ಬಿಗ್‌ಬಾಸ್‌ ಕನ್ನಡ ಸ್ಪರ್ಧಿಗಳ ಶೈಕ್ಷಣಿಕ ಮಾಹಿತಿ, ಡ್ರೋಣ ಪ್ರತಾಪ್‌ ನಿಜವಾದ ವಿದ್ಯಾರ್ಹತೆ ಏನು?

Published : Nov 17, 2023, 07:01 PM ISTUpdated : Nov 19, 2023, 10:40 AM IST

ಕಲರ್ಸ್ ಕನ್ನಡ ಮತ್ತು ಜಿಯೋ ಸಿನೆಮಾದಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಕನ್ನಡದ 10 ನೇ ಸೀಸನ್  ಸ್ಪರ್ಧಿಗಳು ವೈವಿಧ್ಯಮಯ ಕೌಶಲ್ಯ ಮತ್ತು ಶೈಕ್ಷಣಿಕ ಹಿನ್ನೆಲೆ ಉಳ್ಳವರಾಗಿದ್ದಾರೆ.  ಸ್ಪರ್ಧಿಗಳ ಶೈಕ್ಷಣಿಕ  ಅರ್ಹತೆ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

PREV
19
ಬಿಗ್‌ಬಾಸ್‌ ಕನ್ನಡ ಸ್ಪರ್ಧಿಗಳ ಶೈಕ್ಷಣಿಕ ಮಾಹಿತಿ, ಡ್ರೋಣ ಪ್ರತಾಪ್‌ ನಿಜವಾದ ವಿದ್ಯಾರ್ಹತೆ ಏನು?

ಕಂಪ್ಯೂಟರ್ ಸೈನ್ಸ್‌ನಲ್ಲಿ BSc ಮಾಡಿರುವ  ಮೈಕೆಲ್ ಅಜಯ್ ಓರ್ವ ಬಲಿಷ್ಠ ಆಟಗಾರ, ನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್  ಆಟಗಾರ,  ಇವರ ಸಾಧನೆ ಶಿಕ್ಷಣವನ್ನು ಮೀರಿ ವಿಸ್ತರಿಸಿದೆ. ಇಂಟರ್‌ನ್ಯಾಷನಲ್‌ ಬ್ರಾಂಡ್‌ ಮಾಡೆಲ್‌ ಆಗಿದ್ದಾರೆ. 

29

ಮನೆಗೆ ವಾಸ್ತುಶಿಲ್ಪದ ಸೊಗಸು ತುಂಬಾ ಪ್ರಮುಖವಾಗಿರುತ್ತದೆ. ಅಂತೆಯೇ  ನಮ್ರತಾ ಗೌಡ ಅವರು ಪ್ರಸಿದ್ಧ  ಆಚಾರ್ಯ್ ಎನ್‌ಆರ್‌ವಿ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ (ವಾಸ್ತುಶಿಲ್ಪ) ಪದವಿ ಪಡೆದಿದ್ದಾರೆ. 

39

ದುಬೈನ ಗೌರವಾನ್ವಿತ ಹೆರಿಯಟ್ ವ್ಯಾಟ್ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವೀಧರರಾಗಿರುವ ಇಶಾನಿ ವ್ಯವಹಾರ ಆಡಳಿತದ ಹಿನ್ನೆಲೆ ಹೊಂದಿದ್ದಾರೆ.  17 ಇಂಗ್ಲಿಷ್ ಆಲ್ಬಂ ಸಾಂಗ್‌ನಲ್ಲಿ ಹಾಡಿದ್ದಾರೆ. 

49

 ಚಿಕ್ಕಮಗಳೂರಿನ ಶೃಂಗೇರಿಯವರಾದ ಸಂಗೀತಾ ಅವರು ಕೇಂದ್ರಿಯ ವಿದ್ಯಾಲಯ ಶಾಲೆಯಲ್ಲಿ ಓದಿದ್ದಾರೆ. ಕಾಲೇಜು ದಿನಗಳಲ್ಲಿ ಎನ್‌ಸಿಸಿ ಕ್ರೆಡೆಟ್ ಆಗಿದ್ದ ಸಂಗೀತಾ ಕರ್ನಾಟಕ ಖೋಖೋ ತಂಡ ಪ್ರತಿನಿಧಿಸಿ ಚಿನ್ನದ ಪದಕ ಪಡೆದಿದ್ದಾರೆ.

59

ಮೈಸೂರಿನ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದಿರುವ ಕಾರ್ತಿಕ್ ಅವರು ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲದೆ ಸಾಂಪ್ರದಾಯಿಕ ಕಲಾ ಪ್ರಕಾರದಲ್ಲಿ ತಮ್ಮ ಪರಿಣತಿ ಹೊಂದಿದ್ದು ಕಂಸಾಳೆ ಕಲಾವಿದ, ಅತ್ಯುತ್ತಮ ಡಾನ್ಸರ್‌ ಆಗಿದ್ದಾರೆ. 

69

ಬೆಂಗಳೂರಿನ ಪ್ರಮುಖ ಮಹಿಳಾ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಓದಿರುವ ತನಿಶಾ, ವ್ಯಾಪಾರ ನಿರ್ವಹಣೆ ಮತ್ತು ಆಡಳಿತದಲ್ಲಿ ಪದವಿ ಮಾಡಿದ್ದಾರೆ.

79

ವಿಶಿಷ್ಟ ಕೌಶಲ್ಯವನ್ನು ಹೊಂದಿರುವ ನೀತು ಅವರು ವಿಷುಯಲ್ ಆರ್ಟ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಟ್ಯಾಟೂ ಸ್ಟುಡಿಯೊ  ಮಾಲೀಕರಾಗಿದ್ದಾರೆ.  ಹೋಟೆಲ್‌ ಉದ್ಯಮ ನಡೆಸುತ್ತಾರೆ. ಗಂಡಾಗಿ ಹುಟ್ಟಿದ್ದ ಇವರಿಗೆ ಮಂಜುನಾಥ್ ಎಂಬ ಹೆಸರಿಡಲಾಗಿತ್ತು. ಬಳಿಕ ದೈಹಿಕ ಬದಲಾವಣೆಯಾಗಿ ನೀತು ಆಗಿದ್ದಾರೆ. 

89

ಬೆಂಗಳೂರಿನ ಜನಪ್ರಿಯ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್‌ನೊಂದಿಗೆ ವಿನಯ್ ಗೌಡ ತನ್ನ ಶೈಕ್ಷಣಿಕ ಅನುಭವ ಹೊಂದಿದ್ದಾರೆ.

99

ಡ್ರೋಣ್‌ ಪ್ರತಾಪ್‌  ಬೆಂಗಳೂರಿನ ಜೈನ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್’ನಲ್ಲಿ ಶಾಲಾ ಶಿಕ್ಷಣ ಪೂರೈಸಿ ಬಳಿಕ JSS ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಮೈಸೂರು ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ 

Read more Photos on
click me!

Recommended Stories