ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ಭವ್ಯಾ ಗೌಡ ಪಾತ್ರ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ.
ವಾವ್ ಸೊಸೆ ಅಂದ್ರೆ ಹೀಗಿರಬೇಕು, ಗಟ್ಟಿಗಿತ್ತಿ ನಮ್ಮ ಗೀತಾ ಎಂದು ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್ ಮಾಡುತ್ತಾರೆ. ಎಲ್ಲವೂ ಪಾಸಿಟಿವ್ ಕಾಮೆಂಟ್ ಆಗಿರುತ್ತದೆ.
ಪ್ರತಿ ಎಪಿಸೋಡ್‌ನಲ್ಲೂ ಗೀತಾ ಸಖತ್ ಟ್ರೆಂಡಿ ಮತ್ತು ಕಲರ್‌ಫುಲ್ ಉಡುಪುಗಳನ್ನು ಧರಿಸುತ್ತಾರೆ. ಹೆಣ್ಣು ಮಕ್ಕಳಿಗೆ ಗೀತಾ ಸೀರೆ ಮೇಲೆ ಕಣ್ಣು.
ಆದರೆ ಗೀತಾ ಧರಿಸುವ ಪ್ರತಿಯೊಂದು ಉಡುಪುಗಳ ಕ್ಯಾಪ್ಶನ್ ಆಗಿ ಅಂಗಡಿಗಳ ಹೆಸರುಗಳನ್ನು ಹಾಕುತ್ತಾರೆ. ಇದಕ್ಕೆ ನೆಟ್ಟಿಗರಲ್ಲಿ ಕೊಂಚ ಗೊಂದಲ ಸೃಷ್ಟಿಯಾಗಿದೆ.
ಅಯ್ಯೋ! ಗೀತಾ ದಿನ ಹಾಕೋ ಬಟ್ಟೆಗೂ ದುಡ್ಡು ಕೊಡಬೇಕಾ? ಅಥವಾ ಪ್ರಚಾರ ಬೇಕು ಅಂತ ಅವರೇ ಫ್ರೀ ಆಗಿ ಕೊಡ್ತಾರಾ ಎಂದು ನೆಟ್ಟಿಗರು ಕೇಳುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಭವ್ಯಾ ಗೌಡ ಸಖತ್ ಮಾಡರ್ನ್ ಹುಡುಗಿ. ಗೀತಾ ಪಾತ್ರಕ್ಕೆ ಮಾತ್ರ ಟ್ರೆಡಿಷನಲ್ ಆಗಿ ರೆಡಿಯಾಗುತ್ತಾರೆ.
Vaishnavi Chandrashekar