BBK 12: ಒಂದೇ ದಿನಕ್ಕೆ ಸಿಗೋ 67 ಲಕ್ಷ ರೂ. ಬಿಟ್ಟು ಬಿಗ್‌ ಬಾಸ್‌ಗೆ ಬಂದ ವಿಶ್ವದ NO 1 ಡಾಗ್‌ ಬ್ರೀಡರ್‌ ಸತೀಶ್

Published : Sep 28, 2025, 07:24 PM IST

Bigg Boss Kannada 12: ಬಿಗ್‌ ಬಾಸ್‌ ಮನೆಗೆ ಡಾಗ್‌ ಸತೀಶ್‌ ಎಂಟ್ರಿ ಕೊಟ್ಟಿದ್ದಾರೆ. ವಿಶ್ವದ No 1 ಡಾಗ್‌ ಬ್ರೀಡರ್‌ ಆಗಿರೋ ಸತೀಶ್‌ ಅವರು 67 ಲಕ್ಷ ರೂಪಾಯಿ ಮೌಲ್ಯದ ಆದಾಯವನ್ನು ತಿರಸ್ಕಾರ ಮಾಡಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. 

PREV
16
ಪ್ರಪಂಚದ ನಂ 1 ಡಾಗ್‌ ಬ್ರೀಡರ್‌

ಪ್ರಪಂಚದ ನಂ 1 ಡಾಗ್‌ ಬ್ರೀಡರ್‌ ಕೂಡ ಹೌದು. ಬೀದಿ ನಾಯಿಗಳು, ಕ್ರಾಸ್‌ ಬ್ರೀಡ್‌ ಎಂದು ವಿವಿಧ ರೀತಿಯ ನಾಯಿಯನ್ನು ಖರೀದಿ ಮಾಡಿದ್ದಾರೆ. ಒಂದು ನಾಯಿ ಖರೀದಿ ಮಾಡೋದು, ಆಮೇಲೆ ಅದನ್ನು ಮಾರೋದು, ಅದರಿಂದ ಇನ್ನೊಂದು ನಾಯಿ ತಗೊಳೋದು ಮಾಡುತ್ತಾರೆ.

26
ನಾಯಿ ಅಂದ್ರೆ ಇಷ್ಟ

ಮೊದಲಿನಿಂದಲೂ ಸತೀಶ್‌ ಅವರಿಗೆ ನಾಯಿ ಅಂದರೆ ಇಷ್ಟ. ಚಿಕ್ಕ ವಯಸ್ಸಿನಲ್ಲಿದ್ದಾಗ ತಂದೆ ಶ್ವಾನವೊಂದನ್ನು ಕೊಡಿಸಿದ್ದರು. ಆಮೇಲೆ ಶ್ವಾನದಲ್ಲೂ ಒಂದಷ್ಟು ತಳಿ ಇದೆ ಎನ್ನೋದು ಅರ್ಥ ಆಯ್ತು. ಆಮೇಲೆ ಇದನ್ನೇ ಅವರು ಬ್ಯುಸಿನೆಸ್‌ ಮಾಡಿಕೊಂಡರು.

36
ನಾಯಿ ಬ್ಯುಸಿನೆಸ್‌ ಮಾಡೋದು ಹೇಗೆ?

ಸತೀಶ್‌ ಅವರ ಬಳಿ ನೂರು ಕೋಟಿ ರೂಪಾಯಿ ನಾಯಿ ಇದೆ. ಕತ್ತೆಯಷ್ಟು ಸೈಜ್‌ ಇದೆ ಎಂದು ಆ ನಾಯಿಗೆ 100 ಕೋಟಿ ರೂಪಾಯಿ ಬೆಲೆ ಕಟ್ಟಲಾಗಿದೆಯಂತೆ. ಮುಖ ನೋಡಿಕೊಂಡು ಮಣೆ ಹಾಕೋದು ಎನ್ನುವಂತೆ ನಾಯಿ ಮುಖವನ್ನು ನೋಡಿ ಬೆಲೆ ಕಟ್ಟಲಾಗುವುದಂತೆ. ಇದನ್ನು ಸತೀಶ್‌ ಅವರೇ ಕಿಚ್ಚ ಸುದೀಪ್‌ ಮುಂದೆ ಹೇಳಿಕೊಂಡಿದ್ದಾರೆ. 

46
ಆದಾಯ ಎಷ್ಟು?

ಬಿಗ್‌ ಬಾಸ್‌ ಟ್ರೋಫಿ ಸಿಕ್ಕಿದರೆ 50 ಲಕ್ಷ ರೂಪಾಯಿ ಸಿಗುವುದು. ಸತೀಶ್‌ ಅವರಿಗೆ ಮುಂದಿನ ತಿಂಗಳು ಒಂದು ದಿನಕ್ಕೆ 67 ಲಕ್ಷ ರೂಪಾಯಿ ಆದಾಯ ಬರೋದಿತ್ತು. ಹೈದಾರಾಬಾದ್‌ನಲ್ಲಿ 7 ಸ್ಟಾರ್‌ ಹೋಟೆಲ್‌ ರೂಮ್‌ ಬುಕ ಆಗಿತ್ತು. ಆದರೆ ಬಿಗ್‌ ಬಾಸ್‌ ಮುಖ್ಯ ಎಂದು ಅವರು ಆ ಆದಾಯವನ್ನು ಬಿಟ್ಟು ಬಿಗ್‌ ಬಾಸ್‌ ಮನೆಗೆ ಬಂದಿದ್ದಾರಂತೆ. ಅಷ್ಟೇ ಅಲ್ಲದೆ ಕಿಚ್ಚ ಸುದೀಪ್‌ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಒದ್ದಾಡಿದ್ದರಂತೆ.

56
ಮಗ, ಡಿವೋರ್ಸ್‌

ಮನಸ್ತಾಪದಿಂದ ಪತ್ನಿಯ ಜೊತೆಗೆ ಡಿವೋರ್ಸ್‌ ಆಗಿದೆ. ಮಲತಾಯಿ ಬಂದರೆ ಮಗನನ್ನು ಹೇಗೆ ನೋಡಿಕೊಳ್ತಾರೋ ಏನೋ ಎನ್ನುವ ಭಯಕ್ಕೆ ಮತ್ತೆ ಮದುವೆಯೇ ಆಗಿಲ್ಲ. ಮಗನೇ ನನ್ನ ಪ್ರಪಂಚ ಎಂದು ಅವರು ಹೇಳುತ್ತಾರೆ.

66
ಬಿಗ್‌ ಬಾಸ್‌ಗೆ ಬಟ್ಟೆ ಖರೀದಿ ಮಾಡಿದ್ದೆಷ್ಟು?

ಗೆದ್ದ ಸ್ಪರ್ಧಿಗೆ ಬಿಗ್‌ ಬಾಸ್‌ ಟ್ರೋಫಿ ಜೊತೆಗೆ 50 ಲಕ್ಷ ರೂಪಾಯಿ ಸಿಗುವುದು. ಆಮೇಲೆ ವಾರಕ್ಕೆ ಇಂತಿಷ್ಟು ಎಂದು ಸಂಭಾವನೆ ಕೂಡ ಇರುವುದು. ಆದರೆ ಈ ಶೋಗೋಸ್ಕರ ಸತೀಶ್‌ ಅವರು 25 ಲಕ್ಷ ರೂಪಾಯಿ ಬೆಲೆ ಬಾಳುವ ಬಟ್ಟೆಯನ್ನು ಖರೀದಿ ಮಾಡಿ ಬಂದಿದ್ದಾರಂತೆ.

Read more Photos on
click me!

Recommended Stories