ಈ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಗೆ ವಿಭಿನ್ನ ವ್ಯಕ್ತಿತ್ವವುಳ್ಳ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಹಾಗಾದರೆ ಅವರು ಯಾರು? ಯಾರು?
ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ಮಂಜುಭಾಷಿಣಿ ಅವರು ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲಿದ್ದಾರಂತೆ. ‘ಸಿಲ್ಲಿ ಲಲ್ಲಿ’ ಧಾರಾವಾಹಿ ಖ್ಯಾತಿಯ ನಟಿ ಈ ಬಾರಿ ದೊಡ್ಮನೆ ಪ್ರವೇಶ ಮಾಡಿರೋದು ಕುತೂಹಲ ಮೂಡಿಸಿದೆ.
511
ಕಾಕ್ರೋಚ್ ಸುಧಿ
ಕಾಕ್ರೋಚ್ ಸುಧಿ ಕೂಡ ದೊಡ್ಮನೆ ಪ್ರವೇಶ ಮಾಡಿದ್ದಾರೆ. ನಾನು ಬಿಗ್ ಬಾಸ್ ಮನೆಗೆ ಹೋಗಲ್ಲ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದರು. ‘ಟಗರು’, ‘ಮಾದೇವ’ ಮುಂತಾದ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ.
611
ಗಿಲ್ಲಿ ನಟ, ಸೂರಜ್, ಚಂದ್ರಪ್ರಭ
ಈಗಾಗಲೇ ಸಾಕಷ್ಟು ಕಾಮಿಡಿ ಶೋಗಳಲ್ಲಿ ಪ್ರಾಪರ್ಟಿ ಕಾಮಿಡಿ ಮಾಡಿ, ಜನಪ್ರಿಯತೆ ಪಡೆದಿರುವ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಕೆಲ ಸೀಸನ್‌ಗಳಿಂದ ಗಿಲ್ಲಿ ನಟ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಸೂರಜ್, ಚಂದ್ರಪ್ರಭ ಕೂಡ ಈ ಶೋನಲ್ಲಿ ಭಾಗಿ ಆಗಲಿದ್ದಾರಂತೆ.
711
ಚರಿತ್ ಬಾಳಪ್ಪ
‘ಲವ ಲವಿಕೆ’ ಹಾಗೂ ಮುದ್ದುಲಕ್ಷ್ಮೀ ಧಾರಾವಾಹಿ ನಟ ಚರಿತ್ ಬಾಳಪ್ಪ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ.
811
ಕಾವ್ಯ ಶೈವ, ಸ್ಪಂದನಾ ಸೋಮಣ್ಣ
ಕೆಂಡಸಂಪಿಗೆ ಧಾರಾವಾಹಿ ನಟಿ ಕಾವ್ಯ ಶೈವ ಅವರು ‘ಕೊತ್ತಲವಾಡಿ’ ಸಿನಿಮಾದಲ್ಲಿ ನಟಿಸಿದ್ದರು. ಇವರು ಕೂಡ ದೊಡ್ಮನೆ ಪ್ರವೇಶ ಮಾಡ್ತಾರಂತೆ.
‘ಕರಿಮಣಿ’ ಧಾರಾವಾಹಿ ನಟಿ ಸ್ಪಂದನಾ ಸೋಮಣ್ಣ ಕೂಡ ಭಾಗವಹಿಸಿದ್ದಾರಂತೆ.
ರಾಮಾಚಾರಿ ಧಾರಾವಾಹಿ ನಟಿ ದೇವಿಕಾ ಭಟ್, ಮೌನ ಗುಡ್ಡೇಮನೆ ಕೂಡ ಇರಲಿದ್ದಾರಂತೆ.
911
ನಟ ಧನುಷ್ ಗೌಡ, ಅಭಿಷೇಕ್ ಶ್ರೀಕಾಂತ್
ಗೀತಾ ಧಾರಾವಾಹಿ ನಟ ಧನುಷ್ ಗೌಡ, ಲಕ್ಷಣ ಧಾರಾವಾಹಿ ನಟ ಅಭಿಷೇಕ್ ಶ್ರೀಕಾಂತ್ ಕೂಡ ಭಾಗವಹಿಸಲಿದ್ದಾರಂತೆ.
1011
ಆರ್‌ಜೆ ಅಮಿತ್, ರಾಶಿಕಾ ಶೆಟ್ಟಿ
ಅಷ್ಟೇ ಅಲ್ಲದೆ ಆರ್‌ಜೆ ಅಮಿತ್ ಕೂಡ ಇರಲಿದ್ದಾರೆ. ಇನ್ನು ರಿಯಾಲಿಟಿ ಶೋನಲ್ಲಿ ಹೆಸರು ಮಾಡಿರುವ ಅನನ್ಯಾ ಅಮರ್ ಕೂಡ ಇರಲಿದ್ದಾರೆ. ‘ಮನದ ಕಡಲು’ ಸಿನಿಮಾ ನಟಿ ರಾಶಿಕಾ ಶೆಟ್ಟಿ ಕೂಡ ಇರಲಿದ್ದಾರಂತೆ.
1111
ಶ್ರೇಯಸ್ ಮಂಜು, ಅಶ್ವಿನಿ ಗೌಡ
ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಮಂಜು ಹಾಗೂ ಕನ್ನಡದ ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಅಶ್ವಿನಿ ಗೌಡ ಕೂಡ ಇರಲಿದ್ದಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.