ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ (Ramachari) ಧಾರಾವಾಹಿಯಲ್ಲಿ ಚಾರು ತಾಯಿತನದ ಮಹತ್ವ ಸಾರುತ್ತಿದ್ದಾರೆ.
ನಾರಾಯಣ ಆಚಾರ್ಯರು ವೀಲ್‌ಚೇರ್ ಹಿಡಿದಿದ್ದಾರೆ. ಅವರ ಆರೋಗ್ಯಕ್ಕೆ ಪರಿಹಾರ ಮತ್ತು ಮನಸ್ಸಿಗೆ ಖುಷಿ ಅಂದ್ರೆ ಮೊಮ್ಮಕ್ಕಳ ಎಂಟ್ರಿ ಅಂತ ಅತ್ತೆ ಹೇಳಿದ್ದಾರೆ.
ಚಾರು ಮತ್ತು ವೈಶಾಖ ಮಕ್ಕಳು ಮಾಡಿಕೊಳ್ಳುವ ನಿರ್ಧಾರ ಮಾಡಲಿ ಎನ್ನುತ್ತಿದ್ದಾರೆ. ಹೀಗಾಗಿ ರಾಮಚಾರಿನ ಇಂಪ್ರೆಸ್ ಮಾಡಲು ಚಾರು ರೆಡಿಯಾಗಿದ್ದಾಳೆ.
ಸೀಮೆಂಟ್ ಬಣ್ಣದ ಸೀರೆಯನ್ನು ಧರಿಸಿ ಚಾರು ಸಖತ್ ಆಗಿ ರೆಡಿಯಾಗಿದ್ದಾಳೆ. ಸ್ವತಃ ರಾಮಚಾರಿನೇ ಇಂಪ್ರೆಸ್ ಆಗಿ ಯಾಕೆ ಎಂದು ಪ್ರಶ್ನೆ ಮಾಡಿದ್ದಾನೆ.
ಅಣ್ಣ ಅತ್ತಿಗೆ ಮೊದಲು ಮದುವೆ ಆಗಿದ್ದು ಅವರೇ ಮೊಮ್ಮಕ್ಕಳನ್ನು ಮೊದಲು ಕೊಡಬೇಕು ಎಂದು ರಾಮಚಾರಿ ಈ ನಿರ್ಧಾರದಿಂದ ದೂರ ಸೆರೆಯುತ್ತಾರೆ.
ಹೀಗಾಗಿ ವೈಶಾಲ ಮನವೋಲಿಸಲು ಚಾರು ತಾಯಿತನದ ಮಹತ್ವ ಸಾರುವ ಎಪಿಡೋಸ್ ವೀಕ್ಷಕರ ಗಮನ ಸೆಳೆದಿದೆ. ಚಾರು ಪಾತ್ರ ಸೂಪರ್ ಎಂದಿದ್ದಾರೆ.