ನೀಲಿ ಸೀರೆಯುಟ್ಟು ಚಾಮುಂಡಿ ಬೆಟ್ಟದಲ್ಲಿ ಪೋಸ್ ಕೊಟ್ಟ ಸೋನು ಗೌಡ: ನಿಮ್ದು ಮಗುವಿನಂತ ಮನಸ್ಸು ಎಂದ ಫ್ಯಾನ್ಸ್‌!

First Published | Jan 13, 2024, 3:00 AM IST

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸೋನು ಗೌಡ ನೀಲಿ ಸೀರೆಯುಟ್ಟು, ಕೈಯಲ್ಲಿ ಪೂಜಾ ಸಾಮಾಗ್ರಿಗಳನ್ನು ಹಿಡಿದುಕೊಂಡಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಬಿಗ್ ಬಾಸ್ ಒಟಿಟಿ​ ಸ್ಪರ್ಧಿಯಾಗಿದ್ದ ಸೋನು ಶ್ರೀನಿವಾಸ್ ಗೌಡ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ತಾರೆ.

ಇದೀಗ ಸೋನು ಗೌಡ ನೀಲಿ ಸೀರೆಯುಟ್ಟು, ಕೈಯಲ್ಲಿ ಪೂಜಾ ಸಾಮಾಗ್ರಿಗಳನ್ನು ಹಿಡಿದುಕೊಂಡಿದ್ದಾರೆ. ಹೌದು! ಸೋನು ಗೌಡ ಕೂಡ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Tap to resize

ಅಮ್ಮ ಚಾಮುಂಡೇಶ್ವರಿ ತಾಯಿ ನಮಸ್ಕಾರ ಎಂದು ಸೋನು ಗೌಡ ಬರೆದುಕೊಂಡಿದ್ದಾರೆ. ಇನ್ಸ್ಟಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೋನು ಫೋಟೋಗಳಿಗೆ ನೆಟ್ಟಿಗರು ಲೈಕ್‌ ಹಾಗೂ ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ.

ಸೋನು ಗೌಡ ನಿಮ್ದು ಮಗುವಿನಂತ ಮನಸ್ಸು, ಇದು ನಮ್ಮ ಸಂಸ್ಕೃತಿ ಅಂದ್ರೆ.. ಮುಖದಲ್ಲಿ ಆ ಕಳೆ ನೋಡ್ರೋ, ನೀನು ಈ ರೀತಿ ಸೀರೆಯಲ್ಲಿ ಕಾಣಿಸಿಕೊಂಡ್ರೆ ಯಾರೂ ಟ್ರೋಲ್ ಮಾಡಲ್ಲ ಸೇರಿದಂತೆ ತರೇಹವಾರಿ ಕಾಮೆಂಟ್ ಮಾಡಿದ್ದಾರೆ.

ಟಿಕ್ ಟಾಕ್ , ರೀಲ್ಸ್ ಮೂಲಕ ಫೇಮಸ್ ಆಗಿರೋ ಸೋನು ಶ್ರೀನಿವಾಸ್ ಗೌಡ, ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ತಮ್ಮ ಖಾಸಗಿ ಬದುಕಿನಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದರು.

ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿ ಭಾರೀ ವೈರಲ್ ಆಗಿತ್ತು. ಇದ್ರಿಂದಲೇ ಸೋನು ಗೌಡ ಸಖತ್ ಟ್ರೋಲ್ ಆಗಿದ್ರು.

ಬಿಗ್ ಬಾಸ್ ಮನೆಯಲ್ಲಿ ಆ ಬಗ್ಗೆ ಸ್ವತಃ ಸೋನು ಅವರೇ ಒಪ್ಪಿಕೊಂಡಿದ್ರು. ಅಷ್ಟೇ ಅಲ್ಲ, ತಮ್ಮದು ಇನ್ನೊಂದು ವಿಡಿಯೋ ಇದೆ. ಅದನ್ನು ಅವನ್ನು ಯಾವಾಗ ರಿಲೀಸ್ ಮಾಡ್ತಾನೋ ಗೊತ್ತಿಲ್ಲ ಅನ್ನೋ ಆತಂಕವಿದೆ ಎಂದು ಸೋನು ಗೌಡ ಹೇಳಿಕೊಂಡಿದ್ರು.

Latest Videos

click me!