ್ ಕೃತಿಕಾಗೆ ಹೆಸರು ತಂದು ಕೊಟ್ಟ ಸೀರಿಯಲ್. ಈ ಸೀರಿಯಲ್ ನಲ್ಲಿ ತಮ್ಮ ಮುಗ್ಧ ಅಭಿನಯದಿಂದ ಕೃತಿಕಾ ಮನೆಮಗಳಾಗಿ ಜನಪ್ರಿಯತೆ ಪಡೆದಿದ್ದರು. ಇದಾದ ಬಳಿಕ ಇವರು ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಪರ್ಧಿಸಿದ್ದರು. 
 

78

ಕೃತಿಕಾ ನಟಿಯಾಗಿ ಗುರುತಿಸಿಕೊಳ್ಳುವ ಸಮಯದಲ್ಲೇ ಅವರ ತಂದೆ ಡಾ ರವೀಂದ್ರ ಅವರು ಕ್ಯಾನ್ಸರ್ ನಿಂದಾಗಿ ತೀರಿಕೊಂಡರಂತೆ. ಇದು ತನ್ನ ಜೀವನದ ಕಹಿ ಅಧ್ಯಾಯ ಎನ್ನುತ್ತಾರೆ ಕೃತಿಕಾ. ಅಪ್ಪನನ್ನು ಕಳೆದುಕೊಂಡ ನೋವು ಪ್ರತಿಕ್ಷಣವೂ ಕಾಡುತ್ತಂತೆ ಇವರಿಗೆ. 
 

88

ಸದ್ಯ ತಾಯಿಯೊಂದಿಗೆ ಇರುವ ಕೃತಿಕಾಗೆ ಅಮ್ಮನೇ ಪ್ರಪಂಚ. ಇವರು ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹೆಚ್ಚಾಗಿ ಅಮ್ಮನೊಂದಿಗಿನ ಫೋಟೋಗಳನ್ನು ಹಾಕುತ್ತಿರುತ್ತಾರೆ. ಅವರ ತಾಯಿ ಟೀಚರ್. ತಾನು ಅಮ್ಮ ನೋಡಿದ ಹುಡುಗನನ್ನೆ ಮದ್ವೆಯಾಗೋದು ಅಂತಾರಂತೆ ಈ ಚೆಲುವೆ. 
 

Read more Photos on
click me!

Recommended Stories