ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10 ದಿನದಿಂದ ದಿನಕ್ಕೆ ಸಾಕಷ್ಟು ತಿರುವುದಗಳನ್ನು ಪಡೆಯುತ್ತಿದೆ. ಅಲ್ಲದೆ ಸ್ಪರ್ಧಿಗಳು ಕಂಫರ್ಟ್ ಜೋನ್‌ನಲ್ಲಿ ಇದ್ದಾರೆ.
ನಮ್ರತಾ ಗೌಡ, ವಿನಯ್ ಗೌಡ ಮತ್ತು ಸ್ನೇಹಿತ್ ಒಂದಯ ತಂಡ ಮಾಡಿಕೊಂಡು ಸಿಕ್ಕಾಪಟ್ಟೆ ಕಂಫರ್ಟ್ ಆಗಿದೆ. ಹೀಗಾಗಿ ಈ ವಾರ ತಂಡಗಳು ಬದಲಾಗಿದೆ.
ಡ್ರೋನ್ ಪ್ರತಾಪ್ ಮತ್ತು ಮೈಕಲ್ ನಡುವೆ ನಮ್ರತಾ ಡ್ರೋನ್ ಪ್ರತಾಪ್‌ರ ತಂಡ ಸೇರಿಕೊಳ್ಳುತ್ತಾರೆ. ಇದಕ್ಕೆ ಪ್ರತಾಪ್ ಹೇಳುತ್ತಿದ್ದ ಮಾತುಗಳನ್ನು ಕಾರಣವಗಿ ಕೊಟ್ಟರು.
'ನನ್ನಲ್ಲಿ ಯಾರೋ ಬೇರೆ ನಮ್ರತಾ ಇದ್ದಾಳೆ ಅಕೆಯನ್ನು ಹೊರ ತರಬೇಕು ಎಂದು ಡ್ರೋನ್ ಆಗಾಗ ಹೇಳುತ್ತಾರೆ. ಈ ಕಾರಣಕ್ಕೆ ಈ ವಾರ ಅವರ ತಂಡ ಸೇರುತ್ತೀನಿ' ಎನ್ನುತ್ತಾರೆ ನಮ್ರತಾ.
ಆದರೆ ಈ ವಾರದ ಕ್ಯಾಪ್ಟನ್ ಟಾಸ್ಕ್‌ನಿಂದ ನಮ್ರತಾರನ್ನು ಡ್ರೋನ್ ಎಲಿಮಿನೇಟ್ ಮಾಡುತ್ತಾರೆ. ಹೀಗಾಗಿ ನಮ್ರತಾ ಬೇಸರ ಮಾಡಿಕೊಂಡು ಕಣ್ಣೀರಿಡುತ್ತಾರೆ.
ಈ ವಾರ ನಾನು ಗೇಮ್ ಆಡಬೇಕು ಎಂದು ತೀರ್ಮಾನ ಮಾಡಿದ್ದೆ. ನಮ್ರತಾ ನನಗೆ ಇಷ್ಟ ಇಲ್ಲ ಅದಿಕ್ಕೆ ಆಕೆಯನ್ನು ನನ್ನ ಟೀಮ್‌ಗೆ ಸೇರಿಸಿಕೊಂಡು ಹೊಡೆದಾಕಿದೆ ಎಂದು ಹೇಳಬೇಕಿತ್ತು ಎಂದು ನಮ್ರತಾ ಕಣ್ಣೀರಿಡುತ್ತಾರೆ.
ನಮ್ರತಾ ಮಾತುಗಳಿ ಕೇರ್ ಮಾಡದೆ ಡ್ರೋನ್ ನಡೆದುಕೊಂಡು ಹೋಗುತ್ತಾರೆ. ಡ್ರೋನ್ ಮಾಡಿದ್ದು ಸರಿ ಎಂದು ಕೆಲವರು ಪಾಸಿಟಿವ್ ಕಾಮೆಂಟ್ ಮಾಡಿದ್ದಾರೆ.
ಸದಾ ಚಮಚಗಳ ರೀತಿ ಕೆಲಸ ಮಾಡುವವರು ಅಪರೂಪಕ್ಕೆ ಬೇರೆ ತಂಡ ಸೇರಿಕೊಂಡರೆ ಹೀಗೆ ಆಗುವುದು. ಎಲ್ಲರ ಜೊತೆಗಿದ್ದರೆ ಗೌರವ ಇರುತ್ತಿತ್ತು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.