ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಸೀರಿಯಲ್ ದಿನದಿಂದ ದಿನಕ್ಕೆ ಹಲವು ಟ್ವಿಸ್ ಆಂಡ್ ಟರ್ನ್ ಪಡೆದು ನೆಟ್ಟಿಗರ ಗಮನ ಸೆಳೆದಿದೆ.
ಆಕಾಶ್ ಮೇಲೆ ಪುಷ್ಪಾಗೆ ಪ್ರೀತಿ ಹೆಚ್ಚಾಗಿ, ಪುಷ್ಪಾಳ ಮೇಲೆ ಮನೆ ಮಂದಿಗೆ ಗೌರವ ಹೆಚ್ಚಾಗಿದೆ. ಈ ತುಂಬು ಕುಟುಂಬದ ಕಥೆ ಜನರಿಗೆ ಇಷ್ಟವಾಗಿದೆ.
ಆಕಾರ್ಶ್ ಮತ್ತು ಪುಷ್ಪ ಆನ್‌ಸ್ಕ್ರೀನ್ ಮಾತ್ರವಲ್ಲ ಆಫ್ ಸ್ಕ್ರೀನ್ ಕೂಡ ಹೇಳಿ ಮಾಡಿಸಿದ ಜೋಡಿ ಅನ್ನೋದು ವರುಣ್ ಆರಾಧ್ಯ ಯುಟ್ಯೂಬ್ ವಿಡಿಯೋದಲ್ಲಿ ನೋಡಬಹುದು.
ಶೂಟಿಂಗ್ ದಿನಗಳು ಹೇಗಿರಲಿದೆ ಎಂದು ವರುಣ್ ಆರಾಧ್ಯ ವಿಡಿಯೋ ಮಾಡಿದ್ದರು. ಅಮೂಲ್ಯ ಮತ್ತು ವರುಣ್ ಆರಾಧ್ಯ ಮೆಚ್ಚಿಕೊಂಡ ಜನರಿಗೆ ಈ ಒಂದು ಪ್ರಶ್ನೆ ಕಾಡಿದೆ.
ಅಮೂಲ್ಯ ಭಾರದ್ವಾಜ್ ಟೆರೇಸ್ ಮೇಲೆ ನಿಂತು ಪೋಸ್ ಕೊಟ್ಟಿದ್ದಾರೆ. ವರುಣ್‌ನ ಫಾಲೋ ಮಾಡುವ ಜನರಿಗೆ ಇದು ಪಕ್ಕಾ ವರುಣ್ ಮನೆ ಅಂತ ಗೊತ್ತಾಗಿದೆ.
ವರುಣ್ ಆರಾಧ್ಯ ಮನೆಯಲ್ಲಿ ನೀವ್ಯಾಕೆ ಇದ್ದೀರಾ? ಅವರ ಟೆರೇನ್ ಮೇಲೆ ಯಾಕೆ ರೀಲ್ಸ್ ಮಾಡ್ತೀರಾ? ವರ್ಷ ಜೊತೆ ಬ್ರೇಕಪ್‌ಗೆ ಇದೇ ಕಾರಣನಾ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.